.
.
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಮಾಜಕ್ಕೆ ಆದರ್ಶಪ್ರಾಯರು: ರಾಮದಾಸ್ ಉಪಾಧ್ಯಾಯ ರೆಂಜಾಳ,
ಚಿತ್ರ ವರದಿ : ದಿನೇಶ್ ಕುಲಾಲ್,
ಮುಂಯಿ, ಅ. 19. ಶತಮಾನ ಪುರುಷರೂ ಯತಿಕುಲ ಚಕ್ರವರ್ತಿಗಳೂ ಪದ್ಮವಿಭೂಷಣರೂ ಪ್ರಾತಃಸ್ಮರಣೀಯರಾದ,ಯತಿಕುಲ ಚಕ್ರವರ್ತಿ ಪ್ರಾತಃಸ್ಮರಣೀಯರಾದ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಸಮಾರಾಧನಾ ಮಹೋತ್ಸವ ಜ 2 ರಂದು ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯಲ್ಲಿರುವ ಪೇಜಾವರ ಮಠದಲ್ಲಿ , ಮಠದ ವ್ಯವಸ್ಥಾಪಕ ಡಾ| ರಾಮದಾಸ್ ಉಪಾ ಧ್ಯಾಯ ರೆಂಜಾಳರವರ ಪ್ರಧಾನ ಪೌರೋಹಿತ್ಯ ನಡೆಯಿತು,
ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ಪರಮಾನುಗ್ರಹದಿಂದ ಮಠದಲ್ಲಿಯ ಶ್ರೀಕೃಷ್ಣನ ಸನ್ನಿಧಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದ ಬಳಿಕ,ವಿಷ್ಣು ಸಹಸ್ರನಾಮ ಪಾರಾಯಣ, ಭಾಗವತ ಮತ್ತು ಭಗವದ್ಗೀತೆ ಪಾರಾಯಣ , ಶ್ರೀ ಮದ್ವೆಶ್ವರ ಭಜನಾ ಮಂಡಳಿ ಮತ್ತಿತರ ಭಜನಾ ಮಂಡಳಿಗಳಿಂದ ವಿಶೇಷ ಭಜನೆಯೊಂದಿಗೆ ಆರಾಧನೆ ನಂತರ ಶ್ರೀಕೃಷ್ಣ ದೇವರಿಗೆ ಮಹಾಪೂಜೆ ನಡೆಯಿತು,
, ಮಠದ ವ್ಯವಸ್ಥಾಪಕ ಡಾ| ರಾಮದಾಸ್ ಉಪಾ ಧ್ಯಾಯ ರೆಂಜಾಳರವರ ಆರಾಧನೆ ಪೂಜಾ ಕಾರ್ಯಗಳನ್ನು ನಡೆಸಿದ ಬಳಿಕ ಮಾತುನಡಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ತ್ಯಾಗ ಜೀವನ ನಡೆಸಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿ ಎಲ್ಲರಿಗೂ ಅವರು ಆದರ್ಶಪ್ರಾಯರಾಗಿದ್ದಾರೆ ,
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು 8ನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಿ ಜೀವಮಾನವಿಡೀ ಧಾರ್ಮಿಕ, ಶಿಕ್ಷಣ, ಆರೋಗ್ಯ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಪ್ರೋತ್ಸಾಹದವರು,. ವಿಶ್ವೇಶತೀರ್ಥರ ಮಾರ್ಗದಲ್ಲಿ ಸಾಗುವುದೇ ಅವರಿಗೆ ನಾವು ನೀಡುವ ದೊಡ್ಡ ಗೌರವ ಎಂದು ನುಡಿದರು,
ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿ ಜ್ಞಾನದ ವಿಶ್ವಸ್ಥ ಮಂಡಳಿಯ ಸದಸ್ಯರು,
ಪೇಜಾವರ ಮಠದ ವ್ಯವಸ್ಥಾಪಕ ರಾದ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೋ , ವೇದಮೂರ್ತಿ ಗೋವಿಂದ ಭಟ್,ಪುರೋಹಿತರಾದ ಪವನ ಭಟ್ ಅಣ್ಣಿಗೇರಿ, ಶ್ರೀನಿವಾಸ್ ಭಟ್, ಸುಬ್ರಮಣ್ಯ ಭಟ್, ಗೋಪಾಲ್ ಭಟ್ ಭಯಂದರ್, ಪರೀಲ್ ಶ್ರೀನಿವಾಸ್ ಭಟ್, ಶಿವಾನಂದ ಪಾಂಡೆ ಮತ್ತಿತರರ ಪುರೋಹಿತರು, ಮಠದ ಸಿಬಂದಿ ವರ್ಗ, ಉಪಸ್ಥಿತರಿದ್ದರು .