.




ನಾಲಾಸೋಪಾರ ಪೂರ್ವದ ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆಯ ವತಿಯಿಂದ 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ದಿನಾಂಕ 5. 01.2025ರ ರವಿವಾರ ನಾಲಾಸೋಪಾರ ಮಜಿಟೀಯ ನಾಕ, ದ್ವಾರಕಾ ಹೋಟೆಲ್ ನ ಎದುರುಗಡೆಯ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮ
ಬೆಳಿಗ್ಗೆ 5 ರಿಂದ : ಗಣ ಹೋಮ ( ಶೇಖರ್ ಶಾಂತಿ ಅವರಿಂದ )
ಬೆಳಿಗ್ಗೆ 6 ಗಂಟೆಗೆ : ಶರಣು ಘೋಷ
ಬೆಳಿಗ್ಗೆ 8 ರಿಂದ 9 : ಸಹಸ್ರನಾಮಾವಳಿ
ಬೆಳಿಗ್ಗೆ 9:00 ರಿಂದ 12 : ಭಜನೆ (ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಹಾಗೂ ಶ್ರೀ ಗುರು ನಾರಾಯಣ ಭಜನಾ ಮಂಡಳಿ ನಾಲಸೋಪಾರ )
ಮಧ್ಯಾಹ್ನ 12 ರಿಂದ 12:30 : ಪಡಿ ಪೂಜೆ
ಮಧ್ಯಾಹ್ನ 12:30 ರಿಂದ 1 : ಮಹಾ ಆರತಿ
ಮಧ್ಯಾಹ್ನ 1 ರಿಂದ 4 : ಮಹಾಪ್ರಸಾದ – ಅನ್ನಸಂತರ್ಪಣೆ
ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆಯ ಗೌರವಾಧ್ಯಕ್ಷರಾದ ಜಗನ್ನಾಥ್ ಎನ್ ರೈ, ಅಧ್ಯಕ್ಷರು ಮತ್ತು ಗುರುಸ್ವಾಮಿ ಸದಾಶಿವ ಎ ಕರ್ಕೇರ,
ಉಪಾಧ್ಯಕ್ಷ ಸೀತಾರಾಮ ಶೆಟ್ಟಿ, ಗುರುಸ್ವಾಮಿ ಪದ್ಮನಾಭ ಪೂಜಾರಿ, ಗೌರವ ಕಾರ್ಯದರ್ಶಿ ಸುದರ್ಶನ್ ಆರ್ ಸಾಲಿಯನ್, ಗೌರವ ಕೋಶಾಧಿಕಾರಿ ಹರೀಶ್ ಪೂಜಾರಿ, ಜೊತೆ ಕಾರ್ಯದರ್ಶಿ ಪ್ರಸನ್ನ ಜೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೇವಕಿ ಎಸ್ ಕರ್ಕೇರ, ಉಪಕಾರ್ಯಾಧ್ಯಕ್ಷರುಗಳಾದ ಪುಷ್ಪ ಎಸ್ ಕೋಟ್ಯಾನ್, ಪಾವನ ವೇಣುಗೋಪಾಲ್ ಶೆಟ್ಟಿ , ಕಾರ್ಯದರ್ಶಿ ಹರಿಣಾಕ್ಷಿ ಎಚ್ ಪೂಜಾರಿ ಜೊತೆ ಕಾರ್ಯದರ್ಶಿಗಳಾದ ಸರಿತಾ ಪೂಜಾರಿ, ಜ್ಯೋತಿ ಎಸ್ ಕೋಟ್ಯಾನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಮತ್ತು ಯುವ ವಿಭಾಗ ಹಾಗೂ ಭಜನಾ ಮಂಡಳಿ ಸದಸ್ಯರು ವಿನಂತಿಸಿದ್ದಾರೆ .
ತಾರೀಕು 8-1- 2025 ನೇ ಬುಧವಾರ ಬೆಳಿಗ್ಗೆ ಇರುಮುಡಿ ಕಟ್ಟುವಿಕೆ ಕಾರ್ಯಕ್ರಮ ಜರಗಲಿದೆ.
ಭಕ್ತಾಭಿಮಾನಿಗಳು ನೀಡುವ ಯಾವುದೇ ರೀತಿಯ ಸಹಕಾರವನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಲಾಗುವುದು.
ಇರುಮುಡಿಗೆ ತುಪ್ಪದ ಕಾಯಿ ನೀಡಬಯಸುವ ಭಕ್ತಾದಿಗಳು ಮುಂಚಿತವಾಗಿ ಶಿಬಿರದ ಸ್ವಾಮಿಗಳಿಗೆ ತಿಳಿಸಿ ರೂಪಾಯಿ 201/ನ್ನು ತೆತ್ತು ರಶೀದಿ ಪಡೆಯಬೇಕಾಗಿ ವಿನಂತಿ.