ಮಕರ ಜ್ಯೋತಿ ಫೌಂಡೇಶನ್ ಸಾಯನ್ ಕೋಲಿವಾಡ, ಇದರ ಅಂಗಸಂಸ್ಥೆ ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ, ಇದರ 22ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ 1118 ತುಪ್ಪದ ದೀಪೋತ್ಸವ ಇದೇ ಡಿಸೇಂಬರ್ 23ರಂದು ಆಂಟೊಪ್ ಹಿಲ್ ನ ಮೋತಿಲಾಲ್ ನೆಹರು ನಗರದ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ದಿನವಿಡೀ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಕಾರ್ಯಕ್ರಮದ ವಿವರ :
ಬೆಳಿಗ್ಗೆ ಗಂಟೆ 6ಕ್ಕೆ : ನಿತ್ಯ ಶರಣು ಘೋಷ
ಗಂಟೆ 7:00ಕ್ಕೆ : ಗಣ ಹೋಮ
8 ಗಂಟೆಗೆ : ಶ್ರೀ ಸತ್ಯನಾರಾಯಣ ಮಹಾಪೂಜೆ
10:30 ರಿಂದ 12 ರ ತನಕ : ಭಜನೆ ಶ್ರೀ ಮಕರ ಜ್ಯೋತಿ ಭಜನಾ ಮಂಡಳಿ ಇವರಿಂದ
ಮಧ್ಯಾಹ್ನ 12 ರಿಂದ 1ರ ತನಕ : ಮಹಾಪೂಜೆ
1ರಿಂದ 3:30ರ ತನಕ : ಮಹಾ ಅನ್ನದಾನ
ಮಧ್ಯಾಹ್ನ 1ಗಂಟೆಯಿಂದ : ಭಜನೆ – ಬ್ರಾಮರಿ ಭಜನಾ ಮಂಡಳಿ ದೋಂಬಿವಿಲಿ ಮತ್ತು ಏಕನಾಥೇಶ್ವರಿ ಭಜನಾ ಮಂಡಳಿ ದೇವಾಡಿಗ ಸಂಘ ಮುಂಬೈ ಇವರಿಂದ
ಸಂಜೆ 4:30 ರಿಂದ : ಮಕರ ಜ್ಯೋತಿ ಫೌಂಡೇಶನ್ ನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
6 ಗಂಟೆಯಿಂದ : ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ (1118 ತುಪ್ಪದ ದೀಪಗಳಿಂದ ಅಲಂಕೃತ ಭವ್ಯ ಮಂಟಪ )
6:30 ರಿಂದ : ಹಳದಿ ಕುಂಕುಮ
7ರಿಂದ 8.30ರ ತನಕ : ಸಭಾ ಕಾರ್ಯಕ್ರಮ
8:30 ರಿಂದ : ನಾಟಕ ” ಗುಣ ನೋಡಿ ಹೆಣ್ಣು ಕೊಡಿ ” – ಮಕರ ಜ್ಯೋತಿ ಫೌಂಡೇಶನ್ ನ ಕಲಾವಿದರಿಂದ.
ತಾವೆಲ್ಲರೂ ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು-ಮನ -ಧನಗಳಿಂದ ಸಹಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು,ಮಕರ ಜ್ಯೋತಿ ಫೌಂಡೇಶನ್ ನ ಗೌರವ ಅಧ್ಯಕ್ಷರಾದ ಮಹದೇವ ಎನ್ ಮೇಸ್ತ ಶಿರೂರು, ಅಧ್ಯಕ್ಷರಾದ ಚಂದ್ರ ದೇವಾಡಿಗ ನಾಗೂರು, ಉಪಾಧ್ಯಕ್ಷರಾದ ಸತೀಶ್ ದೇವಾಡಿಗ ಮಹಾಬಲೇಶ್ವರ, ಕಾರ್ಯದರ್ಶಿ ಕೃಷ್ಣಮೂರ್ತಿ ಎನ್ ಮೇಸ್ತ ಶಿರೂರು, ಉಪ ಕಾರ್ಯದರ್ಶಿ ಸಂತೋಷ್ ದೇವಾಡಿಗ ಮಹಾಬಲೇಶ್ವರ, ಖಜಾಂಚಿ ಬಾಬು ದೇವಾಡಿಗ ಮಲ್ಲೂರ್ ಕೇರಿ ಮತ್ತು ಸದಸ್ಯರು ವಿನಂತಿಸಿದ್ದಾರೆ.