September 6, 2026
Mumbai News Kannada
ಪ್ರಕಟಣೆ

ಭಂಡಾರಿ ಸೇವಾ ಸಂಘ ಮುಂಬಯಿ : ಡಿ. 8ರಂದು “ಪಾಂಚಜನ್ಯ ” ವಾರ್ಷಿಕ ಕುಟುಂಬ ಕೂಟ





ಮುಂಬೈಯ ಪ್ರತಿಷ್ಠಿತ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಭಂಡಾರಿ ಸೇವಾ ಸಮಿತಿಯ ವಾರ್ಷಿಕ ಕುಟುಂಬ ಕೂಟ ” ಪಾಂಚಜನ್ಯ ” ಡಿಸೆಂಬರ್ 8ರಂದು ಆದಿತ್ಯವಾರ ಕುರ್ಲಾ ಪೂರ್ವ ಬಂಟರ ಭವನದ ಸಭಾಗ್ರಹದಲ್ಲಿ ಬೆಳಿಗ್ಗೆ 9:00ಗಂಟೆಯಿಂದ ಸಂಜೆ 4:30ರ ತನಕ ವೈವಿದ್ಯಮ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಅಶೋಕ್ ಭಂಡಾರಿ ( ಪರ್ಕ್ಸ್ ಲಿಂಕ್ಸ್ & ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ) ಇವರು ಉಪಸ್ಥಿತರಿರುವರು.

ಕಾರ್ಯಕ್ರಮಗಳ ವಿವರ :

ಸಮಿತಿ ಸದಸ್ಯರಿಂದ ಭಜನೆ ( Spiritual Time )
ವೆಂಕಟೇಶ್ ರಾವ್ ಅವರಿಂದ ಹಳೇ ಬಾಲಿವುಡ್ ಗಾಯನ (Old Is Gold)

ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆ (Dance, Song, Skit, Video Reels,, Motivational Speech and Musical Instruments )

ದಶವತಾರ (Group Dance By Children & Youth Bhandhavas )

ತ್ರಿನೇತ್ರ (Fire Side Chat With Dr. Sucheta, Adv. Shekar Bhandary & Suresh Bhandary, Prop : Style U Salon)

ಯೋಗ ಜೈ ಹೊ (By Yoga Guru Jayasheel & Troup )
ಕೋಟಿ ಚೆನ್ನಯ (Tulu Drama Spreading The Essence Of Tulunadu )
ರಾಕ್ ದ ಸ್ಟೇಜ್ (DJ Event Open to All in The Audience )

ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಷಿಕ ಕುಟುಂಬ ಕೂಟದಲ್ಲಿ ಉಪಸ್ಥಿತರಿರುವಂತೆ ಸಂಘದ ಅಧ್ಯಕ್ಷ ರಂಜಿತ್ ಭಂಡಾರಿ, ಗೌರವ ಕಾರ್ಯದರ್ಶಿ ಸುನಿಲ್ ಭಂಡಾರಿ, ಗೌರವ ಕೋಶಾಧಿಕಾರಿ ಕಾರ್ತಿಕ್ ಭಂಡಾರಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಶೀಲ್ ಭಂಡಾರಿ ಕೇಳಿಕೊಂಡಿದ್ದಾರೆ.
ಸಂಘದ ಉಪಾಧ್ಯಕ್ಷರುಗಳಾದ ಕೇಶವ ಭಂಡಾರಿ, ಪುರುಷೋತ್ತಮ ಭಂಡಾರಿ, ಜೊತೆ ಕಾರ್ಯದರ್ಶಿ ರಮೇಶ್ ಭಂಡಾರಿ, ಜೊತೆ ಕೋಶಾಧಿಕಾರಿ ಎಸ್ ಎಸ್ ಭಂಡಾರಿ, ಹಿರಿಯ ಸದಸ್ಯರುಗಳಾದ ರಮೇಶ್ ವಿ ಭಂಡಾರಿ, ರುಕ್ಮಯ್ಯ ಬಿ, ರಮೇಶ್ ಎನ್ ಭಂಡಾರಿ, ಕರುಣಾಕರ್ ಭಂಡಾರಿ, ಶೀನ ಭಂಡಾರಿ, ರಾಕೇಶ್ ಭಂಡಾರಿ, ಪ್ರಕಾಶ್ ಭಂಡಾರಿ, ಸಲಹಾ ಸಮಿತಿಯ ನ್ಯಾಯವಾದಿ ಆರ್ ಎಂ ಭಂಡಾರಿ, ನ್ಯಾಯವಾದಿ ಶೇಖರ್ ಭಂಡಾರಿ, ಪ್ರಭಾಕರ್ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಸುಧ ಭಂಡಾರಿ, ಉಪಕಾರ್ಯಧ್ಯಕ್ಷೆ ಲತಾ ಭಂಡಾರಿ, ಗೌರವ ಕಾರ್ಯದರ್ಶಿ ಪ್ರೇಮ ಭಂಡಾರಿ, ಹಿರಿಯ ಸದಸ್ಯರುಗಳಾದ ಶಾಲಿನಿ ಭಂಡಾರಿ, ಪಲ್ಲವಿ ರಂಜಿತ್, ರೇಖಾ ಭಂಡಾರಿ ಹಾಗೂ ಸದಸ್ಯ ಉಷಾ ಭಂಡಾರಿ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ.



Related posts

ವಸಾಯಿ ಕರ್ನಾಟಕ ಸಂಘ : ಜ.26 ರಂದು 38ನೇ ವಾರ್ಷಿಕ ಮಹಾಸಭೆ,

Mumbai News Desk

ಜ.10ಕ್ಕೆ ಪುರಭವನದಲ್ಲಿ “ಗರುಡ ಪಂಚಮಿ” 50ರ ಸಂಭ್ರಮ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ “ರಂಗ ಕಲಾಬಂಧು” ಬಿರುದು ಪ್ರದಾನ

Mumbai News Desk

ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘ : ನ. 17 ಮತ್ತು 18ಕ್ಕೆ ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣೆ.

Mumbai News Desk

ಬೊರಿವಲಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ನಾಗರ ಪಂಚಮಿ ಉತ್ಸವ

Mumbai News Desk

ಜೂಲೈ 21 ರಂದು ಬೊಯಿಸರ್ ನ  ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ  ಗುರುಪೂರ್ಣಿಮೆ ಆಚರಣೆ 

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ :

Mumbai News Desk