
ಸಾಧಕರಾದ ಶ್ರೀಮತಿ ಪ್ರಭಾ ಸುವರ್ಣ ಮತ್ತು ಶ್ರೀ ಎನ್ ಪಿ ಸುವರ್ಣ ಅಭಿಮಾನಿ ಬಳಗದ ವತಿಯಿಂದ
ಪ್ರಭಾ ಸುವರ್ಣ ಮತ್ತು ಎನ್ ಪಿ ಸುವರ್ಣರಿಗೆ ಅಭಿನಂದನಾ ಸಮಾರಂಭವು ದಿನಾಂಕ- 12/01/2025, ಮಧ್ಯಾಹ್ನ 2 ಗಂಟೆಗೆ ಸಾಂತಕ್ರೂಜ್ ಪೂರ್ವ ಬಿಲ್ಲವ ಭವನದ ಸಭಾಗ್ರಹದಲ್ಲಿ ಜರಗಲಿದೆ.
ಅಂದು ಮಧ್ಯಾಹ್ನ 2 ಗಂಟೆಯಿಂದ ಭಕ್ತಿ ಸಮೂಹ ಗಾಯನ, ಬಳಿಕ ಪ್ರಸಾದ್ ಮತ್ತು ತಂಡ ಬೆಂಗಳೂರು ಇವರಿಂದ ನಾದಸ್ವರ ವಾದನ ನಡೆಯಲಿದೆ.
ಸಂಜೆ 5 ಗಂಟೆಗೆ ಗಣ್ಯರ ಪಾಲ್ಗೊಳ್ಳುವಿಕೆಯಲ್ಲಿ ಅಭಿನಂದನಾ ಸಮಾರಂಭ ಆರಂಭವಾಗಲಿದೆ.
ಅಪರೂಪದ ಸಾಧಕ ದಂಪತಿಗಳಾದ ಪ್ರಭಾ ಸುವರ್ಣ ಮತ್ತು ಎನ್ ಪಿ ಸುವರ್ಣ ರ ಅಭಿನಂದನಾ ಸಮಾರಂಭಕ್ಕೆ ಅವರ ಅಭಿಮಾನಿಗಳು ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದು ಹಾರೈಸಿಸಬೇಕಾಗಿ
ಪ್ರಭಾ ಸುವರ್ಣ ಮತ್ತು ಎನ್ ಪಿ ಸುವರ್ಣ ಅಭಿಮಾನಿ ಬಳಗ ವಿನಂತಿಸಿದೆ.