24.3 C
Karnataka
April 5, 2025
ಕ್ರೀಡೆ

ತುಳು ಸಂಘ ಬೊರಿವಲಿ, ಯುವ ವಿಭಾಗದಿಂದ ಗಣ್ಯರ ಉಪಸ್ಥಿತಿಯಲ್ಲಿ ಯಶಸ್ವೀ ಮ್ಯಾರಥಾನ್



.

.

ಮುಂಬಯಿ : ತುಳು ಸಂಘ ಬೊರಿವಲಿಯ ಯುವ ವಿಭಾಗವು ಮೊದಲ ಬಾರಿಗೆ ಜ. 5 ರಂದು ಮುಂಜಾನೆ ಬೊರಿವಲಿ ಪೂರ್ವ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ, ಇಲ್ಲಿ ಮಿನಿ ಮ್ಯಾರಥಾನ್ ಆಯೋಜಿಸಿದ್ದು ನೂರಾರು ಹಿರಿ ಕಿರಿಯ ತುಳು ಕನ್ನಡಿಗರು ಪಾಲ್ಗೊಂಡಿದ್ದರು. ಮ್ಯಾರಥಾನ್ 2 ವರ್ಗ 10 ಕಿಮೀ ಮಿನಿ-ಮ್ಯಾರಥಾನ್ ಮತ್ತು 3 ಕಿಮೀ ಫನ್ ರನ್ ಆಯೋಜಿಸಲಾಗಿತ್ತು.
ಬಿ.ಸಿ.ಸಿ.ಐ. ಯ ಮಾಜಿ ಜೊತೆ ಕಾರ್ಯದರ್ಶಿ ಡಾ. ಪಿ. ವಿ. ಶೆಟ್ಟಿ, ತುಳು ಸಂಘ ಬೊರಿವಲಿಯ ಅಧ್ಯಕ್ಷ ಹರೀಶ್ ಮೈಂದನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ, ಸಲಹಾ ಸಮಿತಿಯ ಪ್ರದೀಪ್ ಸಿ. ಶೆಟ್ಟಿ ಕೊಳಕೆಬೈಲು, ಸಂಘದ ಸ್ಥಾಪಕಾಧ್ಯಕ್ಷ ವಾಸು ಪುತ್ರನ್, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಕೋಶಾಧಿಕಾರಿ ದಿವಾಕರ ಕರ್ಕೇರ, ಟಿ. ವಿ. ಪೂಜಾರಿ, ತಿಲ್ಲೋತ್ತಮ ವೈದ್ಯ, ಚಂದ್ರಹಾಸ ಬೆಳ್ಚಡ, ಅನಿಲ್ ಶೆಟ್ಟಿ, ವಿಜಯಲಕ್ಷ್ಮಿ ದೇವಾಡಿಗ, ಶಿವರಾಮ ಅಮೀನ್, ಅನಿಲ್ ಕುಮಾರ್ ಶೆಟ್ಟಿ ಮತ್ತು ಸಂಘದ ಇತರ ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರುಗಳ ಸಹಕಾರದಿಂದ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ಇವರ ಮಾರ್ಗದರ್ಶನದಲ್ಲಿ ನಡೆದ ಈ ಮಿನಿ ಮ್ಯಾರಥಾನ್ ಗೆ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ ದ ನಿರ್ದೇಶಕ ಮಲ್ಲಿಕಾರ್ಜುನ ಜಿ, ಮತ್ತು ಓಂ ಜ್ಯುವೆಲ್ಲರ್ಸ್ ನ ಮುಖೇಶ್ ಜಖಿಯಾ, ಚಾಲನೆಯಿತ್ತರು. ಸಂಘದ ಗೌರವ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿಯವರು ದೊಡ್ಡ ಮೊತ್ತದ ದೇಣಿಗೆಯಿತ್ತು ಈ ಕಾರ್ಯಕ್ರಮಕ್ಕೆ ಸಹಕರಿಸಿದ್ದಾರೆ.

ಡಾ. ಪಿ. ವಿ. ಶೆಟ್ಟಿ, ಮಲ್ಲಿಕಾರ್ಜುನ ಜಿ, ಮುಖೇಶ್ ಜಖಿಯಾ ಇವರು ಮ್ಯಾರಥಾನ್ ನಲ್ಲಿ ಬಾಗವಹಿಸಿದ ಎಲ್ಲರಿಗು ಶುಭ ಕೋರಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಪ್ರಥಮ, ದ್ವೀತೀಯ ಹಾಗೂ ತೃತೀಯ ವಿಜೇತರಿಗೆ ಟ್ರೋಫಿಗಳು ಮತ್ತು ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ವಿಜೇತರಿಗೆ ವಿಶೇಷ ಬಹುಮಾನ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಬಹುಮಾನ ನೀಡಲಾಯಿತು. ಉಪಹಾರದ ನಂತರ ಭಾಗವಹಿಸಿದ ಎಲ್ಲರಿಗೂ ಟಿ ಶರ್ಟ್‌, ಪ್ರಮಾಣ ಪತ್ರ ಟ್ರೋಫಿಗಳು ಮತ್ತು ವಿಶೇಷ ಬಹುಮಾನ ನೀಡಲಾಯಿತು. ನ್ಯಾ. ಅನ್ವಿತ ಐಲ್ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

ತುಳು ಸಂಘದ ಇತಿಹಾಸದಲ್ಲಿ ಯುವ ಜನಾಂಗಕ್ಕೆ ಸ್ಫೂರ್ತಿ ನೀಡಲು ಇಂತಹ ಕಾರ್ಯಕ್ರಮ ಪ್ರಥಮ ಬಾರಿ ನಮ್ಮ ಯುವ ವಿಭಾಗದಿಂದ ನಡೆದಿದೆ. ಸಂಘದ ವೆಭ್ ಸೈಟ್ ನ್ನು ಆದಷ್ಟು ಬೇಗನೆ ಲೋಕಾರ್ಪಣೆ ಮಾಡಲಿದ್ದೇವೆ. ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನಾಂಗವನ್ನು ಸಂಘದಲ್ಲಿ ಕ್ರೀಯಾಶೀಲರನ್ನಾಗಿ ಮಾಡುವ ಪ್ರಯತ್ನ ನಮ್ಮದು. – ಹರೀಶ್ ಮೈಂದನ್, ಅಧ್ಯಕ್ಷರು ತುಳು ಸಂಘ ಬೊರಿವಲಿ.

ತುಳು ನಾಡಿನ ಯುವ ಜನಾಂಗಕ್ಕೆ ಸ್ಪೂರ್ತಿ ತುಂಬುವ ಇಂತಹ ಹೊಸ ಯೋಜನೆಗೆ ನನ್ನ ಸಹಾಯ ಹಾಗೂ ಪ್ರೋತ್ಸಾಹವಿದೆ. ತುಳು ಸಮಾಜ ಬಾಂಧವರು ಈ ರೀತಿ ಹಿರಿ ಕಿರಿಯರಿಗೆ ತುಂಬುವ ಕಾರ್ಯ ಮಾಡುತ್ತಿರಲಿ.
-ಡಾ. ಪಿ. ವಿ. ಶೆಟ್ಟಿ, ಬಿ.ಸಿ.ಸಿ.ಐ. ಯ ಮಾಜಿ ಜೊತೆ ಕಾರ್ಯದರ್ಶಿ ಹಾಗೂ ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ

Related posts

ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಸಮಾರೋಪ ಸಮಾರಂಭ

Mumbai News Desk

ದುಬೈನಲ್ಲಿ ಟೀಮ್ ಇಂಡಿಯಾದ ಐವರು ಸ್ಪಿನ್ನರ್ ಗಳ ರಣನೀತಿಯ ‘ಯಶಸ್ಸಿನ ರೂವಾರಿ ’ವರುಣ್ ಚಕ್ರವರ್ತಿ

Mumbai News Desk

ಮಲಾಡ್ ಕನ್ನಡ ಸಂಘ ಒಳಾಂಗಣ ಕ್ರೀಡೆ ಸ್ಪರ್ಧೆ.

Mumbai News Desk

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ ; ಬುಮ್ರಾ, ಶಮಿ ವಾಪಸ್‌.

Mumbai News Desk

ರಾಷ್ಟ್ರೀಯ ಮಟ್ಟದ ಕರಾಟೆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹರ್ಷಿತಾ ಪೂಜಾರಿ   ಇನ್ನಂಜೆ

Mumbai News Desk

ಎನ್ ಕೆ ಇ ಎಸ್ ಪ್ರೊ ಕಬಡ್ಡಿ ಸೀಸನ್ 1 – ಬಹುಮಾನ ವಿತರಣೆ

Chandrahas
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ