ಸಾಯನ್ ನಲ್ಲಿ ಸದಾನಂದ ಹೆಲ್ದಿ ಲಿವಿಂಗ್ (Sadanand Healthy Living) ವೈದ್ಯಕೀಯ ಕೇಂದ್ರದ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರುವ, ಡಾ. ಸದಾನಂದ ಆರ್ ಶೆಟ್ಟಿ ಅವರು ಮುಂಬೈಯ ಉತ್ತಮ ಡಾಕ್ಟರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಔಟ್ ಲುಕ್ ಮೆಗಾಸಿನ್ ಪ್ರತಿ ವರ್ಷ ನೆಬಿ ಮೀಡಿಯಾದ ಮೂಲಕ ದೇಶದ ಪ್ರಾಮುಖ್ಯ ನಗರಗಳಲ್ಲಿ ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳ ಸಮೀಕ್ಷೆ ನಡೆಸಿ ಪ್ರಶಸ್ತಿ ನೀಡುತ್ತಿದ್ದು, ಮುಂಬೈಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹೃದಯಶಾಸ್ತ್ರ ವಿಭಾಗಗಳಲ್ಲಿ ಸಾಯನ್ ನ ಡಾ. ಸದಾನಂದ ಆರ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದೆ.
ಡಾ. ಸದಾನಂದ ಶೆಟ್ಟಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಡಾಕ್ಟರೇಟ್ ಇನ್ ಮೆಡಿಕಲ್ ( ಹೃದ್ರೋಗ), ಎಂ. ಡಿ. (ಮೆಡಿಕಲ್ ), ಎಫ್ಎಸಿಸಿ, ಎಫ್ಎಸ್ಸಿಎಐ ( ಅಮೇರಿಕ) ಪದವೀಧರರಾಗಿದ್ದರೆ.
ಲಿಪಿಡ್ ಅಸೋಸಿಯೇಷನ್ ಆಫ್ ಇಂಡಿಯಾ, ಇದರ ಸಂಘಟನಾ ಕಾರ್ಯದರ್ಶಿಯಾಗಿರುವ ಡಾ. ಸದಾನಂದ ಶೆಟ್ಟಿ ಅವರು, ಡಿ. ವೈ. ಪಾಟೀಲ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಇದರ ವಿಶ್ರಾಂತ ಪ್ರಾಚಾರ್ಯ ಆಗಿರುವರು. ಪ್ರಸ್ತುತ ಡಾ. ಸದಾನಂದ ಶೆಟ್ಟಿ ಅವರು ಸೋಮಯ್ಯ ಸೂಪರ್ ಸ್ಪೆಷಾಲಿಟಿ ಇನ್ಸ್ಟಿಟ್ಯೂಟ್, ಮುಂಬಯಿ, ಇದರ ಹೃದ್ರೋಗ ವಿಭಾಗದ ನಿರ್ದೇಶಕರಾಗಿರುವರು.
ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ, ಅತಿಕಾರಿಬೆಟ್ಟು ದೆಪ್ಪುಣಿಗುತ್ತು ಮನೆತನದವರಾದ ಡಾ. ಸದಾನಂದ ಶೆಟ್ಟಿ ಅವರು ಮುಂಬೈ ಬಂಟ್ಸ್ ಮೆಡಿಕಲ್ ಪ್ರಾಕ್ಟಿಶನರ್ಸ್ ಅಸೋಸಿಯೇಶನ್ ಸಂಚಾಲಕರಾಗಿಯೂ, ಕನ್ನಡ ಸಂಘ ಸಯನ್ ನ ಸಲಹೆಗಾರರಾಗಿಯೂ ಸೇವಾ ನಿರತರಾಗಿರುವರು.
ಡಾ. ಸದಾನಂದ ಶೆಟ್ಟಿ ಅವರಿಗೆ ಸತತವಾಗಿ 5ನೇ ಬಾರಿ ಬೆಸ್ಟ್ ಡಾಕ್ಟರ್ ಆಫ್ ಮುಂಬೈ ಪ್ರಶಸ್ತಿ ಲಭಿಸಿರುವುದು ವಿಶೇಷವಾಗಿದೆ.
.