September 6, 2026
Mumbai News Kannada
ಪ್ರಕಟಣೆ

ಸಾಫಲ್ಯ ಸೇವಾ ಸಂಘ ಮುಂಬೈ(ರಿ) ಆ.3 ರಂದು ಬಂಟರ ಭವನದಲ್ಲಿ ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ದಿನ





ಸಾಫಲ್ಯ ಸೇವಾ ಸಂಘದ ಮಹಿಳಾ ವಿಭಾಗದ ಆಯೋಜನೆಯಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮವು ರವಿವಾರ ತಾ. 03/08/2025 ರಂದು ಮಧ್ಯಾಹ್ನ ಗಂಟೆ 2 ರಿಂದ ಕುರ್ಲಾ (ಪೂ)ದಲ್ಲಿರುವ ಬಂಟರ ಸಂಘದ ಅನೆಕ್ಸ್ ಹಾಲಿನಲ್ಲಿ ನಡೆಯಲಿದೆ.

ಸಭಾ ಸಮಾರಂಭವು ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮೀ ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅತಿಥಿಗಳಾಗಿ ಉದ್ಯಮಿ ಚೇತನ ವಿಜಯ ಅಮೀನ್, ಸಂಘದ ಹಿರಿಯ ಸದಸ್ಯ ಶಾರದಾ ಹೆಜಮಾಡಿ, ಲೇಖಕಿ ಸರ್ವಮಂಗಳ ಎನ್ ಶೆಟ್ಟಿ, ಶಿಕ್ಷಕಿ ದೀಪ ಹರೀಶ್ ಶೆಟ್ಟಿ ಇವರುಗಳು ಆಗಮಿಸಲಿದ್ದಾರೆ.

ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮೀ ಮೆಂಡನ್, ಮಹಿಳಾ ವಿಭಾಗದ ಸದಸ್ಯೆಯರು, ಆಡಳಿತ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಾರಂಭವು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಪ್ರಾರಂಭಗೊಳ್ಳಲಿದೆ.
ಅಂದು ಆಷಾಢ ಮಾಸದ ವಿಶೇಷ ಖಾದ್ಯ ಪದಾರ್ಥಗಳ ಸ್ಪರ್ಧೆ, ತ್ಯಾಜ್ಯ ನಿರ್ವಹಣೆ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು ಈ ವಿಶೇಷ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ, ಉಪಾಧ್ಯಕ್ಷರಾದ ಕುಮಾರ್ ಬಂಗೇರ, ಗೌ. ಪ್ರ. ಕಾರ್ಯದರ್ಶಿ ಭಾಸ್ಕರ್ ಸಪಳಿಗ, ಕೋಶಾಧಿಕಾರಿ ಹೇಮಂತ್ ಸಪಳಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮೀ ಮೆಂಡನ್ ಮತ್ತು ಪದಾಧಿಕಾರಿಗಳು, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ಪುತ್ರನ್ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Related posts

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಯಲ್ಲಿ ಕಾರ್ತಿಕ ಮಾಸದ ದೀಪೋತ್ಸವ

Mumbai News Desk

ಬೋಂಬೆ ಬಂಟ್ಸ್ ಅಸೋಷಿಯೇಶನ ಮಾ.9ರಂದ 41 ನೇ ಮಹಾಸಭೆ, ಸಾಧಕರಿಗೆ ಸನ್ಮಾನ! ಮಾಜಿ ಅಧ್ಯಕ್ಷರುಗಳಿಗೆ ಗೌರವ!

Mumbai News Desk

ಶ್ರೀ ಹಟ್ಟಿಯಂಗಡಿ ಮೇಳದ ಹನ್ನೆರಡನೇ ವರ್ಷದ ಮುಂಬಯಿ ಪ್ರವಾಸ: ಜುಲೈ 10 ರಿಂದ 25 ರವರೆಗೆ ಯಕ್ಷಗಾನ ವೈಭವ

Mumbai News Desk

ಜ. 5, ತುಳು ಸಂಘ ಬೊರಿವಲಿ ಯುವ ವಿಭಾಗದ ವತಿಯಿಂದ ಮ್ಯಾರಥಾನ್

Mumbai News Desk

ನ. 21, 22 ರಂದು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ, ಡೊಂಬಿವಲಿಯ 67ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk