
.
.
ಮುಂಬಯಿ, ಜ. 4: ಬಿಲ್ಲವರ ಅಸೋಸಿಯೇಷನಿನ ಭಾಯಿಂದರ್ ಸ್ಥಳೀಯ ಕಚೇರಿಯಲ್ಲಿ ನೂತನ ಕಾರ್ಯಕಾರೀ ಸಮಿತಿಯ ಮುಂದಾಳತ್ವದಲ್ಲಿ ಹೊಸ ವರುಷದ ಮೊದಲ ಗುರುವಾರದ ಗುರುಪೂಜೆಯು ವಿಜ್ರಂಭಣೆಯಿಂದ ಜರಗಿತು. ಸುಮಾರು 55 ಗುರು ಭಕ್ತರು ಗುರುಪೂಜೆ ನೀಡಿ ಸಹಕರಿಸಿದ್ದರು.ಆರಂಭದಲ್ಲಿ ಸದಸ್ಯರಿಂದ ಭಜನೆ ನಡೆದು ಫೋರ್ಟ್ ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮಾ ಪೂಜಾ ಸಮಿತಿಯ ಪ್ರಧಾನ ಅರ್ಚಕ ಸತೀಶ್ ಕೋಟ್ಯಾನ್ ರವರಿಂದ ಗುರುಪೂಜೆ, ಮಹಾ ಆರತಿ ನಡೆಯಿತು. ಕಚೇರಿಯ ಅರ್ಚಕ ರಾಕೇಶ್ ಅಮೀನ್ ಸಹಕರಿಸಿದ್ದರು.


ಈ ಸಂದರ್ಭದಲ್ಲಿ ಸತೀಶ್ ಕೋಟ್ಯಾನ್ ರವರು ಗುರುಸಂದೇಶದ ಬಗ್ಗೆ ವಿವರಿಸಿ ಹಿತವಚನ ನೀಡಿದರು. ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಉಪಸ್ಥಿತರಿದ್ದರು.ಸ್ಥಳೀಯ ಕಚೇರಿಯ ಕಾರ್ಯಾದ್ಯಕ್ಷ ಶೇಕರ ರಾಮ ಪೂಜಾರಿ, ಗೌ.ಕಾರ್ಯದರ್ಶಿ ಜ್ಯೋತಿ ರತ್ನಾಕರ ಪೂಜಾರಿ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಸಮಿತಿಯ ಅಭಿಮಾನಿಗಳು ಪೂಜಾಕಾರ್ಯ ಯಶಸ್ಸಿಗೆ ಸಹಕರಿಸಿದ್ದರು.
.