.
.

ಸಾಂತಾಕ್ರೂಜ್ : ಹೊರನಾಡ ಕನ್ನಡಿಗರ ಪ್ರತಿಷ್ಟಿತ ಜಾತಿ ಯ ಸಂಘ-ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 64ನೇ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭವು ದಿನಾಂಕ 11ಜನೇವರಿ 2025ರ ಶನಿವಾರ ಸಾಯಂಕಾಲ 4. 00 ಗಂಟೆಯ ಸುಮಾರಿಗೆ ಸಾಂತಾಕ್ರೂಜ್ ಪೂರ್ವದ ನೆಹರು ಮಾರ್ಗದಲ್ಲಿರುವ ಬಿಲ್ಲವ ಭವನದ 5ನೇ ಮಹಡಿಯ ಗುರು ನಾರಾಯಣ ಆಡಿಟೋರಿಯಂ ನಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾತೃ ಸಂಸ್ಥೆಯ ಅಧ್ಯಕ್ಷ ಶ್ರೀ ಹರೀಶ ಜಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.

ಶಾಲೆಯ 64ನೇ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಕರುಣಾ ಪ್ರಕಾಶ ನಾಯಕ್ (ನಿರ್ದೇಶಕರು ಇನೋ ಅನಾಲಿಟಿಕಲ್ ಲ್ಯಾಬೋರೇಟರೀಸ ಪ್ರಾವೈಟ್ ಲಿಮಿಟೆಡ್ ಡೊಂಬಿವಲಿ) ಮತ್ತು ಗೌರವ ಅತಿಥಿಗಳಾಗಿ ಶ್ರೀ
ಪ್ರಕಾಶ ಶೆಟ್ಟಿ (ಚಾರ್ಟೆಡ್ ಅಕೌಂಟ್ ಮತ್ತು ಸಮಾಜ ಸೇವಕ ಸಂತಾಕ್ರೂಜ್ ) ಶಾಲೆಯ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು,ಕನ್ನಡಾಭಿಮಾನಿಗಳು,
ಶಿಕ್ಷಣ ಪ್ರೇಮಿಗಳು,ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಮಾತೃಸಂಸ್ಥೆಯ ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಹರೀಶ ಜಿ ಸಾಲಿಯಾನ್ ಸಲಹೆಗಾರ ಶ್ರೀ ಬನ್ನಂಜೆ ರವೀಂದ್ರ ಅಮೀನ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಮಲ್ಲಿಕಾರ್ಜುನ ಈ.ಬಡಿಗೇರ ಮತ್ತು ಶಿಕ್ಷಕ ವೃಂದವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಯಕ್ರಮದ ಮೊದಲು ಲಘು ಉಪಹಾರ ಮತ್ತು ರಾತ್ರಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.