
ಸುರತ್ಕಲ್ ನ ತಡಂಬೈಲ್ ವೆಂಕಟರಮಣ ಕಾಲೋನಿಯಲ್ಲಿ ಡಿಸೆಂಬರ್ 18ರಂದು ಮಧ್ಯಾಹ್ನ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಗಾಯಗೊಂಡಿದ್ದ ವಸಂತಿ ಹಾಗೂ ಪುಷ್ಪ ಅವರು ಚಿಕಿತ್ಸೆ ಪಲ್ಲಿಕಾರಿಯಾಗಿದೆ ಸಾವನ್ನಪ್ಪಿದ್ದಾರೆ.
ಇಬ್ಬರಿಗೂ ಕಳೆದ 9 ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುಷ್ಪ ಶೆಟ್ಟಿ ಅವರು ಡಿಸೆಂಬರ್ 26ರಂದು ಸಾವನ್ನಪ್ಪಿದ್ದರೆ, ವಸಂತಿ ಶೆಟ್ಟಿ ಯವರು ಇಂದು ಇಹಲೋಕ ತ್ಯಜಿಸಿದರು.
ಗ್ಯಾಸ್ ಸೋರಿಕೆಯಾಗಿರುವುದು ಗಮನಕ್ಕೆ ಬಾರದೆ ವಸಂತಿ ಅವರು ಅಡುಗೆ ಕೋಣೆಯಲ್ಲಿನ ಸ್ಟವ್ ಗೆ ಬೆಂಕಿ ಹಚ್ಚಿದ್ದರಿಂದ ದೊಡ್ಡ ಮಟ್ಟದ ಸ್ಪೋಟವಾಗಿ ಬೆಂಕಿ ಹತ್ತಿಕೊಂಡಿತು.ವಸಂತಿ ಅವರನ್ನು ರಕ್ಷಿಸಲು ಹೋದ ಪುಷ್ಪ ಅವರಿಗೂ ತೀವ್ರ ತರಹದ ಸುಟ್ಟ ಗಾಯವಾಗಿತ್ತು.
ಕೂಡಲೇ ಸ್ಥಳೀಯರು ಧಾವಿಸಿ ಬಂದು ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನಪ್ಪಿದ್ದಾರೆ. ಮುಂಬಯಿ ನ್ಯೂಸ್ ನ ಮಂಗಳೂರು ಪ್ರತಿನಿಧಿ ಧನಂಜಯ ಶೆಟ್ಟಿ ಅವರ ತಾಯಿ ಪುಷ್ಪ ಶೆಟ್ಟಿ ಅವರ ದುರ್ದೈವದ ಮರಣಕ್ಕೆ ಮುಂಬಯಿ ನ್ಯೂಸ್ ನ ನಿರ್ದೇಶಕ ಕುಮಾರ ಬಂಗೇರ ಮತ್ತು ಸಿಬ್ಬಂದಿ ವರ್ಗ ಸಂತಾಪ ವ್ಯಕ್ತ ಪಡಿಸಿದ್ದಾರೆ.