
ಘಾಟ್ಕೋಪರ್ ಪಶ್ಚಿಮ , ರೈಫಲ್ ರೇಂಜ್ ರೋಡ್ ಜಗದುಶಾ ನಗರದ ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನದ 45ನೇ ವಾರ್ಷಿಕ ಮಹಾಪೂಜಾ ಉತ್ಸವವು 2025ರ, ಜನವರಿ 4ರಂದು ಜರಗಲಿದೆ.
ಕಾರ್ಯಕ್ರಮ :
ಬೆಳಿಗ್ಗೆ 5 ಗಂಟೆಗೆ : ಸ್ವಸ್ತಿ ಪುಣ್ಯಾಹ
ಗಂಟೆ 6 ಕ್ಕೆ : ನಿತ್ಯ ಪೂಜೆ
ಗಂಟೆ 7ಕ್ಕೆ : ನವಕ ಕಲಶ ಪೂಜೆ
7.30 ಗಂಟೆಗೆ : ಗಣ ಹೋಮ
8.00ಗಂಟೆಗೆ : ನವಗ್ರಹ ಶಾಂತಿ
ಬೆಳಿಗ್ಗೆ 9 ಗಂಟೆಗೆ : ಕಲಶಾಭಿಷೇಕ
10 ರಿಂದ ಮಧ್ಯಾಹ್ನ 12ರ ತನಕ : ಶ್ರೀ ಸತ್ಯ ನಾರಾಯಣ ಮಹಾಪೂಜೆ.
ಮಧ್ಯಾಹ್ನ 1ರಿಂದ ಸಂಜೆ 6.30ರ ತನಕ : ಶನಿ ಗ್ರಂಥ ಪಾರಾಯಣ, ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ, ಅನ್ನ ಪ್ರಸಾದ ವಿತರಣೆ.
ಅಂದು ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಸಹಕುಟುಂಬ, ಬಂಧು-ಮಿತ್ರ ಸಮೇತರಾಗಿ, ಚಿತೈಸಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸುವಂತೆ, ಸಮಿತಿಯ ಕಾರ್ಯಧ್ಯಕ್ಷ ಸಂತೋಷ್ ಸಾಬ್ಳೆ, ಉಪ ಕಾರ್ಯಧ್ಯಕ್ಷ ಜಿ ಕೂಸಪ್ಪ, ಅಧ್ಯಕ್ಷ ಶಂಕರ್ ಎನ್ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಪುಷ್ಪ ಕೆ ಕೋಟ್ಯಾನ್, ಗೌರವ ಕೋಶಾಧಿಕಾರಿ ಪ್ರಕಾಶ್ ಎಸ್ ಪೂಜಾರಿ, ಉಪಾಧ್ಯಕ್ಷ ಸೋಮನಾಥ್ ಜೆ ಪೂಜಾರಿ, ಜೊತೆ ಕಾರ್ಯದರ್ಶಿ ಪ್ರಮೋದ್ ಎಸ್ ಪೂಜಾರಿ, ಜೊತೆ ಕೋಶಾಧಿಕಾರಿ ಯಶೋದ ಎಸ್ ಪೂಜಾರಿ, ಪ್ರಧಾನ ಅರ್ಚಕರಾದ ಪವಿತ್ರ ಭಟ್ ಮತ್ತು ಎಲ್ಲಾ ಸದಸ್ಯರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ : 88 28198783/ 9082078595 ಸಂಪರ್ಕಿಸಬಹುದು.
