
ಮುಂಬಯಿಯ ಪ್ರತಿಷ್ಟಿತ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಬಿಲ್ಲವ ಸೇವಾ ಸಂಘ ಕುಂದಾಪುರ, ಇದರ ಆಶ್ರಯದಲ್ಲಿ ಕೋಟಿ -ಚೆನ್ನಯ ಕ್ರೀಡೋತ್ಸವ -2025 ಜನವರಿ 12ರ ಆದಿತ್ಯವಾರ, ಬೆಳಿಗ್ಗೆ 7.30 ಗಂಟೆಯಿಂದ, ಸಂಜೆ 5ರ ತನಕ ಸಯನ್ ಪೂರ್ವ ಜಿ. ಟಿ. ಬಿ. ನಗರದ ಗುರು ನಾನಕ್ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.
ಸಂಫದ ಅಧ್ಯಕ್ಷರಾದ ಸಿ. ಎ. ಪೂಜಾರಿ ಅವರ ಮುಂದಾಳತ್ವದಲ್ಲಿ ಜರಗಲಿರುವ ಕ್ರೀಡಾಕೂಟದ ಉದ್ಘಾಟನೆ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಕಾರ್ಯಾಧ್ಯಕ್ಷ ಎನ್. ಟಿ.ಪೂಜಾರಿ ಅವರು ಮಾಡಲಿರುವರು.
ಮುಖ್ಯ ಅತಿಥಿಯಾಗಿ ಬಿಲ್ಲವರ ಎಸೋಸಿಯೇಷನ್ ನ ಅಧ್ಯಕ್ಷ ಹರೀಶ್ ಜಿ ಅಮೀನ್, ಗೌರವ ಅತಿಥಿಗಳಾಗಿ ಉದ್ಯಮಿ ಎನ್ ಕೆ ಬಿಲ್ಲವ, ಹೋಟೆಲ್ ಉದ್ಯಮಿ ಸುರೇಶ್ ಪೂಜಾರಿ ಬಡಕೆರೆ, ಅರುಣ ಟೆಕ್ಸ್ ಟೈಲ್ಸ್ ನ ವಿಶ್ವನಾಥ್ ಎ ಪೂಜಾರಿ , ಬಾಡಿ ಬಿಲ್ಡಿಂಗ್ ನಲ್ಲಿ ಚಿನ್ನದ ಪದಕ ವಿಜೇತ ಸತೀಶ್ ಪೂಜಾರಿ, ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಗಗನ್ ಅಮೀನ್ ಭಾಗವಹಿಸಲಿರುವರು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಶ್ರೀಧರ್ ಪೂಜಾರಿ, ಗೌರವ ಅತಿಥಿಗಳಾಗಿ ಪರಮೇಶ್ವರ ಪೂಜಾರಿ, ಕವಿ, ಲೇಖಕ, ರಂಗ ನಟ ಗೋಪಾಲ ತ್ರಾಸಿ, ಉದ್ಯಮಿಗಳಾದ ರಮೇಶ್ ಬಿಲ್ಲವ, ಮಹೇಶ್ ಪೂಜಾರಿ ಉಪಸ್ಥಿತರಿರುವರು.
ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು, ಯಶಸ್ಸುಗೊಳಿಸುವಂತ್ತೆ ಸಂಘದ ಸಂಘದ ಗೌರವಾಧ್ಯಕ್ಷ ಸುರೇಶ್ ಎಸ್ ಪೂಜಾರಿ, ಅಧ್ಯಕ್ಷ ಸಿ ಎ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಸಿ ಪೂಜಾರಿ, ಗೌರವ ಕೋಶಾಧಿಕಾರಿ ಭಾಸ್ಕರ್ ಕೆ ಪೂಜಾರಿ, ಉಪಾಧ್ಯಕ್ಷರುಗಳಾದ ಎಸ್. ಕೆ ಪೂಜಾರಿ, ಬೇಬಿ ಆರ್ ಪೂಜಾರಿ, ಜತೆ ಕಾರ್ಯದರ್ಶಿಗಳಾದ ಸದಾನಂದ ಬಿ ಪೂಜಾರಿ, ಸಂತೋಷ್ ಬಿ ಪೂಜಾರಿ, ಜೊತೆ ಕೋಶಾಧಿಕಾರಿ ಜಯಶ್ರೀ ಎ ಕೋಡಿ, ಗೋಪಾಲ ಎಸ್ ಪೂಜಾರಿ, ಯುವ ಸಂಪದದ ಕಾರ್ಯಧ್ಯಕ್ಷ ಉದಯ ಕೆ ಪೂಜಾರಿ, ಕಾರ್ಯದರ್ಶಿ ಶಶಿರಾಜ್ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಶೀಲಾ ಎಸ್ ಪೂಜಾರಿ, ಕಾರ್ಯದರ್ಶಿ ಶಾರದ ಬಿ ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯಧ್ಯಕ್ಷ ಅಶೋಕ್ ಎಂ ಪೂಜಾರಿ, ಕಾರ್ಯದರ್ಶಿ ಹರೇಶ್. ಕೆ.ಹೊಕ್ಕೊಳಿ, ಆಡಳಿತ ಸಮಿತಿ ಸದಸ್ಯರು, ಉಪ ಸಮಿತಿಯ ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.
ಕಾರ್ಯಕ್ರಮದ ವಿವರ :
ಬೆಳಿಗ್ಗೆ 7 ಗಂಟೆಗೆ : ಉಪಹಾರ, ಬಳಿಕ ಪಥ ಸಂಚಲನ, ಉದ್ಘಾಟನೆ, ವಿವಿಧ ಕ್ರೀಡೆಗಳ ಆರಂಭ.
ಮದ್ಯಾಹ್ನ 1 ಗಂಟೆಗೆ ಭೋಜನ ವಿರಾಮ, 2 ಗಂಟೆಯಿಂದ ಮತ್ತೆ ಕ್ರೀಡ್ರಾ ಸ್ಪರ್ಧೆ ಮುಂದುವರಿಕೆ. ನಂತರ ಬಹುಮಾನ ವಿತರಣೆ, ಚಾ- ತಿಂಡಿ , ಅಧ್ಯಕ್ಷರ ಭಾಷಣ, ಧನ್ಯವಾದ, 5 ಗಂಟೆಗೆ ರಾಷ್ಟ್ರಗೀತೆ.
.