ಭಾರತ ಹಾಗು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಒಂದು ರೋಚಕ ಘಟ್ಟದತ್ತ ಸಾಗುತ್ತಿರುವಾಗ, ಭಾರತವನ್ನು ಸೋಲಿನಿಂದ ಪಾರು ಮಾಡಲು ಕೆಚ್ಚೆದೆಯ ಪ್ರದರ್ಶನ ನೀಡುತ್ತಿದ್ದ ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ ನೆಲದಲ್ಲಿ ಮತ್ತೊಮ್ಮೆ ಅನ್ಯಾಯವಾಯಿತಾ ಎನ್ನುವ ಅನುಮಾನ ಕಾಡಲಾರಂಬಿಸಿದೆ.
ಬಾರ್ಡರ್ ಗವಾಸ್ಕರ ಟ್ರೋಪಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ ಕಳಪೆ ಬ್ಯಾಟಿಂಗ್ ಗೆ ಬೆಲೆ ತೆತ್ತಿದೆ. ಆಸ್ಟ್ರೇಲಿಯ ವಿರುದ್ಧ 184 ರನ್ ಗಳ ಹೀನಾಯ ಸೋಲು ಕಂಡ ಭಾರತ ಸರಣಿಯಲ್ಲಿ 2-1 ಹಿನ್ನಡೆ ಅನುಭವಿಸಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 340 ರನ್ ಗಳ ಗುರಿ ಪಡೆದ ಟೀಮ್ ಇಂಡಿಯಾ ಆರಂಭಿಕ ಅಘಾತಕ್ಕೆ ಒಳಗಾಯಿತು,ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ಅವರನ್ನು ಬೇಗನೆ ಕಳೆದುಕೊಂಡಿತು. ಕೇವಲ 33 ಬ್ಯಾಟರುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೂ ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ ನಡೆಸಿದರು. ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರೂ ಮತ್ತೊಂದು ಕ್ರಿಸ್ ನಲ್ಲಿ ಗಟ್ಟಿಯಾಗಿ ನೆಲೆಯುರಿದ್ದ ಜೈಸ್ವಾಲ್ 208 ಎಷತಗಳಲ್ಲಿ 84 ರನ್ನು ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಭಾರತ ತಂಡವನ್ನು ಸೋಲಿನಿಂದ ಪಾರುಮಾಡಲು ದಿಟ್ಟ ಹೋರಾಟ ನಡೆಸುತ್ತಿದ್ದ ಯಶಸ್ವಿ ಜೈಸ್ವಾಲ್ ಪ್ಯಾಟ್ ಕಮಿನ್ಸ್ ಓವರ್ ನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಪ್ಯಾಟ್ ಕಮಿನ್ಸ್ ಎಸೆದ 71ನೇ ಓವರ್ ನ 5ನೇ ಎಸೆತವನ್ನು ಫುಲ್ ಮಾಡಲು ಯತ್ನಿಸಿದಾಗ ಚೆಂಡು ಬ್ಯಾಟ್ ತಪ್ಪಿಸಿ ವಿಕೆಟ್ ಕೀಪರ್ ಕೈ ಸೇರಿತು. ಅಸಿಸ್ ಆಟಗಾರರು ಅಂಪೈರ್ ಗೆ ಬಲವಾದ ಮನವಿ ಸಲ್ಲಿಸಿದರು, ಆದರೆ ಮೈದಾನದ ಅಂಪೈರ್ ನಾಟ್ ಔಟ್ ಎಂದು ತೀರ್ಪು ಕೊಟ್ಟರು, ಹೀಗಾಗಿ ತಂಡದ ಆಟಗಾರರೊಂದಿಗೆ ಚರ್ಚಿಸಿದ ಕಮಿನ್ಸ್ ಮೂರನೇ ಅಂಪೈರ್ಗೆ ಮೇಲ್ಮನವಿ ಸಲ್ಲಿಸಿದರು. ಆಗ ಮೂರನೇ ಅಂಪೈರ್ ಔಟ್ ತೀರ್ಪು ನೀಡಿದರು. ಇದರೊಂದಿಗೆ ಜೈಸ್ವಾಲ್ ಅವರ ಏಕಾಂಗಿ ಹೋರಾಟ ಅಂತ್ಯಗೊಂಡಿತು.
ಮೂರನೇ ಅಂಪೈರ್ ತೀರ್ಪು ದೊಡ್ಡ ಪರದೆ ಮೇಲೆ ಪ್ರದರ್ಶನವಾಗುತ್ತಲೇ ಭಾರತ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಟೀಮ್ ಇಂಡಿಯಾದ ಮಾಜಿ ನಾಯಕ ಸೌರಭ್ ಗಂಗೂಲಿ ಹಂಪೆ ನಿರ್ಧಾರಕ್ಕೆ ಪ್ರತಿಕ್ರಿಯಿಸಿ ಇದು ಒಪ್ಪುವಂತಹ ತೀರ್ಪು ಅಲ್ಲ, ಸ್ಪಷ್ಟವಾಗಿ ಚೆಂಡು ತಾಗದಿರುವುದು ಕಂಡರೂ ಔಟ್ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಗಂಗೂಲಿ ಮಾತ್ರವಲ್ಲ ಬಹುತೇಕ ಮಾಜಿ ಕ್ರಿಕೆಟಿಗರು ಮೂರನೇ ಅಂಪಯರ್ ನೀಡಿರುವ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಚೆಂಡು ದಿಕ್ಕು ಬದಲಿಸಿದ ಮಾತ್ರಕ್ಕೆ ಔಟ್ ಎಂದು ತೀರ್ಪು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರು ಟೀಮ್ ಇಂಡಿಯಾಗೆ ಅಂಪೈರ್ಗಳು ಮೋಸ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
