
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಪ್ರತಿ ವರ್ಷ ನೀಡುವ ಮೂಲತ್ವ ವಿಶ್ವ ಪ್ರಶಸ್ತಿಗೆ ಈ ಬಾರಿ ಜೀವ ರಕ್ಷಕ, ಖ್ಯಾತ ಈಜು ತಜ್ಞ ಈಶ್ವರ ಮಲ್ಪೆ ಅವರು ಆಯ್ಕೆಯಾಗಿದ್ದಾರೆ.
ಡಿಸೇಂಬರ್ 29ರಂದು ಬೆಳಿಗ್ಗೆ 10ಗಂಟೆಗೆ ಮಂಗಳೂರು ಕೊಡಿಯಲ್ ಬೈಲ್ ನ ಶಾರದಾ ವಿದ್ಯಾಲಯದ ಸಭಾಗ್ರಹದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈಶ್ವರ ಮಲ್ಪೆ ಅವರಿಗೆ ಹತ್ತನೇ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಪ್ರಧಾನಿಸಲಾಗುವುದು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್, ಕಾಲೇಜ್ ಆಫ್ ಫಿಶರೀಶ್, ಮಂಗಳೂರು ಇದರ ಡೀನ್ ಡಾ. ಎಚ್ ಎನ್ ಆಂಜನೇಯಪ್ಪ, ಶಾರದಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಂಗಳೂರು ಇದರ ಅಧ್ಯಕ್ಷ ಡಾ. ಎಂ ಬಿ ಪುರಾಣಿಕ್, ಪದ್ಮಶ್ರೀ ಹರೇಕಳ ಹಾಜಬ್ಬ ಅಕ್ಷರಸಂತ, ಮಂಗಳೂರು, ಉಡುಪಿ ಕಟಪಾಡಿಯ ಸಮಾಜಸೇವಕ ರವಿ ಕಟಪಾಡಿ, ಡೈಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ರೂವಾರಿ ವಾಲ್ಟರ್ ನಂದಳಿಕೆ, ಮೊಗವೀರ ಮಹಾಜನ ಸಭಾ ಉಚ್ಚಿಲ, ಇದರ ಉಪಾಧ್ಯಕ್ಷ ಮೋಹನ್ ಬೆಂಗರೆ ಇವರೆಲ್ಲರ ಗಣ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಪ್ರಧಾನಿಸಲಾಗುವುದು.

ಮೂಲತ್ವ ವಿಶ್ವ ಪ್ರಶಸ್ತಿಯ ತೀರ್ಪುಗಾರರಾಗಿ ಪ್ರಕಾಶ್ ಮೂಲತ್ವ, ಪ್ರೊಫೆಸರ್ ರಾಜ್ ಮೋಹನ್ ರಾವ್, ಲೋಲಾಕ್ಷಿ ಫೆರ್ನಾಂಡಿಸ್, ರವಿ ಕಟಪಾಡಿ, ಸುಮಂತ್ ರೈ ಮತ್ತು ಪ್ರೇಮ್ ರಾಜ್ ಕರ್ತವ್ಯ ನಿರ್ವಹಿಸಿರುವರು.
ಇಷ್ಟರ ತನಕ ಮೂಲತ್ವ ವಿಶ್ವ ಪ್ರಶಸ್ತಿ ಪಡೆದ ಸಾಧಕರು :
ಪದ್ಮಶ್ರೀ ಹರೇಕಳ ಹಾಜಬ್ಬ, ಮಂಗಳೂರು (2015), ಪದ್ಮಶ್ರೀ ಸುಹಾಸಿನಿ ಮಿಸ್ತ್ರಿ ವೆಸ್ಟ್ ಬೆಂಗಾಲ್ (2016), ಪದ್ಮಶ್ರೀ ದಿ. ಸಿಂಧೂ ತಾಯಿ ಸಕ್ಪಲ್ ಮಹಾರಾಷ್ಟ್ರ (2017) ಟಿ ಆಟೋ ರಾಜ ಬೆಂಗಳೂರು (2018), ಪದ್ಮಶ್ರೀ ಡಾ.ಪ್ರಕಾಶ್ ಅಮ್ಟೆ – ಡಾ. ಮಂದಾಕಿನಿ ಅಮ್ಟೆ ನಾಗಪುರ,ಮಹಾರಾಷ್ಟ್ರ (2019), ರವಿ ಕಟಪಾಡಿ, ಉಡುಪಿ ಕರ್ನಾಟಕ (2020), ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಅಂಕೋಲಾ ಕಾರವಾರ ಕರ್ನಾಟಕ (2021), ಪದ್ಮಶ್ರೀ ಶ್ರೀಮತಿ ಸುನಿತಾ ಕೃಷ್ಣನ್ ತೆಲಂಗಾಣ(2022), ಪದ್ಮಶ್ರೀ ಶ್ರೀಮತಿ ಪೂಲನ್ ಬಾಸನ್ ಬಾಯಿ ಯಾದವ್ ರಾಜ ನಂದಗಾವ್ ಛತ್ತಿಸ್ ಘಡ್ (2023)
ಕಾರ್ಯಕ್ರಮ :
ಬೆಳಿಗ್ಗೆ 10ಗಂಟೆಯಿಂದ – 11.30ರ ತನಕ ಮೂಲತ್ವ ವಿಶ್ವ ಪ್ರಶಸ್ತಿ ಪ್ರಧಾನ 2024
11.30ರಿಂದ – 12 ರ ತನಕ – ಈಶ್ವರ್ ಮಲ್ಪೆ ಅವರೊಂದಿಗೆ ಸಂವಾದ.
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಪ್ರಕಾಶ್ ಮೂಲತ್ವ, ಶ್ರೀಮತಿ ಕಲ್ಪನಾ ಪಿ ಕೋಟ್ಯಾನ್ ಶ್ರೀಮತಿ ಶೈನಿ, ಲಕ್ಷ್ಮೀಶ ಪಿ ಕೋಟ್ಯಾನ್, ಶ್ರೀಮತಿ ಅಕ್ಷತಾ ಕದ್ರಿ ಮತ್ತು ಸದಸ್ಯರು, ಸಮಾರಂಭಕ್ಕೆ ಎಲ್ಲರಿಗೆ ಸ್ವಾಗತ ಕೋರಿದ್ದಾರೆ.
ಹೆಚ್ಚಿನ ವಿವರಗಳಿಗೆ ಮೊಬೈಲ್ ಕ್ರಮಾಂಕ : 9036478093, ಸಂಪರ್ಕಿಸಬಹುದು.