ಮುಂಬಯಿ ಜ 8.ಶತಮಾನದ ಹಿಂದೆಯೇ ದಕ್ಶಿಣ ಕನ್ನಡ ಹಾಗೂ ಕಾಸರಗೋಡಿನ ಮಲೆಯಾಳಿ ಮಾತೃಬಾಷೆಯ ಕರಾವಳಿ ಕನ್ನಡಿಗರು ಮುಂಬಯಿಗಾಗಮಿಸಿ ಮುಂಬಯಿಯ ಕೋಟೆ ಬಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸುತ್ತಿದ್ದು ಕರಾವಳಿಯ ಮೋಯಾ ಸಮುದಾಯದ ಹಿರಿಯರು ಆಗಲೇ ಶೈಕ್ಷಣಿಕವಾಗಿ ಶ್ರೀಮಂತರಾದ್ದು 88 ನೇ ವರ್ಷದ ಹಿಂದೆಯೇ ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ನ್ನು ಸ್ಥಾಪಿಸಿದ್ದು ಮಹಾನಗರ ಮತ್ತು ಉಪನಗರಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಮೋಯಾ ಕ್ರೆಟಿಟ್ ಸೊಸೈಟಿ ಮೂಲಕ ಹಣಕಾಸು ಸಂಸ್ಥೆ, ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಮೂಲಕ ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ ಮುಂಬಯಿ ಹೊರವಲಯದಲ್ಲಿ ದೇವಸ್ಥಾನವನ್ನು ಸ್ಥಾಪಿಸಿ ಧಾರ್ಮಿಕ ಕ್ಷೇತ್ರ ದಲ್ಲೂ ಇಂದು ಗುರಿತಿಸಲ್ಪಡುತ್ತಿದ್ದು ಇದೀಗ ಯಶಸ್ವೀ 88 ವರ್ಷಗಳನ್ನು ಪೂರೈಸುತ್ತಿದೆ.
ಜ. 12ರಂದು ಬೆಳಿಗೆ 10 ರಿಂದ ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, (ವೈಯಂಬಿಎ) ಇದರ ಅಧ್ಯಕ್ಷರಾದ ಯಶವಂತ ಎ. ಕೆ. ಇವರ ಅಧ್ಯಕ್ಷತೆಯಲ್ಲಿ ದಹಿಸರ್ ಚೆಕ್ ನಾಕ ಬಳಿಯ ಲತಾ ಮಂಗೇಶ್ಕರ್ ಸಭಾಗೃಹದಲ್ಲಿ ನಡೆಯಲಿದ್ದು ಮಹಾರಾಷ್ಟ್ರದ ಮಾನ್ಯ ಸಚಿವರಾದ ಪ್ರತಾಪ್ ಸರ್ ನಾಯ್ಕ್ ಮುಖ್ಯ ಅತಿಥಿಯಾಗಿ ಆಗಮಿಸಲಿರುವರು. ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಲ್ಲಾರ್, ಠಾಣೆ ಕನ್ನಡ ಸಂಘದ ಅಧ್ಯಕ್ಷ ಶೇಖರ ಕೆ. ಶೆಟ್ಟಿ, ಧಾಣೆ ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ, ಉದ್ಯಮಿ ರಘುನಾಥ್ ರೈ,
ಮತ್ತಿತರ ಗಣ್ಯರು ಆಗಮಿಸಲಿರುವರು.
ದಿನಪೂರ್ತಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಮಾಜದ ಹಿರಿ ಕಿರಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದು ಉಚ್ಚಿಲ, ಉದ್ಯಾವರ ಮತ್ತು ಐಲ ಬೋವಿ ಶಾಲೆಯ ಮಕ್ಕಳಿಂದ ನೃತ್ಯ ಪ್ರದರ್ಶನವಿದೆ ಹಾಗೂ ಮಕ್ಕಳಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಮಾಜದ ಸಾಧಕರಾದ ತಾರನಾಥ ಡಿ. ಉಚ್ಚಿಲ್, ದಯಾನಂದ ವಿ. ಉಚ್ಚಿಲ್, ರವಿ ಎ. ಉದ್ಯಾವರ್, ನಾರಾಯನ್ ಬಿ. ಉದ್ಯಾವರ್ ಮತ್ತು ಮಾಧವ ಬಿ ಐಲ್ ಇವರನ್ನು ಸನ್ಮಾನಿಸಲಾಗುವುದು. ಅಲ್ಲದ ಸಾಧಕ ಪ್ರಶಸ್ತಿ ಮತ್ತು ಪ್ರತಿಭಾವಂತ ಮಕ್ಕಳಿಗೆ ಗೌರವಾರ್ಪಣೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಹಾಗು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರೋತ್ಸಾಹಿಸಿ ಸಹಕರಿಸಬೇಕಾಗಿ ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್ ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.
——