ಮುಂಬೈ ಮಹಾನಗರದ ಅಪೂರ್ವ ಸಂಘಟಕ, ಪತ್ರಕರ್ತ, ಕುಲಾಲ ಪ್ರತಿಷ್ಠಾನ ಮಂಗಳೂರು, ಮುಂಬೈ, ಇದರ ಪ್ರವರ್ತಕ ಬಿ .ದಿನೇಶ್ ಕುಲಾಲ್ ಅವರಿಗೆ ಡಿಸೆಂಬರ್ 22ರಂದು ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಮಠಾಧೀಶರಾಗಿರುವ ಪುತ್ತಿಗೆ ಮಠಾಧೀಶರಾಗಿರುವ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕೃಷ್ಣ ಅನುಗ್ರಹ ಪ್ರಸಾದ ಎಂಬ ಪ್ರಶಸ್ತಿಯೊಂದಿಗೆ ಬಂಗಾರದ ಶ್ರೀ ಕೃಷ್ಣನ ಪದಕವನ್ನು ನೀಡಿ ಸನ್ಮಾನಿಸಿದರು.,
ಶ್ರೀ ಸುಬ್ರಹ್ಮಣ್ಯ ಮಠಾಧೀಶರು, ಪುತ್ತಿಗೆ ಮಠದ ಕಿರಿಯ ಸ್ವಾಮೀಜಿಗಳು ಮತ್ತು ವಿದ್ವಾಂಸರುಗಳು ದಿವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿನೇಶ್ ಕುಲಾಲ್ ಅವರ ಸಂಘಟನಾ ಚತುರತೆಗೆ ಶ್ರೀ ಕೃಷ್ಣ ಅನುಗ್ರಹಿಸಲಿ.ಓರ್ವ ಪತ್ರಕರ್ತನಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವುದರೊಂದಿಗೆ, ಯಶಸ್ವಿ ಸಂಘಟಕನಾಗಿ ಸೇವಾ ನಿರತರಾದ ದಿನೇಶ್ ಕುಲಾಲ್ ಅವರಿಗೆ ಮುಂಬಯಿ ನ್ಯೂಸ್ ನ ನಿರ್ದೇಶಕರಾದ ಕುಮಾರ್ ಎನ್ ಬಂಗೇರ ಮತ್ತು ಮುಂಬೈ ನ್ಯೂಸ್ ತಂಡದವರಿಂದ ಹಾರ್ಧಿಕ ಅಭಿನಂದನೆಗಳು.
