ಕಲಂಬೋಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆ ಇದರ 35ನೇ ವರ್ಷದ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆಯ ಕೆ ಎಲ್ 2 ಕಾಂಪೌಂಡ್ ಕಲಂಬೋಲಿ ಇಲ್ಲಿ ಡಿ14 ರಂದು ವಿಜೃಂಭಣೆಯಿಂದ ನಡೆಯಿತು,
ಬೆಳಿಗ್ಗೆ ನಿತ್ಯಶರಣು ಘೊಷ, ಗಣ ಹೋಮ, ಸಹಸ್ರನಾಮ ಅರ್ಚನೆ ಜರಗಿದ ಬಳಿಕ ಮಂಡಳಿಯವರಿಂದ ಭಜನೆ ಹಾಗೂ ಖ್ಯಾತ ಗಾಯಕ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಪ್ರಭು ಇವರ ಸುಮಧುರ ಕಂಠದಿಂದ ಭಕ್ತಿರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪರಿಸರದ ಪುಟಾಣಿ ಮಕ್ಕಳಿಂದ ವೈವಿಧ್ಯಮಯ ನೃತ್ಯ ಹಾಗೂ ಶ್ರೀ ಆದಿ ಧೂಮಾವತಿ ದೇಯಿ ಬೈದೆದಿ ಯಕ್ಷಗಾನ ಮಂಡಳಿ ಗೆಜ್ಜೆಗಿರಿ ಇವರಿಂದ ಮಹಿಮೆದ ಕಲ್ಕುಡ ಕಲ್ಲುಟ್ಟಿ ಎಂಬ ಯಕ್ಷಗಾನ ಬಯಲಾಟವು ವಿಜೃಂಭಣೆಯಿಂದ ಜರುಗಿತು,
ಯಕ್ಷಗಾನದ ಮಧ್ಯೆ ಕಿರು ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಗೌರವಧ್ಯಕ್ಷ ಸದಾನಂದ ಡಿ ಶೆಟ್ಟಿ, ಅಧ್ಯಕ್ಷ ರವೀಶ್ ಜಿ ಶೆಟ್ಟಿ, ಸಂಸ್ಥಾಪಕ ಗುರುಸ್ವಾಮಿ ವಿಠ್ಠಲ್ ಕೆ ಬಂಗೇರ,ಉಪಾಧ್ಯಕ್ಷರಾದ ಶಿವರಾಂ ಕೋಟ್ಯಾನ್, ಕೋಶಾಧಿಕಾರಿ ಗಂಗಾಧರ್ ರೈ ಸ್ವಾಮಿ, ಅಮರ ಗುರುಸ್ವಾಮಿ, ಮಹಿಳಾ ವಿಭಾಗದ ಅಧ್ಯಕ್ಷೆ ರೇವತಿ ಪೂಜಾರಿ ಇವರುಗಳು ಉಪಸ್ಥಿತರಿದ್ದರು.
35 ವರ್ಷಗಳಿಂದ ಸದಾ ಸಂಸ್ಥೆಗೆ ತನು ಮನ ಧನದಿಂದ ಅನ್ನದಾನ ಸೇವೆಯನ್ನು ನೀಡಿದಂತಹ ಸಂಸ್ಥಯ ಗೌರವ ಅಧ್ಯಕ್ಷ ಸದಾನಂದ ಡಿ ಶೆಟ್ಟಿ ಪರಿವಾರ ಹಾಗೂ ಕಾಂದೆಶ್ ಭಾಸ್ಕರ್ ಶೆಟ್ಟಿ ಪರಿವಾರ ಇವರಿಗೆ ಹಾಗೂ ಸಂಸ್ಥೆಯ ಸ್ಥಾಪಕ ಸದಸ್ಯರು ಗುರುಸ್ವಾಮಿಗಳು ಆದ ವಿಠ್ಠಲ್ ಕೆ ಬಂಗೇರ ಗುರುಸ್ವಾಮಿ, ಪರಿವಾರ ಇವರುಗಳಿಗೆ ಫಲ ಪುಷ್ಪ, ಶಾಲು, ಪೇಟ ನೀಡಿ ಗೌರವ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ 85% ಹೆಚ್ಚುಗೆ ಅಂಕ ಪಡೆದ ಮಕ್ಕಳಿಗೆ ಗೌರವ ಧನದೊಂದಿಗೆ ಪುರಸ್ಕರಿಸಲಾಯಿತು. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಂಸ್ಥೆಗೆ ನಿರಂತರವಾಗಿ ಯಕ್ಷಗಾನ ಸೇವೆಯನ್ನು ನೀಡಿದ ದಿನೇಶ್ ಹೆಗಡೆ, ಸುಧಾಕರ್ ಶೆಟ್ಟಿ ಇವರಿಗೂ ಸನ್ಮಾನ ಮಾಡಲಾಯಿತು. ಪ್ರತಿ ವರ್ಷ ಪೂಜೆಗೆ ದೊಡ್ಡ ಮೊತ್ತವನ್ನು ಇಟ್ಟು ಸಹಕರಿಸಿದ ಎಲ್ಲಾ ಸದಸ್ಯರಿಗೂ ಪುಷ್ಪ ಗೌರವವನ್ನು ನೀಡಿ ಗೌರವಿಸಲಾಯಿತು. ಗೆಜ್ಜಗಿರಿ ಮೇಳದ ಹೆಮ್ಮೆಯ ಕಲಾವಿದ ಜಗದೀಶ್ ಆಚಾರ್ಯ ಬೋಳಂತೂರು ಅವರನ್ನು ಸನ್ಮಾನಿಸಲಾಯಿತು. ಹಾಗೂ ಗೆಜ್ಜೆ ಗಿರಿ ಮೇಲದ ಸಂಚಾಲಕರು ನವೀನ್ ಪಡು ಇನ್ನಾ, ಸಂಸ್ಥೆಯ ಅಧ್ಯಕ್ಷ ರವೀಶ್ ಜಿ ಶೆಟ್ಟಿ, ಹಾಗೂ ಗೌರವ ಕಾರ್ಯದರ್ಶಿ ಅವರನ್ನು ಶಾಲು, ಪೇಟ ಸ್ಮರಣಿಕೆ ಇತ್ತು ಸನ್ಮಾನಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಸುಜಿತ್( ಲಕ್ಷ್ಮೀಶ) ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮವು ವಿಶೇಷವಾಗಿ ವಿಜ್ರಂಭಣೆಯಿಂದ ಮೂಡಿಬಂದಿದ್ದು ,
ನವಿ ಮುಂಬಯಿ ಹಾಗೂ ಮುಂಬೈಯ ವಿವಿಧ ಉಪನಗರ ದಿಂದ ಉದ್ಯಮಿಗಳು, ರಾಜಕೀಯ ಮುಖಂಡರು, ಸಮಾಜ ಸೇವಕರು, ಅಯ್ಯಪ್ಪ ಭಕ್ತರು ಪಾಲ್ಗೊಂಡು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿದರು.
ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥ ಕಲಂಬೋಲಿ ಇದರ
ಗೌರವ ಅಧ್ಯಕ್ಷ ಸದಾನಂದ ಡಿ ಶೆಟ್ಟಿ, ಅಧ್ಯಕ್ಷ
ರವೀಶ್ ಜಿ ಶೆಟ್ಟಿ ಗುರುಸ್ವಾಮಿ, ವಿಠ್ಠಲ್ ಕೆ ಬಂಗೇರ ಗುರುಸ್ವಾಮಿ, ಉಪಾಧ್ಯಕ್ಷ ಶಿವರಾಮ್ ಕೋಟ್ಯಾನ್,
ಗೌರವ ಪ್ರಧಾನ ಕಾರ್ಯದರ್ಶಿ ಸುಜಿತ್ (ಲಕ್ಷ್ಮೀಶ) ವಿ ಪೂಜಾರಿ, ಜೊತೆ ಕಾರ್ಯದರ್ಶಿ ಜಯಶ್ರೀ ಬಂಗೇರ
ಕೋಶಾಧಿಕಾರಿ ಗಂಗಾಧರ್ ರೈ,
ಜೊತೆ ಕೋಶಾಧಿಕಾರಿಸುಧಾಕರ್ ಶೆಟ್ಟಿ,
ಮಹಿಳಾ ವಿಭಾಗದ ಅಧ್ಯಕ್ಷೆ ರೇವತಿ ಬಿ ಪೂಜಾರಿ
ಯುವ ವಿಭಾಗದ ಅಧ್ಯಕ್ಷ ಭವಿತ್ ಕೋಟ್ಯಾನ್,
ಹಾಗೂ ಸಂಸ್ಥೆಯ ಸಲಹಾ ಸಮಿತಿ ಎಲ್ಲಾ ಪದಾಧಿಕಾರಿಗಳು ಮಹಿಳಾ ವಿಭಾಗ, ಯುವ ವಿಭಾಗದ ವರು ಸಹಕರಿದರು.