ಮುಂಬಯಿ ಡಿ. 29: ಒಂದು ಕಾಲದಲ್ಲಿ ಮುಂಬಯಿ ಕೋಟೆ ಎಂದು ಪ್ರಸಿದ್ದಿ ಪಡೆದ ಮುಂಬಯಿ ಫೋರ್ಟ್ ಇಲ್ಲಿ ಹೋಟೆಲ್ ಉಡುಪಿಯ ಎದುರುಗಡೆ ವಾಡಿಯ ಬಿಲ್ಡಿಂಗ್ ನಲ್ಲಿ ದಿ. ಎ.ಬಿ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್ ಮುಂಬಯಿ, ಇದರ 42 ವರ್ಷದ ಮಹಾಪೂಜೆ ಇರುಮುಡಿ ಸೇವೆ ಹಾಗೂ ಅನ್ನಸಂತರ್ಪಣೆಯು ಜನವರಿ ತಾ. 5-01-2025 ರ ಭಾನುವಾರದಂದು ಶ್ರೀ ಅಯ್ಯಪ್ಪ ಸ್ಪೋರ್ಟ್ಸ್ ಕ್ಲಬ್ ಇದರ ಸಂಚಾಲಕತ್ವದ ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್ ಇದರ
ಅಧ್ಯಕ್ಷರಾದ ಕಲಾಯಿ ಕೃಷ್ಣ ಶೆಟ್ಟಿಯವರ ಮುಂದಾಳುತ್ವದಲ್ಲಿ ಚಂದ್ರಶೇಖರ ಗುರುಸ್ವಾಮಿ, ಸಸಿಹಿತ್ಲು ರಾಜ್ ಕುಮಾರ್ ಗುರು ಸ್ವಾಮಿ ಮತ್ತು ಕಾಪು ಪ್ರಕಾಶ್ ಗುರುಸ್ವಾಮಿ ಇವರ ನೇತೃತ್ವದಲ್ಲಿ ಜರಗಲಿದೆ.
ಬೆಳಿಗ್ಗೆ 4.00 ಗಂಟೆಗೆ ಗಣಹೋಮ,4.30 ಕ್ಕೆ ದೇವರಿಗೆ ಅಭಿಷೇಕ, 5.00 ಗಂಟೆಗೆ ಶರಣುಘೋಷ, 6.30 ಕ್ಕೆ ಮಂಗಳಾರತಿ, 6.30 ರಿಂದ 11.00 ಇರುಮುಡಿ ಕಾರ್ಯಕ್ರಮ, 9.00 ರಿಂದ 11.00 ಮಂಡಳಿಯ ಸದಸ್ಯರಿಂದ ಹಾಗೂ ಶ್ರೀ ಮಹಾವಿಷ್ಣು ದೇವಸ್ಥಾನ ಡೊಂಬಿವಲಿ ಇವರಿಂದ ಭಜನಾ ಕಾರ್ಯಕ್ರಮ, 11.30 ರಿಂದ 12.30 ಧಾರ್ಮಿಕ ಸಭಾ ಕಾರ್ಯಕ್ರಮ ಸನ್ಮಾನ,12.45 ಮಹಾಮಂಗಳಾರತಿ, 1.30 ಅನ್ನಸಂತರ್ಪಣೆ, ಮಧ್ಯಾಹ್ನ 3.30 ಅಯ್ಯಪ್ಪ ವೃತದಾರಿ ಸ್ವಾಮಿಗಳೊಂದಿಗರ ಮೆರವಣಿಗೆಯೊಂದಿಗೆ ಶಬರಿಮಲೈ ಯಾತ್ರೆ ಜರಗಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸದಾಶಿವ ಶಾಂತಿ (ಪುರೋಹಿತರು) ಅಶೀರ್ವಚನ ನೀಡಲಿದ್ದಾರೆ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್ ಇದರ ಅಧ್ಯಕ್ಷರಾದ ಕಲಾಯಿ ಕೃಷ್ಣ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಹುಲ್ ನಾರ್ವೇಕರ್ ಸಭಾಪತಿ, ಮಹಾರಾಷ್ಟ್ರ ವಿಧಾನ ಸಭಾ, ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಮುಂದಿ, ಗೌರವ ಅತಿಥಿಗಳಾಗಿ ವೇಣುಗೋಪಾಲ ಶೆಟ್ಟಿ ಮಾಜಿ ಅಧ್ಯಕ್ಷರು ಥಾಣೆ ಬಂಟ್ಸ್ ಅಸೋಸಿಯೇನ್, ಭರತ್ ಶೆಟ್ಟಿ ಉದ್ಯಮಿ, ಉಮಾ ಕೃಷ್ಣ ಶೆಟ್ಟಿ ಮಜಿ ಕಾರ್ಯಾಧ್ಯಕ್ಕೆ ಮಹಿಳಾ ವಿಭಾಗ ಬಂಟರ ಸಂಘ, ಮುಂಬಯಿ, ಉದಯ ಕೋಟೇಶ್ವರ್ (ಮ್ಹಾಲಕರು ಶ್ರೀನಿಧಿ ಹಾಸ್ಪಿಟಾಲಿಟಿ, ರತ್ನಾಕರ ಎಂ. ಶೆಟ್ಟಿ, ವಸಾಯಿ ಮಾಲಿಕರು, ಹೋಟೆಲ್ ಡ್ರಿಮ್ ಲ್ಯಾಂಡ್, ಸುರೇಶ್ ಕೆ. ಶೆಟ್ಟಿ, ಮುಲುಂಡ್ ಮಾಲಕರು, ಹೋಟೆಲ್ ಪೂಜಾ, ರಾಜೇಶ್ ಹೆಗ್ಡೆ ಹೋಟೆಲ್ ಉದ್ಯಮಿ, ಕರುಣಾಕರ ಪೂಜಾರಿ ಹೋಟಲ್ ಉದ್ಯಮಿ, ಉಪಸ್ಥಿತರಿರುವರು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿ ಶ್ರೀ ಅಯ್ಯಪ್ಪ ದೇವರ ಕೃಪೆಗೆ ಪಾತ್ರರಾಗ ಬೇಕೆಂದು
ಶ್ರೀ ಅಯ್ಯಪ್ಪ ಸೇವಾ ಫೋರ್ಟ್, ಮುಂಬಯಿ ಹಾಗೂ ಶ್ರೀ ಅಯ್ಯಪ್ಪ ಸ್ಪೋಟ್ಸ್ ಸಮಿತಿ ಕ್ಲಬ್ (ರಿ) ಫೋರ್ಟ್, ಮುಂಬಯಿ ಇದರ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಅಯ್ಯಪ್ಪ ವೃತಧಾರಿಗಳು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.