September 6, 2026
Mumbai News Kannada
ತುಳುನಾಡು

ಓಂ ಶ್ರೀ ಜಗದೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ.)ಯ ವತಿಯಿಂದ ಆಟಿದ ಪೊರ್ಲು ಕಾರ್ಯಕ್ರಮ





ಮುಂಬಯಿ : ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ.) ಬೊರಿವಲಿ ಪೂರ್ವ ಮತ್ತು ಓಂ ಶ್ರೀ ಜಗದೀಶ್ವರಿ ಇದರ ಜಂಟಿ ಆಶ್ರಯದಲ್ಲಿ ಜುಲೈ 26, ರಂದು ಸಂಜೆ ಆಟಿದ ಪೊರ್ಲು ಕಾರ್ಯಕ್ರಮವನ್ನು ಕಾಂದಿವಲಿ ಪೂರ್ವದ, ಠಾಕುರ್ ಕಾಂಪ್ಲೆಕ್ಸ್ ನ ಸುರಭಿ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.

ಸಾಂಸ್ಕೃತಿಕ ಮನರಂಜನೆಯೊಂದಿಗೆ ನಡೆದ ಆಷಾಢದ ಈ ವಿಶೇಷ ಕಾರ್ಯಕ್ರಮದಲ್ಲಿ ಲೇಖಕಿ ಲತಾ ಸಂತೋಷ್ ಶೆಟ್ಟಿ, ಹೋಟೆಲ್ ಉದ್ಯಮಿ ಹರೀಶ್ ವಿ ಸುವರ್ಣ, ಕಾಂದಿವಿಲಿ ಕನ್ನಡ ಸಂಘದ ಕಾರ್ಯದರ್ಶಿ ಸಬಿತಾ ಪೂಜಾರಿ, ಆದಿತ್ಯ ಬಿರ್ಲಾ ಮನಿ ಲಿಮಿಟೆಡ್ ನ ಸಿಇಓ ಅಶೋಕ್ ಸುವರ್ಣ, ಸುರಭಿ ಹೋಟೆಲ್ ನ ಮಾಲೀಕರಾದ ಸುಧಾಕರ್ ಶೆಟ್ಟಿ ಅತಿಥಿಗಳಾಗಿ ಆಗಮಿಸಿದ್ದರು. ಹಿರಿಯರ ಕಾಲದಲ್ಲಿ ಸೇವಿಸುತಿದ್ದಂತಹ ಅಷಾಡ ಮಾಸದ ಖಾದ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದು ಲತಾ ಸಂತೋಷ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆಷಾಢ ಮಾಸದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದರು. ಸುಧಾಕರ್ ಶೆಟ್ಟಿ ಮಾತನಾಡುತ್ತಾ ಈ ಆಟಿದ ಪೊರ್ಲು ಕಾರ್ಯಕ್ರಮದಲ್ಲಿ ಇಂತಹ ಸೊಬಗಿದೆ ಎಂದು ತಿಳಿದಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಸಬಿತಾ ಪೂಜಾರಿ ಮತ್ತು ಅಶೋಕ್ ಸುವರ್ಣ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ವೇದಿಕೆಯಲ್ಲಿ ಶ್ರೀ ಜಗದೀಶ್ವರಿ ದೇವಸ್ಥಾನದ ಸಂಸ್ಥಾಪಕ ಶೇಖರ್ ಇಂದು ಸಾಲಿಯಾನ್, ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್, ಉಪಾಧ್ಯಕ್ಷ ದಯಾನಂದ ವಾರಂಗ, ಪ್ರಧಾನ ಕಾರ್ಯದರ್ಶಿ ಸದಾಶಿವ ವಾರಂಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುರೇಶ್ ಕೋಟ್ಯಾನ್ ಮತ್ತು ಉಷಾ ಸಪಳಿಗ ನಿರೂಪಿಸಿದರು. ನಿಧಿ ಪೂಜಾರಿ ಮತ್ತು ಕರುಣೇಶ್ ಕೋಟ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಕರುಣಾಕರ ಕಾಪು ವಂದನಾರ್ಪಣೆಗೈದರು.
ನಂತರ ಮಹಿಳೆಯರು ತಂದಂತಹ ಖಾದ್ಯಗಳ ಪ್ರೀತಿ ಭೋಜನ ವ್ಯವಸ್ಥೆ ನಡೆಯಿತು. ಕಾರ್ಯಕಾರಿ ಸಮಿತಿ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಸುಂದರವಾಗಿ ಮೂಡಿ ಬಂತು.



Related posts

ಹೂಡೆ : ಶ್ರೀ ಗಜಾನನ ಬಿಲ್ಲವರ ಸೇವಾ ಸಂಘದ 101ನೇ ಭಜನಾ ಮಂಗಳೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ವೈಭವ

Mumbai News Desk

  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ  ಹೊರೆ ಕಾಣಿಕೆ   ಸಮರ್ಪಣೆ.

Mumbai News Desk

ಗುರುಪುರ ಬಂಟರ ಮಾತೃ ಸಂಘ – ಹನ್ನೊಂದನೇ ವಾರ್ಷಿಕ ಸಮಾವೇಶ

Mumbai News Desk

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ

Mumbai News Desk

ಉಡುಪಿ : ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ

Mumbai News Desk

“ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ತಳಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಹೆಜಮಾಡಿಯಲ್ಲಿ ಮಹತ್ವದ ಸಭೆ – ಡಿಜಿಟಲ್ ಮೀಡಿಯಾ ಆರಂಭ ಮತ್ತು ನೂತನ ಸದಸ್ಯರ ಸೇರ್ಪಡೆ”

Mumbai News Desk