ಮುಂಬಯಿ ಜ 2. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡ, ಕಳೆದ 84 ವರ್ಷಗಳಿಂದ ತನ್ನ ಸಮಾ ಜದ ಏಳಿಗೆಗಾಗಿ ಹಾಗೂ ದೇಶದ ಪ್ರಗತಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ,ಸಮಾಜ ಬಾಂಧವರನ್ನು ಒಟ್ಟುಗೂಡಿಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಸಂಸ್ಥೆ ಅದು ಸಾಫಲ್ಯ ಸೇವಾ ಸಂಘ. ‘ಬಡತನದಲ್ಲಿ ಇರುವ ಜನರ ಕಣ್ಣೀರು ಒರೆಸುವ ಕಾರ್ಯ, ಯಾವ ಸಂಸ್ಥೆ ಮಾಡುವುದಿಲ್ಲವೋ ಅಥವಾ ದೇಶದ ಸೇವೆಯಲ್ಲಿ ಕೈಜೋಡಿಸುವುದಿಲ್ಲವೋ, ಆ ಸಂಸ್ಥೆ ಎಲೆಗಳನ್ನು ಕಳಚಿಕೊಂಡ ಮರವಿದ್ದಂತೆ, ಸಂಘದ ಉಗಮದ ನಿಜ ಅರ್ಥವನ್ನು ತಿಳಿದು ನಾವು ಕಾರ್ಯಮಗ್ನರಾಗಬೇಕು, ಜನಪರ ಸೇವೆ ಮಾಡಿ ಪುಣ್ಯ ಸಂಚಯನ ಮಾಡುವ ಕೆಲಸ ಭಗವಂತ ನಮಗೆ ಕರುಣಿಸಿದ್ದಾರೆ. ಆ ಅವಕಾಶವನ್ನು ಸದುಪಯೋಗಗೊಳಿಸಿ ಸಂಘದ ಬಲವರ್ಧನೆ, ಮಹಿಳೆಯರ ಸಬಲೀಕರಣ, ಸಮಾಜಭಾಂಧವರ ಏಳಿಗೆಗಾಗಿ ಕಾರ್ಯಪ್ರವೃತ್ತರಾಗಬೇಕು” ಎನ್ನುವುದು ನಮ್ಮ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಪಲ್ಯರ ನಿರಂತರ ನುಡಿಯಾಗಿದೆ.
ಕಳೆದ ಏಳು ವರುಷದ ತನ್ನ ಕಾರ್ಯಾವಧಿಯಲ್ಲಿ ಸಮಾಜ ಬಾಂಧವರ ಏಳಿಗೆಯನ್ನೇ ಧೈಯವಾಗಿಟ್ಟುಕೊಂಡು, ವಿಶೇಷ ಯೋಜನೆಗಳನ್ನು ಹಮ್ಮಿಕೊಂಡು, ತನ್ನ ನುಡಿಯನ್ನು ಕಾರ್ಯರೂಪಕ್ಕೆ ತಂದು, ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂದಿನ ದಿನದಲ್ಲಿ ಸಾಫಲ್ಯ ಸಂಘವು ಮುಂಬೈ ದಕ್ಷಿಣ ಕನ್ನಡ ಮತ್ತು ಮತ್ತು ಹೊರನಾಡಿನಲ್ಲೂ ಪ್ರಸಿದ್ಧವಾಗಿದೆ ಅನ್ನೋದು ಹೆಮ್ಮೆಯ ವಿಷಯ,
.ಮಹಾರಾಷ್ಟ್ರದಲ್ಲಿ ಇತರ ಹಿಂದುಳಿದ ವರ್ಗಕ್ಕೆ ನೋಂದಾವಣಿ ತನ್ನ ಸಮುದಾಯದ ಹೆಸರನ್ನು ಮಹಾರಾಷ್ಟ್ರದಲ್ಲಿ
ಇತರ ಹಿಂದುಳಿದ ವರ್ಗಕ್ಕೆ ಸೇರಿಸುವಲ್ಲಿ ಶ್ರೀ ಶ್ರೀನಿವಾಸ ಸಪಲ್ಯರ ಕೊಡುಗೆ ಅಪಾರವಾದದ್ದು. ಬಡತನದಲ್ಲಿ ಇರುವ ಮಕ್ಕಳು ಇದರ ಪ್ರಯೋಜನ ಪಡೆದು ಕಡಿಮೆ ಖರ್ಚಿನಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಹಾಗೂ ಇನ್ನಿತರ ಉನ್ನತ ಶಿಕ್ಷಣವನ್ನು ಪಡೆಯಲು ಈ ನೋಂದಾವಣಿಯು ಸಹಕಾರಿ ಆಗಿದೆ,
.ಸಾಪಲ್ಯ ಭಾಗ್ಯ ಯೋಜನೆ : ಮುಂಬೈಯಲ್ಲಿ ನೆಲೆಸಿರುವ ಸಮಾಜ ಬಾಂಧವರ ಮನೆಗಳಿಗೆ ತೆರಳಿ, ಅವರ ಕಷ್ಟಗಳಿಗೆ
ಸ್ಪಂದಿಸಿ, ವಿಧವೆಯರು ಹಾಗೂ ಬಡತನದಲ್ಲಿರುವ ಸುಮಾರು 44 ಮಹಿಳೆಯರನ್ನು ಗುರುತಿಸಿ ಅವರಿಗೆ ಉಚಿತ ಹೊಲಿಗೆ ಯಂತ್ರ ನೀಡಿದ್ದಲ್ಲದೆ ಹಲವರಿಗೆ ಉಚಿತ ಹೊಲಿಗೆ ತರಬೇತಿಯನ್ನು ನೀಡಿ ಮಹಿಳೆಯರ ಸಬಲೀಕರಣಕ್ಕೆ ಸಂಘವು ಶಕ್ತಿಮೀರಿ ಪ್ರಯತ್ನಿಸಿದೆ.
ನಾದಸ್ವರ ಯೋಜನೆ: ನಾದಸ್ವರ ಯೋಜನೆಯ ಮುಖೇನ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ದಾನಿಗಳಿಂದ ಪಡೆದು, ಸಮುದಾಯದ ಬಡಬಗ್ಗ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಸಂಘವು ಸಫಲತೆಯನ್ನು ಪಡೆದಿದೆ.
. ಸಾಪಲ್ಯ ಶಿಕ್ಷಣ ಭಾಗ್ಯ ಯೋಜನೆ: ಉಚಿತವಾಗಿ ಗಣಕ ಯಂತ್ರ ಕಲಿಯಲು ಇಚ್ಚೆಯುಳ್ಳ ವಿದ್ಯಾರ್ಥಿಗಳ ಮನೆಯ ಸಮೀಪದಲ್ಲಿರುವ ಗಣಕಯಂತ್ರ ಸಂಸ್ಥೆಗೆ ಸಂಪೂರ್ಣ ಶುಲ್ಕವನ್ನು ಪಾವತಿಸಿ,ಸಾಫಲ್ಯ ಶಿಕ್ಷಣ ಭಾಗ್ಯದ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ಗಣಕಯಂತ್ರದ ಶಿಕ್ಷಣವನ್ನು ಪಡೆಯುವಂತೆ ಸಂಘವು ಪ್ರಯತ್ನಿಸುತ್ತಿದೆ.
. ಸಾಪಲ್ಯ ಸಂಜೀವಿನಿ ಭಾಗ್ಯ: ಸಮಾಜದ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಮಕ್ಕಳಿಗೆ ಶಿಕ್ಷಣ.
ಮಹಿಳೆಯರಿಗೆ ಕೆಲಸದ ಜೊತೆಗೆ ಹಿರಿಯರ ಆರೋಗ್ಯದ ಕಾಳಜಿಯನ್ನು ವಹಿಸಬೇಕು ಎಂಬ ಅಧ್ಯಕ್ಷರ ಅನಿಸಿಕೆಯಂತೆ, ಸಾಫಲ್ಯ ಸಂಜೀವಿನಿ ಭಾಗ್ಯ ಎಂಬ ಯೋಜನೆಯಡಿ ಹಿರಿಯರಿಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಪೂರೈಸಿ, ಹಿರಿಯರ ಆಶೀರ್ವಾದಕ್ಕೆ ಪಾತ್ರವಾಗಿದೆ.
. ಸಾಪಲ್ಯ ಅನ್ನ ಭಾಗ್ಯ: ಸಾಫಲ್ಯ ಅನ್ನ ಭಾಗ್ಯ ಯೋಜನೆಯ ಮುಖೇನ, ಬಡತನದಲ್ಲಿ ಇರುವ ಜನರಿಗೆ ಮೂರು ಅಥವಾ ಆರು ತಿಂಗಳಿಗೆ ಬೇಕಾಗುವ ಅಡುಗೆ ಸಾಮಾಗ್ರಿಗಳನ್ನು ಪೂರೈಸುವ ಪುಣ್ಯ ಕಾರ್ಯ ಈ ಸಂಸ್ಥೆಯಿಂದ ನಡೆಯುತ್ತಿದೆ
ಸಾಪಲ್ಯ ಪ್ರಾಣಿ -ಸಂಕುಲ ಯೋಜನೆ; ಸಾಫಲ್ಯ ಸಂಘವು ತನ್ನ ಸಮುದಾಯದ ಅಭಿವೃದ್ಧಿಯನ್ನು ಮಾತ್ರ
ಲಕ್ಷ್ಯವನ್ನಾಗಿಟ್ಟು ಕೊಳ್ಳದೆ, ಮೂಕ ಪ್ರಾಣಿಗಳ ಮೇಲೆಯೂ ತನ್ನ ಕೃಪಾ ದೃಷ್ಟಿಯನ್ನು ಬೀರಿದೆ. ಪ್ರತಿ ವರುಷ ಸುಮಾರು ಎರಡು ಪ್ರಾಣಿ ಸಂಕುಲಕ್ಕೆ ತೆರಳಿ ಅಲ್ಲಿ ಪ್ರಾಣಿಗಳಿಗೆ ಬೇಕಾಗುವ ವೈದ್ಯಕೀಯ ನೆರವು ಮತ್ತು ಆಹಾರದ ನೆರವು ಈ ಸಂಸ್ಥೆಯ ಮುಖೇನ ನಿರಂತರ ಜರಗುತ್ತಿದೆ ಎನ್ನುವುದು ಇದಕ್ಕೆ ಸಾಕ್ಷಿ.
. ಸಾಪಲ್ಯ ಮಿಲಿಟರಿ ಸಹಾಯ ಯೋಜನೆ; ದೇಶದ ಸೇವೆಗಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿದ ಯೋಧರ ಕುಟುಂಬಕ್ಕೆ ಸಹಾಯವಾಗಲು, ಸಂಸ್ಥೆ ಧನ ಸಂಗ್ರಹಣೆ ಮಾಡಿ, ಸೆಂಟ್ರಲ್ ಗವರ್ನಮೆಂಟ್ ಮಿಲಿಟರಿ ಕ್ಷುಯಾಲಿಟಿ ಫಂಡ್ ಜಮೆ ಮಾಡಿ ದೇಶಸೇವೆಗೆ ತನ್ನ ಕೊಡುಗೆ ಯನ್ನು ನೀಡುತ್ತಾ ಬರುತ್ತಿದೆ.
. ಸಾಪಲ್ಯ ಅನಾಥ ಮಕ್ಕಳು ಮತ್ತು ವೃದ್ದಾಶ್ರಮ ಯೋಜನೆ: ಸಾಫಲ್ಯ ಅನಾಥ ಮಕ್ಕಳು ಮತ್ತು ವೃದ್ದಾಶ್ರಮ
ಯೋಜನೆ: ಈ ಯೋಜನೆ ಮುಖೇನ, ಅನಾಥಾಶ್ರಮಕ್ಕೆ ತೆರಳಿ, ಅಲ್ಲಿ ಇರುವ ಅನಾಥ ಮಕ್ಕಳು ಮತ್ತು ವೃದ್ಧಾಶ್ರಮ ದಲ್ಲಿ ಇರುವ ಹಿರಿಯರಿಗೆ ವೈದ್ಯಕೀಯ ಮತ್ತುಆಹಾರ ನೆರವು, ಬಟ್ಟೆ ಬರೆ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಯ ಮೂಲಕ ದೇಶಸೇವೆಯಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದೆ.
ಜನವರಿ 5, ರವಿವಾರದಂದು ಕುರ್ಲಾ ಭಂಟರ ಭವನದಲ್ಲಿ ನಡೆಯಲಿರುವ ಸಾಫಲ್ಯ ಮಿಲನ-2025 ಕಾರ್ಯಕ್ರಮವು ಬೆಳಿಗ್ಗೆ 8.30 ಕ್ಕೆ ಪ್ರಾರಂಭವಾಗಲಿದೆ. ಸಂಸ್ಥೆಯ ಹಿರಿಯರು, ಮಾಜಿ ಅಧ್ಯಕ್ಷರುಮತ್ತು ಮಾಜಿ ಕಾರ್ಯಕಾರಿ ಸಮಿತಿಯವರ ಅಮೃತ ಹಸ್ತದಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.
ಓಂ ಪ್ರಕಾಶ ರಾವ್, ರಘುವೀರ್ ಅತ್ತಾವರ, ಕಿರಣ ಮುಲ್ಕಿ ಮಿಸ್. ಮೀರಾ ಕರ್ಕೇರ, ಶಾರದಾ ಹೆಜಮಾಡಿ, ವಾಸು ಪುತ್ರನ್, ಪಿ. ಡಿ. ಸಾಲಿಯಾನ್, ಸತೀಶ್ ತಿಲಕ್, ವಿಠಲ್ ಸಪಳಿಗ, ಸತೀಶ್ ಸಾಲಿಯಾನ್, ಶಂಕರ್ ಸಪಳಿಗ, ಲಕ್ಷ್ಮಿಸಪಲ್ಯ ಉದ್ಘಾಟನಾ ಸಭಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಹಾಗೂ ಸಂಜೆ ನಡೆಯುವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಉದ್ಯೋಗಪತಿ ಮತ್ತು ಅಖಿಲ ಭಾರತ ರಸಾಯನಶಾಸ್ತ್ರಜ್ಞ ಮತ್ತು ಔಷಧಿಕಾರ ಇದರ ಉಪ ಕಾರ್ಯದರ್ಶಿಯಾಗಿರುವ .ಏ.ಕೆ.ಜೀವನ್, ಅಖಿಲ ಕರ್ನಾಟಕ ಗಾಣಿಗ ಸಂಘ – ಬೆಂಗಳೂರು ಇದರ ಅಧ್ಯಕ್ಷರಾದ ರಾಜಶೇಖರ್ ಗಾಣಿಗ ಎಂ. ಆರ್. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉದ್ಯೋಗಪತಿ, ಮಾಧವ್ ಮಾವೆ, -ಸಿಂಡಿಕೇಟ್ ಬ್ಯಾಂಕ್ ಬೆಂಗಳೂರು ಇದರ ಮಾಜಿ ಡೆಪ್ಯುಟಿ ಜನರಲ್ ಮ್ಯಾನೇಜರ್ ನರಸಿಂಹ ಮೂರ್ತಿ,, ಜ್ಯೋತಿ ಬೀಡಿ ಮಂಗಳೂರುಇದರ ಮಲಾಕರು ಭುವನೇಶ್ವರ್ ಸಪಲ್ಯ ,
, ಹೋಟೆಲ್ ಅಂಬಿಕ ಮುಂಬೈ ಇದರ ಮನೋಜ್ ಬಂಗೇರ , ಮಂಗಳೂರಿನ ಉದ್ಯಮಿ ಉಮೇಶ್ ಬೋಳಂತೂರ್, ಮಂಜೇಶ್ವರದ ಕೀರ್ತೆಶ್ವರ ದೇವಸ್ಥಾನದ ಕಾರ್ಯಾಧ್ಯಕ್ಷರಾದ ಹರಿಶ್ಚಂದ್ರ ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಕೆಲವು ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಗುವುದು, ಸಫಲ ಸೌಹಾರ್ದ ಕ್ರೆಡಿಟ್ ಸೊಸೈಟಿ, ನಿರ್ದೇಶಕರಾದ ಮಾಧವ್ ಮಾವೆ, ಸುಮಂಗಲ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾದ ನಾಗೇಶ್ ಕಲಡ್ಕ, ಉದ್ಯಮಿ ಭೋಜ ಸಪಳಿಗ, ಸೂರತ್, ಕಾರ್ಯಕರಿಸಮಿತಿಯವರಾದ ಮಹೇಶ್ ಬಂಗೇರ, ಹೇಮಂತ್ ಸಪಳಿಗ, ಭಾಸ್ಕರ್ ಬಿ. ಸಪಳಿಗ, ಕಲಾ ಬಂಗೇರ, ಶಾಂತ ಸುವರ್ಣ, ವಿಮಲಾ ಬಂಗೇರ, ಕು. ಸಂಧ್ಯಾ ಪುತ್ರನ್ ಸನ್ಮಾನ ಪಡೆಯಲಿದ್ದಾರೆ. ಕು ಮಾಲಿನಿ, ಸುಧಾಕರ್ ಸಪಳಿಗ,ಇಂಟರ್ನ್ಯಾಷನಲ್ ರೋಪ್ ಜಂಪ್ ಚಾಂಪಿಯನ್ ಆಗಿರುವ ಮಾಸ್ಟರ್ ಇಶಾನ್ ಪುತ್ರನ್, ಲೇಖಕ ಸತೀಶ್ ಪುತ್ರನ್ ಇವರುಗಳಸಾಧನೆಗೆ ಗೌರವಾರ್ಪಣೆ ಕೊಟ್ಟು ಸತ್ಕರಿಸಲಾಗುವುದು, ಸತೀಶ್‌ಕುಮಾರ್, ಉಷ ಸಪಳಿಗ, . ಸಂತೋಷ್ ಕುಂದರ್ ತಮ್ಮ ಕಾರ್ಯಕ್ಷಮತೆಗೆ ಗೌರಾರ್ಪಣೆ ಪಡೆಯಲಿದ್ದಾರೆ. ಪ್ರಥಮ ಬಾರಿಗೆ ಸಾಫಲ್ಯ ಸೇವಾ ಸಂಘದಲ್ಲಿ ಕೊಡಮಾಡುವ
ಶ್ರೀನಿವಾಸ ಸಾಫಲ್ಯ ಮತ್ತು ರತಿಕಾ ಸಾಫಲ್ಯ ಅವರ ಸಾಫಲ್ಯ ಸಿರಿ ದತ್ತಿ ನಿಧಿ- ಪ್ರಶಸ್ತಿ ಯನ್ನು ಗಿರಿಜಾ ವೆಲ್ವೇರ್ ನ ವಸಂತ ಕುಂಜರ್ ಅವರಿಗೆ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದ ವಿವರ :ಕುಡಪು ಮಂಗಳೂರು ತಂಡದ – ಕು, ಅದಿತಿ ಗಾಣಿಗ ಇವರಿಂದ ಭಕ್ತಿ ಗಾನ ವೈಭವ ಪ್ರತಿಭಾ ಅನ್ವೇಷಣಾ ಸ್ಪರ್ಧೆ, ಶೋಭಾ ಬಂಗೇರ ಇವರಿಂದ ಸನಾತನ ಧರ್ಮ ವಿಚಾರ,-ಕು. ಅಂಕಿತ ನಾಯಕ್ ಮತ್ತು ಬಳಗ ಇವರಿಂದ ವಿಶೇಷ ನೃತ್ಯ ಯಕ್ಷನಾಟ್ಯ ವೈಭವ- ಭಸ್ಮಾಸುರ ಮೋಹಿನಿ ಮತ್ತು ವಿಶೇಷ ಆಕರ್ಷಣೆಯಾಗಿ ಸಮಾಜ ಬಾಂಧವರು ನಟಿಸಿರುವ, ಶೈಲೇಶ್ ಪುತ್ರನ್ ಮತ್ತು . ಕಿರಣ್ ಕುಮಾರ್ ಸಪಲ್ಯ ಅವರು ನಿರ್ದೇಶಿಸಿರುವ ಏರೆಗ್ಲಾ ಪನೊಡ್ಡಿ ತುಳು ಹಾಸ್ಯಮಯ ನಾಟಕ ನಡೆಯಲಿದೆ,
ಈ ಕಾರ್ಯಕ್ರಮಕ್ಕೆ ಸಮಾಜದ ಬಾಂಧವರು ತಮ್ಮ ಪರಿವಾರದೊಂದಿಗೆ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಾರ್ಯಕಾರಿ ಸಮಿತಿಯ ಪರವಾಗಿ,ಅಧ್ಯಕ್ಕರಾದ ಶ್ರೀನಿವಾಸ್ ಸಪಲ್ಯ, ಉಪಾಧ್ಯಕ್ಷರಾದ ಕೃಷ್ಣ ಕುಮಾರ್ ಬಂಗೇರ ಮತ್ತು ಜೀವನ್ ಸಿರಿಯಾನ್, ಪ್ರಧಾನ ಕಾರ್ಯದರ್ಶಿಯಾದ ಭಾಸ್ಕರ್ ಟಿಸಪಳಿಗ ಹಾಗು ಜೊತೆ ಕಾರ್ಯದರ್ಶಿಯಾದ ರಾಜೇಶ್ ಪುತ್ರನ್ ಮತ್ತು ಕಿರಣ್ ಕುಮಾರ್ ಸಪಳಿಗ, ಕೋಶಾಧಿಕಾರಿಯಾದ ಹೇಮಂತ್,ಸಪಳಿಗ ಮತ್ತು ಜೊತೆ ಕೋಶಾಧಿಕಾರಿಯಾದ ಸತೀಶ್ ಕುಂದರ್ ಮತ್ತು ಕಾರ್ಯಕಾರಿ ಸದಸ್ಯರುಗಳಾದ ಲೀಲಾಧರ್ ಬಂಗೇರ, ಭಾಸ್ಕರ್ ಬಿ ಸಫಲಿಗ, ಜಗನ್ನಾಥ್ ಕರ್ಕೇರ, ಮಹೇಶ್ ಬಂಗೇರ, ಶೋಭಾ ಬಂಗೇರ, ಡಾ. ಜಿ.ಪಿ. ಕುಸುಮ, ದಿನೇಶ್ ಕಾಂಚನ್, ದೀಪಕ್ ಕುಂದರ್, ಶೋಭಾ ಕರ್ಕೇರ ಮತ್ತು ಪದ್ಮನಿ ಬಂಗೇರ, ಮಹಿಳಾ ವಿಭಾಗದ ಅಧ್ಯಕ್ಷೆಯಾದ ಲಕ್ಷ್ಮೀ ಮೆಂಡನ್, ಉಪಾಧ್ಯಕೃರಾದ ವಿಮಲಾ ಬಂಗೇರ, ಕಾರ್ಯದರ್ಶಿಯಾದ ಉಷಾ ಸಪಳಿಗೆ ಹಾಗೂ ಕೋಶಾಧಿಕಾರಿಯಾದ ಶಾಂತ ಸುವರ್ಣ. ಯುವ ವಿಭಾಗದ ಕಾರ್ಯಾಧ್ಯಕ್ಷೆ ಯಾದ ಕು. ಸಂದ್ಯಾ ಪುತ್ರನ್, ಉಪ ಕಾರ್ಯಾಧ್ಯಕ್ಷರಾದ ಸಂತೋಷ್ ಕುಂದರ್, ಕಾರ್ಯದರ್ಶಿಯಾದ ಶ್ವೇತಾ ಬಂಗೇರ ಇವರುಗಳು ಆತ್ಮೀಯವಾಗಿ ವಿನಂತಿಸಿಕೊಂಡಿದ್ದಾರೆ. ಆ ದಿನ ಕುರ್ಲಾ ಸ್ಟೇಷನ್ ನಿಂದ ಬಂಟರ ಭವನಕ್ಕೆ ಆಗಮಿಸಲು ಹಾಗೂ ನಿರ್ಗಮಿಸಲು ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ.
——