
.
.
ಚಿತ್ರ: ಧನಂಜಯ ಪೂಜಾರಿ
ಮುಂಬಯಿ : ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಾಮೂಹಿಕ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೂಜೆಯು ಗುರುವಾರ ದಿನಾಂಕ 02.01.2025 ರಂದು ಬಹಳ ವಿಜೃಂಭಣೆಯಿಂದ ಜರಗಿತು.
ಅಂದು ಬೆಳಿಗ್ಗೆ ಸ್ಥಳ ಶುದ್ದಿಕರಣ ನಿಮಿತ ಪುರೋಹಿತರಾದ ಶ್ರೀ ಹರೀಶ್ ಶಾಂತಿ ಕಾರ್ಕಳ ಇವರ ಪೌರೋಹಿತದಲ್ಲಿ ಗಣ ಹೋಮ ಜರಗಿತು.
ಪೂಜಾ ಸಂಕಲ್ಪವನ್ನು ಪೂಜಾ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ. ಅಣ್ಣಿ ಪೂಜಾರಿ ದಂಪತಿಗಳು ವಹಿಸಿದರು.
ಸ್ಥಳೀಯ ಸಮಿತಿಯ ಗುರುಮಂಟಪದ ದುರುಸ್ತಿಯನ್ನು ದಾನಿಗಳಾದ ಶ್ರೀ. ಕೆ. ಭೋಜ್ ರಾಜ್ ದಂಪತಿಗಳು ವೈಹಿ ಸಿಕೊಂಡು ದೊಡ್ಡದಾದ ಮೊತ್ತವನ್ನು ಖರ್ಚು ಮಾಡಿ ಯೋಗ್ಯವಾದ ಭವ್ಯ ಮಂಟಪವನ್ನೇ ಮಾಡಿಸಿ ಕೊಟ್ಟಿದ್ದಾರೆ. ಅದೇ ರೀತಿ ಸಮಿತಿ ಕಚೇರಿಯ ವಠಾರದ
ಪೇಟಿಂಗ್ ಮಾಡಿದ ವೆಚ್ಚವನ್ನು ಶ್ರೀ ವಿಪುಲ್ ಪಾಟೀಲ್ ಇವರು ವಹಿಸಿಕೊಂಡರು.





ಅಂದಿನ ಅನ್ನ ಸಂತರ್ಪಣೆಗೆ ಅಯ್ಯಪ್ಪ ವೃತದಾರಿ ಶ್ರೀ ಸಂಜೀವ ಗುರುಸ್ವಾಮಿಯವರ ತಂಡದವರು
ಸಹಕರಿಸಿದರು
ಪ್ರಸಾದ ಪಂಚಕಜ್ಜಾಯ ದ ವೆಚ್ಚವನ್ನು ಶ್ರೀ. ಸತೀಶ್ ಬಂಗೇರರವರು ವಹಿಸಿಕೊಂಡರು.
ಸುಮಾರು 200 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಾಮೂಹಿಕ ಪೂಜೆಯನ್ನು ನೀಡಿರುವರು. ದಾನಿಗಳನ್ನು ಹಾಗೂ ಅನ್ನದಾನ ನೀಡಿದ ಅಯ್ಯಪ್ಪ ಸ್ವಾಮಿ ಗಳನ್ನು ಯೋಗ್ಯ ರೀತಿಯಲ್ಲಿ ಗೌರವಿಸಲಾಯಿತು.
ಯಶಸ್ವಿ ಭಜನಾ ಮಂಡಳಿಯವರಿಂದ ಮತ್ತು ಸ್ಥಳೀಯ ಸಮಿತಿಯ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮವು ಅತೀ ಉತ್ತಮ ರೀತಿಯಲ್ಲಿ ಜರಗಿತು.
ತದನಂತರ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಿತು.
ಸ್ಥಳೀಯ ಸಮಿತಿಯ ಪುರೋಹಿತರಾದ ಶ್ರೀ. ಐತಪ್ಪ ಸುವರ್ಣ ಮತ್ತು ಶ್ರೀ. ಈಶ್ವರ್ ಕೋಟಿಯನ್ ರವರಿಂದ ಪೂಜಾ
ವಿದಿಗಳು ಭಕ್ತಿತ್ಪೂರ್ವಕ ವಾಗಿ ಜರಗಿದವು
ಮೇಲಿನ ಎಲ್ಲಾ ಕಾರ್ಯಕ್ರಮಗಳಿಗೆ ಕಾರ?ಧ್ಯಕ್ಷರು, ಕಾರ್ಯದರ್ಶಿಯವರು ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಮಹಿಳಾ ವಿಭಾಗದವರು ಹಾಗೂ ಯುವ ವಿಭಾಗದವರು ಮನ: ಪೂರ್ವಕವಾಗಿ ಶ್ರಮಿಸಿದುದರಿಂದ ಕಾರ್ಯಕ್ರಮವು ಯಶಸ್ವಿಯಾಗಲು ಸಾಧ್ಯವಾಯಿತು.