ಜನವರಿ 14ರಂದು ರಾಧಾಕೃಷ್ಣ ಬ್ಯಾಂಕ್ವೆಟ್ ಹಾಲ್, ಕ್ಯಾಸೆಡೆಲಾ ಬಳಿ ಪೂನಂ ಸಾಗರ್ ಕಾಂಪ್ಲೆಕ್ಸ್ ಇಲ್ಲಿ ಭಜನೆ, ಕುಣಿತ ಭಜನೆ ಮಹಿಳೆಯರ ಹಳದಿ ಕುಂಕುಮ ವಿವಿಧ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
ಸಂಜೆ 3 ಗಂಟೆಗೆ ಭಜನೆ ಕುಣಿತ ಭಜನೆ ಯೊಂದಿಗೆ ಪ್ರಾರಂಭಗೊಳ್ಳಲಿರುವ ಧಾರ್ಮಿಕ ಕಾರ್ಯಕ್ರಮದ ಬಳಿಕ 4ಗಂಟೆಗೆ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ ನೆರವೇರಲಿದೆ.
ಬಳಿಕ ಸಂಜೆ 7:30ರಿಂದ ಸಭಾ ಕಾರ್ಯಕ್ರಮ ಜರುಗಲಿದ್ದು ಬಂಟ್ಸ್ ಫೋರಂನ ಅಧ್ಯಕ್ಷರಾದ ಉದಯ ಎಂ ಶೆಟ್ಟಿ ಮಲಾರ್ ಬೀಡು, ಅಧ್ಯಕ್ಷತೆ ವಹಿಸಲಿದ್ದಾರೆ. ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸ್ವಾತಿಂಜ ಜನಾರ್ಧನ ಭಟ್ ಆಶೀವರ್ಚನೆ ನೀಡಲಿದ್ದಾರೆ.
ಪ್ರಮುಖ ಅಭ್ಯಾಗತರಾಗಿ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಅನಿತಾ ಆರ್ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಥಾಣೆ ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಆರ್ ಶೆಟ್ಟಿ ಬಂಟರ ಸಂಘ ಮುಂಬೈ ಮಹಿಳಾ ವಿಭಾಗದ ಕೋಶಾಧಿಕಾರಿ ಸುಚಿತ ಆರ್ ಶೆಟ್ಟಿ ಮಿಠಿ ಬಾಯಿ ಕಾಲೇಜ್ ನಿವೃತ್ತ ಪ್ರೊಫೆಸರ್ ಡಾ. ಹರಿಣಿ ಡಿ. ಚೌಟ ಹಾಗೂ ಡಾI. ಸ್ವರೂಪ್ ಚೇತನ್ ಶೆಟ್ಟಿ, ಕುಮಾರಿ ಆಕಾಂಕ್ಷ ಶೆಟ್ಟಿ ವೀರ್ ಕರ್ ಭಾಗವಹಿಸಲಿದ್ದಾರೆ.
ಬಂಟ್ಸ್ ಫೋರಂ ವತಿಯಿಂದ ಜರಗಲಿರುವ ಈ ಧಾರ್ಮಿಕ ಪುಣ್ಯ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಗರ ಮೀರಾ ಬಾಯಂಧರ್ ನ ಸಕುಟುಂಬ ಪರಿವಾರದೊಂದಿಗೆ ಭಾಗವಹಿಸಿ ಶ್ರೀದೇವರ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ಅಧ್ಯಕ್ಷರಾದ ಉದಯ ಎಂ ಶೆಟ್ಟಿ ಮಲಾರ್ ಬೀಡು ಸಂಚಾಲಕರಾದ ಅನಿಲ್ ಆರ್ ಶೆಟ್ಟಿ ಎಲ್ಲೂರು ಒಡಿಪರಗುತ್ತು ಉಪಾಧ್ಯಕ್ಷರಾದ ದಿವಾಕರ ಎಂ ಶೆಟ್ಟಿ ಶಿರ್ಲಾಲ್, ಹರ್ಷ ಕುಮಾರ್ ಡಿ ಶೆಟ್ಟಿ ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಂಡ್ಕೂರು ಗೌರವ ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು ಜೊತೆ ಕಾರ್ಯದರ್ಶಿ ಶರ್ಮಿಳಾ ಕೆ ಶೆಟ್ಟಿ ಜೊತೆ ಕೋಶಾಧಿಕಾರಿ ಮಧುಕರ್ ಎಸ್ ಶೆಟ್ಟಿ ಅಜೆಕಾರು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಕವಾಣಿ ಡಿ. ಶೆಟ್ಟಿ ತಾಳಿಪಾಡಿಗುತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ನಟರಾಜ್ ಡಿ ಶೆಟ್ಟಿ ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ನವೀನಾ ಜಯಪ್ರಕಾಶ್ ಭಂಡಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.