32 C
Mumbai
March 7, 2026
Mumbai News Kannada
ಪ್ರಕಟಣೆ

ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ ಜ. 19 ರಿಂದ 24ರ ತನಕ 351 ವರ್ಷದ ಬಳಿಕ ಪೆರುಂಕಳಿಯಾಟ್ಟ ಮಹೋತ್ಸವ





ಕಾಸರಗೋಡು / ಮುಂಬಯಿ : ಹಲವು ಶತಮಾನಗಳ ಇತಿಹಾಸ ಪರಂಪರೆ ಗಳನ್ನು ಹೊಂದಿರುವ ಕಾಸರಗೋಡು ಸಮೀಪದ ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ ಇದೇ ಬರುವ ಜನವರಿ 19 ರಿಂದ 24ರ ತನಕ ಬಹಳ ವಿಜೃಂಭಣೆಯಿಂದ ಸುಮಾರು 351 ವರ್ಷದ ಬಳಿಕ ಪೆರುಂಕಳಿಯಾಟ್ಟ ಮಹೋತ್ಸವ ನಡೆಯಲಿರುವುದು. ಶತಮಾನಗಳ ಇತಿಹಾಸ ಪರಂಪರೆಯನ್ನು ಹೊಂದಿರುವ ಆದೂರೂ ಶ್ರೀ ಭಗವತಿ ದೈವಸ್ಥಾನದಲ್ಲಿ ಪೆರುಂಕಳಿಯಾಟ್ಟ ಮಹೋತ್ಸವ ಬಹಳ ಮಹತ್ವವನ್ನು ಹೊಂದಿದೆ ಆರು ರಾತ್ರಿ ಮತ್ತು ಆರು ಹಗಲು ಒಟ್ಟು ಆರು ದಿನ ನಡೆಯುವ ಊರಿನ ಉತ್ಸವವಾಗಿದೆ ಪೆರುಂಕಳಿಯಾಟ,


ಪೆರುಂಕಳಿಯಾಟ ಪರಮ ಪ್ರಧಾನವಾದ ಆಚಾರ ಅನುಷ್ಠಾನ ಪೂಜಾ ವಿಧಿ ವಿಧಾನಗಳು ಭಕ್ತಿ ಪ್ರಧಾನವಾದ ವಾತಾವರಣದಲ್ಲಿ 39 ದೈವಗಳ ಕೋಲಗಳು ನಡೆಯಲಿದು. ಆರು ದಿನಗಳಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿರುವರು. ಅವರ ಸ್ವಾಗತಕ್ಕಾಗಿ ವಿವಿಧ ಸೌಕರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದು ಪ್ರತಿ ದಿನ ರಾತ್ರಿ-ಹಗಲು ವಿವಿಧ ಬಗೆ ಬಗೆ ಖಾದ್ಯಗಳಿಂದ ಸುಚಿರುಚಿಯಾದ ಶ್ರೀದೇವರ ಅನ್ನಪ್ರಸಾದವು ನಿರಂತರ ಜರಗಲಿರುವುದು. ಇದು ಕೇವಲ ಒಂದು ಪ್ರದೇಶದ ಉತ್ಸವ ಆಗಿರದೆ ಇಡೀ ಜನರ ಇಡೀ ನಾಡಿನ ಜನರ ಮಹೋತ್ಸವವಾಗಿದೆ.


ಜನವರಿ 19ರಂದು ಭಾನುವಾರ ಬೆಳಿಗ್ಗೆ 7:30ಕ್ಕೆ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಿಂದ ಶ್ರೀ ಸನ್ನಿಧಿಗೆ ದೀಪವನ್ನು ವಾದ್ಯಷೋಷಗಳೊಂದಿಗೆ ತರುವುದು ನಂತರ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ಬ್ರಹ್ಮ ಶ್ರೀ ಕುಂಟಾರು ರವೀಶ ತಂತಿಯವರಿಗೆ ಪೂರ್ಣ ಕುಂಭದ ಸ್ವಾಗತ, ಬೆಳಿಗ್ಗೆ 10: 21 ರಿಂದ 12: 22ರ ಶುಭಮೂರ್ತದಲ್ಲಿ ಧ್ವಜಾರೋಹಣದೊಂದಿಗೆ ಉತ್ಸವ ಆರಂಭ. ಮಧ್ಯಾಹ್ನ ನಂತರಹ ಪೊನ್ನಕ್ಕಲ್ ಭಗವತಿ, ಉಚ್ಚೂಳಿ ಕಡವತ್ ಭಗವತಿ, ಆಯಿಟ್ಟಿ ಭಗವತಿ ಎಂಬಿ ಮೂರು ಭಗವತಿಗಳ ತೊಡಙಳ್,
ವೈರಾಪುರತ್- ವಡಕ್ಕಾನ್ ಕೋಡಿ ದೈವದ ವೆಳ್ಳಾಟ, ಅಸುರಾಳನ್ ದೈವದ ವೆಳ್ಳಾಟ, ಕುಂಟಾರು ಚಾಮುಂಡಿ ದೈವದ ತೊಡಙಳ್, ಕುಲ್ಲಂಗರ ಚಾಮುಂಡಿ ತೊಡಙಳ್, ಮೇಚೇರಿ ಚಾಮುಂಡಿ ತೊಡಙಳ್, ವಿಷ್ಣುಮೂರ್ತಿ ತೊಡಙಳ್, ಭಗವತಿ ದೈವದ ಅಂದಿತೊಠಂ ,ಮಲಂಗರ ಚಾಮುಂಡಿಯ ತೊಡಙಳ್,

ಜನವರಿ 20ರಂದು ಸೋಮವಾರ ವೈರಾಪುರತ್ ವಡಕ್ಕಾನ್ ಕೋಡಿ ದೈವದ ಕೋಲ, ನಂತರ ವಿವಿಧ ದೈವಗಳ ಕೋಲ, ಜನವರಿ 21ರಂದು ಮಂಗಳವಾರ ಪೂರ್ವಾಹ್ನ 3:00 ಗಂಟೆಯಿಂದ ಫನ್ನಿ ಕ್ಕುಲತ್ ಚಾಮುಂಡಿ ದೈವದ ಕೋಲ, ಅಣ್ಣಪ್ಪ ಪಂಜುರ್ಲಿಯ ಕೋಲ, ನಂತರ ವಿವಿಧ ದೈವಗಳ ಕೋಲ,
ಜನವರಿ 22ರಂದು ಬುಧವಾರ ಪೂರ್ವಾಹ್ನ ವೈರಾಪುರತ್ ವಡಕ್ಕಾನ್ ಕೋಡಿ ದೈವದ ಕೋಲ, ನಂತರ ವಿವಿಧ ದೈವಗಳಕೋಲ, ಜನವರಿ 23ರಂದು ಗುರುವಾರ ಪೂರ್ವಾಹ್ನ 5:00 ಗಂಟೆಯಿಂದ ಪುದಿಯ ಭಗವತೀ ದೈವದ ಕೋಲ, ವೈರಾಪುರತ್ ವಡಕ್ಕಾನ್ ಕೋಡಿ ದೈವದ ಕೋಲ, ನಂತರ ವಿವಿಧ ದೈವಗಳ ಕೋಲ, ಜನವರಿ 24ರಂದು ಶುಕ್ರವಾರ ಪೂರ್ವಾಹ್ನ ವೈರಾಪುರತ್ ವಡಕ್ಕಾನ್ ಕೋಡಿ ದೈವದ ಕೋಲ,ಅಸುರಾಳನ್ ದೈವದ ಕೋಲ, ನಂತರ ವಿವಿಧ ದೈವಗಳ ಕೋಲ, ಹಾಗೂ ಸಾವಿರಾರು ಭಕ್ತ ಜನರನ್ನು ಸಾಕ್ಷ್ಯವಾಗಿರಿಸಿಕೊಂಡು ಮಾಂಗಲ್ಯ ಕನ್ಯೆಕೆಯರೊಂದಿಗೆ ಶುಭ ಮುಹೂರ್ತದಲ್ಲಿ ಸ್ಥಾನಿಕ ಆಚಾರ್ಯ ವಾರಿಸುದಾರರ ಸೇರಿಕೊಂಡು 351 ವರ್ಷಗಳ ನಂತರ ಒಂದೇ ಪೀಠದಲ್ಲಿ ಆಸೀನರಾಗಿರುವ ನಿತ್ಯ ಕನ್ಯಕೆಯರಾಗಿರುವ ಶ್ರೀ ಪುನ್ನಕ್ಕಲ್ ಭಗವತೀ, ಶ್ರೀ ಉಚ್ಚುಳಿಕಡವ್ ಭಗವತೀ, ಶ್ರೀ ಆಯಿಟ್ಟ ಭಗವತೀಯವರ ತಿರುಮುಡಿ ಏರುವುದು,

ಕಾಸರಗೋಡು ಕಣ್ಣೀರತ್ ತರವಾಡು, ಕರೆಯಪ್ಪನ್ ಕಿರ್ಯಂ ಭಂಡಾರ ಮನೆ ತರವಾಡು, ಮೂತಿಲ್ಲಾಂ ತರವಾಡು ಎಂಬ ಮೂರು ತರವಾಡುಗಳಿಂದ ಮೀನಾ ಮೃತಾಕ್ಕೆ ಬೇಕಾದ ಮೀನ್ ಕೋವಾ ಮತ್ತು ಕಲಶ ಮೆರವಣಿಗೆ, ರಾತ್ರಿ 11:00 ಗಂಟೆಗೆ ಧ್ವಜಾ ಅವರೋಹಣ, ಜನವರಿ 27, 28ನೇ ತಾರೀಕಿನಂದು ಕಾಸರಗೋಡು ನೆಲಿಕುಂಜೆ ಕಡಪ್ಪರ ಬಬ್ಬರಿಯ ದೈವಸ್ಥಾನದಲ್ಲಿ ಬಬ್ಬರಿಯ, ಮಣಿಚಿ, ಗುಳಿಕ ದೈವಗಳ ಕೋಲ, ಪ್ರದೇಶದ ಆಚರಣೆ ಪ್ರಕಾರ ನಡೆಸಿ ಸಮಾರೋಪಗೊಳಿಸುವುದು. ಸಮಸ್ತ ಭಕ್ತಾದಿಗಳ ನಿರೀಕ್ಷೆಯಂತೆ ನೂರಾರು ವರ್ಷಗಳ ನಂತರ ಜರಗಲಿರುವ ಈ ಪೆರುಂಕಲಿಯಾಟ್ಟ ಮಹೋತ್ಸವಕ್ಕೆ ಕೆಲವು ವರ್ಷಗಳಿಂದ ಪೂರ್ವ ತಯಾರಿಗಳು ಸಂಭ್ರಮದಿಂದ ನಡೆಯುತ್ತಿದ್ದು .ಕಳೆದ ಒಂದು ವರ್ಷಗಳಿಂದ ಇದಕ್ಕೆ ಸಂಬಂಧ ಪಟ್ಟ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ಕ್ಷೇತ್ರದಲ್ಲಿ ಹಾಗೂ ಆಸುಪಾಸಿನಲ್ಲಿ ನಡೆಯುತ್ತಾ ಬಂದಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ಷೇತ್ರದ ಆಡಳಿತ ಸಮಿತಿ ಹಾಗೂ ಪೆರುಂಕಲಿಯಾಟ್ಟ ಮಹೋತ್ಸವ ಸಮಿತಿಯು ಸದಾ ಪ್ರಯತ್ನಶೀಲರಾಗಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ಪ್ರೋತ್ಸಾಹಗಳು ದೊರೆಯುತ್ತಿದೆ. ದೇಶದ ವಿವಿಧ ಕಡೆಗಳಿಂದ ಹಾಗೂ ವಿದೇಶಗಳಿಂದಲೂ ಈ ಮಹೋತ್ಸವಕ್ಕೆ ಪೂರ್ವ ತಯಾರಿಕೆಗಳು ನಡೆಯುತ್ತಿದ್ದು. ಅನೇಕ ವರ್ಷಗಳ ನಂತರ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಲಿರುವರು. ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಜರಗಲಿದ್ದು. ಸಾಂಸ್ಕೃತಿಕ ವೇದಿಕೆಗಳು ನಿರ್ಮಾಣಗೊಂಡಿದೆ. ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಬೇಕೆಂಬುದು ಎಲ್ಲರ ಆಶಯವಾಗಿದೆ.

ಮಾಹಿತಿ : ಶಿರಿಯ / ಐಲ್



Related posts

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

ನ.17 ರಂದು ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವಾರ್ಷಿಕ ಕ್ರೀಡೋತ್ಸವ ದಂಗಲ್ 2024

Mumbai News Desk

ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್ – ಕೋಲಿವಾಡ, ಡಿ  25.ರಂದು 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಗುರುವಂದನೆ.

Mumbai News Desk

ಮಾ. 8 ರಂದು ಜಗಜ್ಯೋತಿ ಕಲಾವೃಂದ ಕಚೇರಿಯಲ್ಲಿ ಮಹಾಶಿವರಾತ್ರಿ ಪೂಜೆ

Mumbai News Desk

ಜ.20 ಕ್ಕೆ ಉಡುಪಿಯಲ್ಲಿ ಡೈಕಿನ್ ಸೊಲ್ಯೂಷನ್ ಪ್ಲಾಜ ಷೋರೂಮ್ ಶುಭಾರಂಭ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳ ಡೊಂಬಿವಲಿ : ಅ. 3ರಿಂದ ವಜ್ರ ಮಹೋತ್ಸವ ಆಚರಣೆ

Mumbai News Desk