
ಮೀರಾರೋಡ್, ಡಿ. 30: ಮೀರಾರೋಡ್ ಪೂರ್ವದ ಮೀರಾಗಾಂ ಮೀರಾ ಕೋ. ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್, ರಾಷ್ರೀಯ ಹೆದ್ದಾರಿ ಸಮೀಪದ ಅಮರ್ ಪ್ಯಾಲೇಸ್ ಹಿಂದುಗಡೆ ಇರುವ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಇದರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.1 ರಂದು ಸಂಜೆ 5 ಗಂಟೆಯಿಂದ ನೂತನ ವರ್ಷದ ಪ್ರಯುಕ್ತ ವಾರ್ಷಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಆಯೋಜಿಸಲಾಗಿದೆ..

ಮೀರಾರೋಡು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಸಾಣೂರು ಸಾತಿಂಜ ಜನಾರ್ದನ್ ಭಟ್, ಸಾಣೂರು ಸಾಂತಿಂಜ ಮಾಧವ ಭಟ್, ಅಧ್ಯಕ್ಷ ಬಾಬಾ ರಂಜನ್ ಶೆಟ್ಟಿ,ಹಾಗೂ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಸದಸ್ಯರು, ಮತ್ತು ಮೀರಾ ಸೊಸೈಟಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಸಂಜೆ ಗಂ. 6 ರಿಂದ ಶ್ರೀ ಸತ್ಯನಾರಾಯಣ ಪೂಜೆ, 7.30ರಿಂದ ಶ್ರೀ ಮಹಾಲಿಂಗೇಶ್ವರ ಭಜನ ಮಂಡಲಿಯವರಿಂದ ಮತ್ತು ಖ್ಯಾತ ಭಜನೆ ಗಾಯಕ ವಿಜಯ ಶೆಟ್ಟಿ ಮೂಡುಬೆಳ್ಳೆ ಸಂಗಡಿಗರಿಂದ ಭಜನೆ ರಾತ್ರಿ 8 ರಿಂದ ಶ್ರೀ ಕ್ಷೇತ್ರದ ಶ್ರೀ ಮಹಾಲಿಂಗೇಶ್ವರ ಹಾಗೂ ಪರಿವಾರ ದೇವರಾದ ಶ್ರೀ ಗಣಪತಿ, ಶ್ರೀ ದುರ್ಗಾಮಾತೆ, ನವಗ್ರಹಗಳಿಗೆ ವಿಶೇಷ ಪೂಜೆ ಜರಗಲಿದೆ. ಭಕ್ತಾಧಿಗಳು ಭಕ್ತಿಯೊಂದಿಗೆ ಪಾಲ್ಗೊಂಡು ಈ ಧಾರ್ಮಿಕ ಉತ್ಸವದ ಯಶಸ್ವಿಗೆ ಸಹಕರಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.