
ಶ್ರೀ ಜೈ ಭವಾನಿ ಶನೀಶ್ವರ ಮಂದಿರ,
ತಿಲಕ್ ಕಾಲೇಜಿನ ಸಮೀಪ, ಆಜ್ಡೆಗಾಂ, ಡೊಂಬಿವಲಿ (ಪೂರ್ವ)- 421 203.
ಮನವಿ ಪತ್ರ,
ಪ್ರಿಯರೇ,
ನಮ್ಮ ಕರಾವಳಿಯ ಜನರು ತಮ್ಮ ಉದರ ಪೋಷಣೆಗಾಗಿ ಈ ಮಹಾನಗರವಾದ ಮುಂಬಯಿಗೆ ಬಂದು ತಮ್ಮ ಉದ್ಯೋಗ ಉದ್ಯಮದ ಒಟ್ಟಿಗೆ ತಮಗೆ ಸಿಕ್ಕಿದ ಅಲ್ಪ ಸಮಯದಲ್ಲಿ ಶಿಕ್ಷಣ ಸಂಸ್ಥೆ, ಸಾಮಾಜಿಕ ಸಂಸ್ಥೆ ಮತ್ತು ವಿಶೇಷವಾಗಿ ವಿವಿಧ ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿ ನಮ್ಮ ಜನರನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ರಂಗದತ್ತ ಕೊಂಡೊಯ್ಯುವ ಕಾರ್ಯವನ್ನು ಬಹಳ ವರ್ಷಗಳ ಹಿಂದೆಯೇ ಈ ಮಹಾನಗರದಲ್ಲಿ ಅಸ್ತಿತ್ವಕ್ಕೆ ತಂದರು.
ಇಂದು ಮುಂಬಾಯಿಯ ಉಪನಗರವಾದ ಮಿನಿ ಮಂಗಳೂರು ಎಂದೇ ಕರೆಯಲ್ಪಡುವ ಡೊಂಬಿವಲಿಯು ತುಳು -ಕನ್ನಡಿಗರ ತಾಯಿನಾಡಾಗಿದೆ. ವಿವಿಧ ಸಂಸ್ಥೆಯ ಛತ್ರದಡಿಯಲ್ಲಿ ಹತ್ತು ಹಲವಾರು ಸಂಘ ಸಂಸ್ಥೆಗಳು ರೂಪುಗೊಂಡು ತುಳು ಕನ್ನಡಿಗರ ಬೀಡು ಆಗಿದೆ.
ಎಲ್ಲಾ ಜಾತಿ ಧರ್ಮ ಭಾಷಿಗರ ಮಧ್ಯೆ ಇದ್ದು ಮರಾಠಿ ಮಣ್ಣನ್ನು ಗೌರವಿಸುತ್ತಾ ಜನ್ಮಭೂಮಿಯ ಕಂಪನ್ನು ಪಸರಿಸುತ್ತಾ ಇಲ್ಲಿಯ ಎಲ್ಲಾ ಸಂಘ ಸಂಸ್ಥೆಗಳು ಅನ್ನೋನ್ಯವಾಗಿವೆ.
ಹತ್ತು ತಾಯಿಯ ಮಕ್ಕಳು ಒಂದೆಡೆ ಸೇರಿ ಏಕನಿಷ್ಠೆಯಿಂದ ದೇವರನ್ನು ಆರಾಧಿಸಿ, ಪೂಜಿಸಿ, ಭಜಿಸಿ, ಅರ್ಚಿಸಿ, ದೇವಾತಾನುಗ್ರಹ ಪಡೆದು ಸ್ಥಾಪನೆಗೊಂಡ ಸಂಸ್ಥೆಯೇ ಶ್ರೀ ಜೈ ಭವಾನಿ ಶನೀಶ್ವರ ಭಜನಾ ಮಂಡಳಿ. ಈ ಮಂಡಳಿಯು 1989ರಲ್ಲಿ ಪ್ರಾರಂಭಿಸಲಾಯಿತು. ಈ ಮಂಡಳಿ ಹಲವಾರು ವರ್ಷಗಳಿಂದ ಭಜನೆ, ಶನಿಪೂಜೆ, ಸತ್ಯನಾರಾಯಣ ಪೂಜೆ ಮಾಡುತ್ತಾ ಡೊಂಬಿವಲಿಯ ಪೂರ್ವದಲ್ಲಿ ಧಾರ್ಮಿಕ ಸಂಸ್ಥೆ ಜೈ ಭವಾನಿ ಶನೀಶ್ವರ ಮಂದಿರವಾಗಿ ಮೆರೆಯುತ್ತಿದೆ.
ಡೊಂಬಿವಿಲಿ ನಗರದ ಸುತ್ತಮುತ್ತ ಸಾರ್ವಜನಿಕ ಶನಿಗ್ರಂಥ ಪಾರಾಯಣವನ್ನು ಸಾರ್ವಜನಿಕವಾಗಿ ಕಳೆದ 35 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ. ನಾವು ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಶನೀಶ್ವರ ಗ್ರಂಥ ಪಾರಾಯಣ ಪೂಜೆಯನ್ನು ಬಹಳ ಅದ್ದೂರಿಯಾಗಿ ಮತ್ತು ಸಂಭ್ರಮದಿಂದ ನಡೆಸುತ್ತೇವೆ. ಇದು ಜನರ ನಂಬಿಕೆಗೆ ಸಾಕ್ಷಿಯಾಗಿದೆ.
ಭಕ್ತ ಮಹಾಶಯರೇ ಇದೀಗ ಜೈ ಭವಾನಿ ಶನೀಶ್ವರ ಮಂದಿರದಲ್ಲಿ ದಿನದಿಂದ ದಿನಕ್ಕೆ ಭಕ್ತಾಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ, ಧಾರ್ಮಿಕ ಕಾರ್ಯಕ್ರಮ ಹೆಚ್ಚುತ್ತಿದೆ. ಆದ ಕಾರಣ ಜಾಗದ ಹಾಗೂ ಒಂದು ನಿರ್ಧಿಷ್ಟ ಪ್ರಮಾಣ ಮಂದಿರದ ಕೊರತೆ ಎಲ್ಲರನ್ನು ಕಾಡುತ್ತಿದೆ. ಆದ್ದರಿಂದ ನಾವೆಲ್ಲ ಭಕ್ತರು ಹಾಗೂ ಮಂಡಳಿ ಸೇರಿ ಇದ್ದ ಮಂದಿರವನ್ನು ಜೀರ್ಣೋದ್ದಾರ ಮಾಡಲು ನಿರ್ಧರಿಸಿದ್ದೇವೆ. ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವು, ತನು ಮನ ಧನದ ರೂಪದಲ್ಲಿ ನಮ್ಮೊಂದಿಗೆ ಸಹಕರಿಸಿ ಈ ದೇವತಾ ಕಾರ್ಯವು ನಮ್ಮ ಯೋಜನೆ ಯೋಚನೆಯ ಪ್ರಕಾರ ರೂಪುಗೊಳ್ಳುವಂತೆ ತಾವು ತಮ್ಮ ಸಹಾಯ ಹಸ್ತವನ್ನು ನೀಡಿ ಮಂದಿರ ಪೂರ್ಣಗೊಳ್ಳುವಂತೆ ಸಹಕರಿಸಬೇಕಾಗಿ ವಿನಂತಿಸುತ್ತೇವೆ. ದಯವಿಟ್ಟು ತಾವೆಲ್ಲ ತಮ್ಮಿಂದಾಂತಹ ಸಹಾಯ ಮಾಡಿ ದೇವರ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಜೈ ಭವಾನಿ ಹಾಗೂ ಶನೀಶ್ವರ ದೇವರ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ವಿನಂತಿಕೊಳ್ಳುತ್ತೇವೆ.
ರವಿ ಎಮ್. ಸುವರ್ಣ
ಅಧ್ಯಕ್ಷರು
ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು,
ಪ್ರಕಾಶ್ ಭಟ್, ಕಾನಂಗಿ
ಅರ್ಚಕರು ಹಾಗೂ ಸಹ ಅರ್ಚಕರು

Bank Details :
BANK NAME: KARNATAKA BANK
Account Holder: Shree Jai Bhavani Shaneeshwara Mandir
Account No.: 1932500100388001
IFSC Code: KARB0000193
Account Type: Current
Branch: Dombivli (East)
VPA: shreejaibhavani@kbl
ON BEHALF OF MANAGING COMMITTE
Ravi M. Suvarna (President)
Suraj D. Sapaliga (Secretary)
Sanjeeva P. Palan (Vice President)
Pradeep S. Salian (Jt. Secretary)
Ranjit K. Shetty (Treasurer)
Harish S. Sapaliga (Jt. Treasurer)
Chief Archak: Kanangi Prakash Bhat
Joint Archak: Praveen Poojary
Committee Member
Mohan P. Salian
Raghu S. Shetty
Santosh G. Poojari
Vishwanath G. Salian
Jayant B. Poojary
Satish G. Poojari
Sachin Poojary
Jaykish R. Sanil
Sagar Y. Poojary
Kishore Bangera
Deeresh V. Salian
Rakshan Salian
Dinesh S. Bangera
ವಿಶೇಷ ಸೂಚನೆ : ರೂ. 25000/- ಹಾಗೂ ಮೇಲ್ಪಟ್ಟು ದೇಣಿಗೆ ಕೊಟ್ಟು ಸಹಕರಿಸಿದ ಗಣ್ಯರ ಹೆಸರನ್ನು ತಾಮ್ರ ಫಲಕದಲ್ಲಿ ನಮೂದಿಸಲಾಗುವುದು.
Please Note: Individual Contributing over Rs. 25,000/- and above will be honored by having their names engraved on the copper nameplate in the new temple.




