24.7 C
Karnataka
April 3, 2025
ಪ್ರಕಟಣೆ

ಜ.12. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಡೊಂಬಿವಿಲಿ ಸಮಿತಿಯ ವಾರ್ಷಿಕೋತ್ಸವ,



.

.

ನೃತ್ಯ ಸ್ಪರ್ಧೆ,ಸಭಾ ಕಾರ್ಯಕ್ರಮ, ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ, ಶತಮಾನದ ಹಿರಿಮೆಗೆ ಪಾತ್ರವಾದ ಮುಂಬಯಿಯ ಪ್ರತಿಷ್ಠಿತ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿಯು ತನ್ನ ಕಾರ್ಯ ಸಿದ್ಧಿಗಳಿಂದ ಅಪಾರವಾದ ಪ್ರಸಿದ್ಧಿಯನ್ನು ಗಳಿಸಿದೆ.ಸ್ವಾತಂತ್ರ್ಯ ಪೂರ್ವದಲ್ಲೇ ದೇಶ ಕಾಲ ಬ್ರಿಟಿಷ್ ಆಳ್ವಿಕೆಯಲ್ಲಿ ನಲುಗಿ ಹೋಗಿದ್ದ ಮುಂಬಯಿ ನೆಲದಲ್ಲಿ  ಯಾವುದೇ ಮೂಲ ಸೌಕರ್ಯ ಇಲ್ಲದ ಕಾಲದಲ್ಲಿ ದಕ್ಷಿಣ ಕನ್ನಡ ದಿಂದ ಮೊತ್ತ ಮೊದಲಿಗರಾಗಿ ಮುಂಬಯಿ ಸೇರಿದವರು ಮೊಗವೀರರು. ಸಂಘಟನೆಯ ಮಹತ್ವವನ್ನು ಅರಿತಿದ್ದ ಅವರು ತಮ್ಮ ಅಸ್ತಿತ್ವವನ್ನು ಗಟ್ಟಿ ಗೊಳಿಸುವ ನೆಲೆಯಲ್ಲಿ ಸಂಘಟನೆ ಕಟ್ಟುವ ಸಾಹಸಕ್ಕೆ ಕೈಹಾಕಿದ್ದರು.ಅದು ಬೇರೆ ಬೇರೆ ಸಮುದಾಯದವರಿಗೂ ಸಂಘಟನೆ ಕಟ್ಟಲು ಸ್ಫೂರ್ತಿಯಾಯಿತು.

ಮೊಗವೀರ ಬಂಧುಗಳಾದ ದಿ. ನಡಿ,ಸಾಹುಕಾರ್ ಸುರತ್ಕಲ್ ತಿಮ್ಮಪ್ಪ ದೇವುಜಿ, ವಿದ್ವಾಂಸ ಬೇಳೂರು ಭಜನೆ ತ್ಯಾಂಪ, ಒಳಲಚ್ಚಿಲು ಲಿಂಗಪ್ಪ, ಕಂಣ್ಣಾಂಗಾರ್ ಪೊಂಕ್ರ, ಎರ್ಮಾಳ್ ಗುರುವಣ್ಣ ಸೇರಿ ( 1902) ರಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯನ್ನು ಸ್ಥಾಪಿಸಿ ಸಮಾಜದ ಏಳಿಗೆಗೆ ನಾಂದಿ ಹಾಡಿದ್ದರು.ಕರಾವಳಿಯ ಸಂಘರ್ಷದ ಬದುಕಿನಿಂದಾಗಿ ರಕ್ತಗತವಾಗಿ ಬಂದಿದ್ದ ಸಂಘಟನಾ ಸಾಮರ್ಥ್ಯ ಮತ್ತು ನಿಸ್ವಾರ್ಥ ಮನೋಭಾವದ ಅವರಿಗೆ ಸಮಾಜಕ್ಕೆ ಬೆಳಕಾಗುವ ಯೋಜನೆ,ಮೂಲಸೌಕರ್ಯವನ್ನು ಒದಗಿಸುವುದೇ ಮುಖ್ಯ ಉದ್ದೇಶವಾಗಿತ್ತು. ಆ ನೆಲೆಯಲ್ಲಿ ಕಾರ್ಯ ನಿರ್ವಹಿಸಿದ ಮಂಡಳಿ ರಾತ್ರಿಶಾಲೆ,ಗ್ರಂಥಾಲಯ,ವಸತಿ ಗೃಹ,ಮೊಗವೀರ ಪತ್ರಿಕೆ,ಮೊಗವೀರ ಬ್ಯಾಂಕ್,ಆರೋಗ್ಯ ನಿಧಿ,ವಿದ್ಯಾರ್ಥಿ ವೇತನ  ಮುಂತಾದ ಸಮಾಜಪರ ಯೋಜನೆಗಳನ್ನು ಸಮಾಜಕ್ಕೆ ಅರ್ಪಿಸುವುದರೊಂದಿಗೆ ಹಲವು ಪ್ರಥಮಗಳನ್ನು ಸಾಧಿಸಿದ ಹೆಗ್ಗಳಿಕೆಯೊಂದಿಗೆ ಇತಿಹಾಸವನ್ನು ನಿರ್ಮಿಸಿದೆ.

ಎರಡೂವರೆ ದಶಕಗಳ ಕಾಲ ಮಂಡಳಿಯ ಸಾರಥ್ಯವನ್ನು ವಹಿಸಿದ್ದ ಸಿಎ, ಕೆ. ಆರ್.ಪುತ್ರನ್ ಹೊಸಬೆಟ್ಟು ಮಂಡಳಿಗೆ ಗಟ್ಟಿಯಾದ ಬುನಾದಿಯನ್ನು ಹಾಕಿಕೊಟ್ಟರು.ಅವರ ಸಮರ್ಥ ನಾಯಕತ್ವದಲ್ಲಿ ಮಂಡಳಿ ಶತಮಾನೋತ್ಸವವನ್ನು 2002 ರಲ್ಲಿ ತುಂಬಾ ಅದ್ದೂರಿಯಾಗಿ ಆಚರಿಸಿದೆ.

ಸಮಾಜದ ನಾಯಕ ಅಜಿತ್ ಜಿ. ಸುವರ್ಣ ಅವರ ನೇತೃತ್ವದಲ್ಲಿ ಅಂಧೇರಿಯಲ್ಲಿ ದಶಕಗಳ ಹಿಂದೆ ಸುಸಜ್ಜಿತ ಕಟ್ಟಡ ಲೋಕಾರ್ಪಣೆ ಗೊಂಡಿದೆ. ಸದ್ಯ ಮಂಡಳಿಗೆ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಮಾಜಿ ಬ್ಯಾಂಕರ್ ಎಚ್.ಅರುಣ್ ಕುಮಾರ್ ಅಧ್ಯಕ್ಷರಾಗಿದ್ದಾರೆ.

ಮಂಡಳಿಯ ಸದಸ್ಯರು ಉಪ ನಗರದಲ್ಲೂ ಚದುರಿ ಹೋಗಿದ್ದರಿಂದ ಅವರಿಗೂ ಸ್ಪಂದಿಸುವ ನಿಟ್ಟಿನಲ್ಲಿ  ದಕ್ಷಿಣ ಕನ್ನಡ, ಡೊಂಬಿವಿಲಿ,ಮೀರಾ — ಭಾಯಿಂದರ್, ವಸಾಯಿ ಮತ್ತು ವಾಶಿಯಲ್ಲಿ ಸ್ಥಳೀಯ ಸಮಿತಿಗಳನ್ನು ಹೊಂದಿದ್ದು, ಆ ಸಮಿತಿಗಳು ಕೂಡ ಉತ್ತಮ ಕಾರ್ಯವೆಸಗುತ್ತಿದೆ.

ಸ್ಥಳೀಯ ಸಮಾಜ ಬಾಂಧವರನ್ನು  ಒಟ್ಟು ಗೂಡಿಸುವುದಕ್ಕಾಗಿ 2007 ರಲ್ಲಿ ಡೊಂಬಿವಿಲಿಯಲ್ಲಿ ಆರಂಭವಾದ ಸ್ಥಳೀಯ ಸಮಿತಿಯು ಕಳೆದ ಹದಿನೆಂಟು ವರ್ಷಗಳಿಂದ ಧಾರ್ಮಿಕ ಮುಂದಾಳು,ಸಮಿತಿಯ ಕಾರ್ಯಾಧ್ಯಕ್ಷರಾದ ಶೇಖರ್ ಎ.ಮೆಂಡನ್,ಮತ್ತು ಸಂಘಟಕ, ಮಾಜಿ ಕಾರ್ಯಾಧ್ಯಕ್ಷ ಯದುವೀರ್ ಬಿ.ಪುತ್ರನ್ ಅವರ ಸಮರ್ಥ ನಾಯಕತ್ವದಲ್ಲಿ,ಪದಾಧಿಕಾರಿಗಳಾದ ಉಮೇಶ್ ಕೆ.ಮೆಂಡನ್,ಕೇಶವ ಎಸ್.ಬಂಗೇರ ಇತರ ಸಮಿತಿ ಸದಸ್ಯರು ಮತ್ತು ಮಹಿಳಾ ಸಮಿತಿಯ ಸದಸ್ಯರು ಸೇರಿ ಕ್ರಿಯಾಶೀಲವಾಗಿ ಕಾರ್ಯ ವೆಸಗುತ್ತಿದ್ದು ನಿರಂತರ ಸಾಮಾಜಿಕ,ಶೈಕ್ಷಣಿಕ,ಧಾರ್ಮಿಕ, ಸಾಂಸ್ಕೃತಿಕ ಮತ್ತು ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತಾ ಬಂದಿವೆ.

ಈಗಾಗಲೇ ಸಮಿತಿಯ ಕಾರ್ಯಾಲಯದಲ್ಲಿ ಪ್ಲೇ ಗ್ರೂಪ್ ( ಅಂಕುರ್) 2010 ರಿಂದ ಆರಂಭ ಗೊಂಡಿದ್ದು ಸುಮಾರು ಮಕ್ಕಳು ಇದರ ಪ್ರಯೋಜನೆಯನ್ನು ಪಡೆದಿದ್ದಾರೆ. ಸದ್ಯ ಇದರಲ್ಲಿ ನರ್ಸರಿ, ಜೂನಿಯರ್ ಕೆ. ಜಿ ಮತ್ತು ಸಿನಿಯರ್ ಕೆ. ಜಿ ಯ ಮಕ್ಕಳು 80 ರಿಂದ 100 ರ ವರೆಗೆ ಇದ್ದು ಇದಕ್ಕೆ ನಿರಂತರ ಬೇಡಿಕೆ ಇದೆ. ಇನ್ನು ಮುಂದಕ್ಕೆ ಇದನ್ನು ಇನ್ನಷ್ಟು ಎತ್ತರಕ್ಕೆ ವಿಸ್ತರಿಸುವ ಯೋಜನೆಯನ್ನು ಹಾಕಿ ಕೊಂಡಿರುವ ಡೊಂಬಿವಿಲಿ ಸ್ಥಳೀಯ ಸಮಿತಿ ಆ ನಿಟ್ಟಿನಲ್ಲಿ ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸುತ್ತಿದ್ದು ಅಭಿನಂದನೀಯವಾದದು.

  ಜನವರಿ12 ರ ರವಿವಾರದಂದು ಬೆಳಿಗ್ಗೆ10.00 ಘಂಟೆಯಿಂದ ಡೊಂಬಿವಲಿ ಪೂರ್ವದ ಎಂ.ಐ.ಡಿ.ಸಿ ಪರಿಸರಸದ ಸಾವಿತ್ರಿ ಬಾಯಿ ಫುಲೆ ಸಭಾಗೃಹದಲ್ಲಿ

ಡೊಂಬಿವಲಿ ಸ್ಥಳೀಯ ಸಮಿತಿಯ ವಾರ್ಷಿಕೋತ್ಸವ 6ನೇ ನಿಧಿ ಸಂಗ್ರಹಣೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವು ಜರಗಲಿದೆ ಈ   ಸಮಾರಂಭದ ಅಧ್ಯಕ್ಷತೆಯನ್ನು ಮೋಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಅಧ್ಯಕ್ಷ ಎಚ್ ಅರುಣ್ ಕುಮಾರ್ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಉಡುಪಿಯ  ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸಂಸ್ಥಾಪಕ ನಾಡೋಜ ಡಾ ಜಿ.ಶಂಕರ್ ಹಾಗೂ ಅತಿಥಿಗಳಾಗಿ ಉಚ್ಚಿಲದ ಡಿ.ಕೆ.ಮೋಗವೀರ ಮಹಾಜನ ಸಂಘದ ಅಧ್ಯಕ್ಷ ಜಯಾ ಸಿ ಕೋಟ್ಯಾನ್. ದಿವ್ಯಾ ಸಿಪ್ಪಿಂಗ್ ಆಂಡ್ ಕ್ಲೀಯರಿಂಗ್ ಸರ್ವಿಸಸ್ ಪ್ರೆ.ಲಿ ಮುಂಬಯಿಯ ಇದರ ವ್ಯವಸ್ಥಾಪಕ ನಿರ್ದೇಶಕ ವೇದಪ್ರಕಾಶ್ ಶ್ರೇಯಾನ್, ಕಲ್ಯಾಣ್ ಪರಿಸರದ ಖ್ಯಾತ ಸಮಾಜ ಸೇವಕ ಹೋಟೆಲ್ ಉದ್ಯಮಿ ಭಾಸ್ಕರ ಶೆಟ್ಟಿ (ಹೋಟೆಲ್ ಗುರುದೇವ ಕಲ್ಯಾಣ), ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಡಾ  ದಿವಾಕರ ಶೆಟ್ಟಿ ಇಂದ್ರಾಳಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಇದರ ಅಧ್ಯಕ್ಷ  ಹರೀಶ್ ಅಮೀನ್, ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷ ಸುಕುಮಾರ್ ಎನ್ ಶೆಟ್ಟಿ, ಮೋಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿಯ ಇದರ ಮಾಜಿ ಅಧ್ಯಕ್ಷ ಮಹಾಬಲ್ ಕುಂದರ್ ಹಾಗೂ ಮೋಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಇದರ ವಿಶ್ವಸ್ತ ಅಜೀತ ಜಿ ಸುವರ್ಣ ಆಗಮಿಸಲಿದ್ದಾರೆ.          

   ಇದೆ ಸಂದರ್ಭದಲ್ಲಿ ಡೊಂಬಿವಲಿ ಪರಿಸರದ ಸಂಘ ಸಂಸ್ಥೆಗಳಿಗೆ  ನೃತ್ಯ ಸ್ಪರ್ಧೆ ಆಯೋಜಿಸಲಾಗಿದ್ದು,

ಈ ವಿಶೇಷ  ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಮೋಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಇದರ ಉಪಾಧ್ಯಕ್ಷರಾದ ಸತೀಶಕುಮಾರ್ ಶ್ರೇಯಾನ್, ಅರವಿಂದ ಎಲ್ ಕಾಂಚನ್,  ಗೌ. ಪ್ರ.ಕಾರ್ಯದರ್ಶಿ ದಿಲೀಪ್ ಕುಮಾರ ಮುಲ್ಕಿ, ಗೌ.ಕೋಶಾಧಿಕಾರಿ ಪ್ರತಾಪಕುಮಾರ್ ಕರ್ಕೆರ, ಮೋಗವೀರ ಮಂಡಳಿ ಮುಂಬಯಿ ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಮೆಂಡನ್,  ಗೌ.ಕಾರ್ಯದರ್ಶಿ ಉಮೇಶ್ ಕೆ ಮೇಂಡನ್,  ಗೌ ಕಾರ್ಯದರ್ಶಿ ಕೆಶವ್ ಎಸ್ ಬಂಗೇರ,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದಮಯಂತಿ ಪಿ ಕೋಟ್ಯಾನ್, ಗೌ.ಕಾರ್ಯದರ್ಶಿ ಗೀತಾ ಎಸ್ ಮೇಂಡನ್ , ಗೌ ಕೋಶಾಧಿಕಾರಿ ಸವೀತಾ ಎನ್ ಸಾಲ್ಯಾನ್ ಹಾಗೂ ಸಮಸ್ತ ಕಾರ್ಯಕಾರಿ ಮಂಡಳಿ ಹಾಗೂ ಮಹಿಳಾ ವಿಭಾಗದ  ಸದಸ್ಯರು ಪ್ರಕಟನೆಯಲ್ಲಿ  ವಿನಂತಿಸಿದ್ದಾರೆ.

Related posts

ಡಿ.17 ರಂದು ಡೊಂಬಿವಲಿ ಜನ ಗಣ ಮನ ಶಾಲಾ ವಠಾರದಲ್ಲಿ “ಕಂಸ ದಿಗ್ವಿಜಯ ಕಂಸ ವಧೆ” ಪೌರಾಣಿಕ ಯಕ್ಷಗಾನ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ (ಸಾವರ್ಕರ್ ನಗರ್ -ಥಾಣೆ)ಅ. 23ರಂದು ದೇವರ ನೂತನ ಪೀಠ ಮಂಟಪ ಹಾಗೂ ದ್ವಾರ ಪ್ರತಿಷ್ಠಾಪನೆ.

Mumbai News Desk

ಜು. 7 ರಂದು ಗೊರೆಗಾಂವ್ ಕರ್ನಾಟಕ ಸಂಘದ 66ನೇ ವಾರ್ಷಿಕ ಮಹಾಸಭೆ

Mumbai News Desk

ಏ. 12 ರಿಂದ 21 ರ ವರಗೆ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ 62 ನೇ ವಾರ್ಷಿಕ ಮಹೋತ್ಸವ

Mumbai News Desk

ಶ್ರೀ ಅಯ್ಯಪ್ಪ ಸೇವ ಸಮಿತಿ, ಕಿಸನ್ ನಗರ ಥಾಣೆ – ಡಿ.16, ಮತ್ತು 17ರಂದು 23ನೇ ವಾರ್ಷಿಕ ಮಹಾಪೂಜೆ.

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಯಲ್ಲಿ ಕಾರ್ತಿಕ ಮಾಸದ ದೀಪೋತ್ಸವ

Mumbai News Desk