ಹಳೆಯಂಗಡಿ:ಮುಲ್ಕಿ ಅರಸು ಕಂಬಳ ಸಮಿತಿ ವತಿಯಿಂದ ಮುಂಬೈ ಉದ್ಯಮಿ, ಬಂಟರ ಸಂಘ ಮುಂಬಯಿ, ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ, ಕಂಬಳ ಪೊಷಕರು ಹಾಗೂ ಸಮಾಜ ಸೇವಕರಾದ ಬಳ್ಳುಂಜೆಗುತ್ತು ಗುತ್ತಿನಾರ್ ರವೀಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು,ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಸಚಿವರಾದ ರಮಾನಾಥ ರೈ, ಅಭಯ ಚಂದ್ರ ಜೈನ್,ಜಾಗತಿಕ ಬಂಟರ ಸಂಘದ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಭಾರತ್ ಬ್ಯಾಂಕ್ ನ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ಗುಣಪಾಲ ಕಡಂಬ, ಡಾ.ಅಮರಶ್ರೀ ಅಮರನಾಥ ಶೆಟ್ಟಿ, ಜಗದೀಶ್ ಅಧಿಕಾರಿ, ಸುಚರಿತ ಶೆಟ್ಟಿ, ಗುರುರಾಜ್ ಎಸ್ ಪೂಜಾರಿ, ಲೋಕೇಶ್ ಮುಚೂರು, ಶರತ್ ಸಾಲ್ಯಾನ್,ಯೋಗೀಶ್ ಜೆಪ್ಪು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ರವಿ ಶೆಟ್ಟಿ ಕತಾರ್, ರತ್ನಾಕರ ಜೈನ್, ನಿಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಐಕಳ ಕಂಬಳ ಸಮಿತಿಯ ಚಿತ್ತರಂಜನ್ ಭಂಡಾರಿ, ಸುಗಂಧಿ ದಿನೇಶ್ ಕೊಂಡಾಣ, ಉದ್ಯಮಿ , ಪದ್ಮರಾಜ್ ಪೂಜಾರಿ ಮಂಗಳೂರು, ಮುಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಅಧ್ಯಕ್ಷ ಕಿರಣ್ ಶೆಟ್ಟಿ ಕೊಲ್ನಾಡುಗುತ್ತು, ಪ್ರಧಾನ ಕಾರ್ಯದರ್ಶಿ ಶ್ಯಾಮ್ ಪ್ರಸಾದ್,ಉಪಾಧ್ಯಕ್ಷ ದಿನೇಶ್ ಸುವರ್ಣ ಬೆಳ್ಳಾಯಾರು,ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ವಿನೋದ್ ಸಾಲ್ಯಾನ್ ಬೆಳ್ಳಾಯರು, ಪ್ರೇಮಲತಾ ಯೋಗೀಶ್ ಹಾಗೂ ಮೊದಲಾದವರು ಇದ್ದರು.