
ಕುಂದಾಪುರ : ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮದ ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನವು ಅತೀ ಪುರಾತನ ದೈವಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿ ಹಿರಿಯ ಗರಡಿ ಹಾಗೂ ಕಿರಿಯ ಗರಡಿ ಎನ್ನುವ ಎರಡು ದೈವಸ್ಥಾನ ಗಳಿದ್ದು ಹಿರಿಯ ಗರಡಿಯ ದೈವಸ್ಥಾನವನ್ನು ಹಟ್ಟಿಮನೆ ಮನೆತನದವರಿಂದಲೂ ಕಿರಿಯ ಗರಡಿಯ ದೈವಸ್ಥಾನವನ್ನು ಉದ್ದಾಬೆಟ್ಟು ಕೆಳಮನೆ ಮನೆತನದವರಿಂದ ಮೊದಲು ಸ್ಥಾಪಿತವಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿ ವರ್ಷ ಮಕರ ಸಂಕ್ರಮಣದ 5 ನೇ ದಿನಕ್ಕೆ ಅಂದರೆ ಜನವರಿ 19 ನೇ ತಾರೀಕಿನಂದು ಗೆಂಡ ಸೇವೆ ಹಾಗೂ 20 ನೇ ತಾರೀಕಿನಂದು ಹಾಲು ಹಬ್ಬ ನಡೆಯುತ್ತದೆ. ಮೊದಲು ಈ ಮನೆತನದವರಿಂದಲೇ ಈ ದೈವಕ್ಕೆ ಮೊದಲ ಪೂಜೆಯಾಗಬೇಕು ಎಂದು ಹೇಳಲಾಗಿ ಅದನ್ನು ಇಲ್ಲಿಯ ತನಕ ಅದೇ ಪದ್ದತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಈ ಗರಡಿಯನ್ನು ನಂಬಿಕೊಂಡು ಬಂದಿರುವ ಸಾವಿರಾರು ಕುಟುಂಬಗಳಿದ್ದು ಅನ್ನದಾನದ ಹರಕೆಯನ್ನು ಹೇಳಿಕೊಂಡವರು 2040 ರ ವರೆಗೂ ಭರ್ತಿಯಾಗಿವೆ ಎಂದು ಹೇಳಲಾಗುತ್ತಿದೆ.ಇಲ್ಲಿ ಪ್ರತಿ ವರ್ಷ ಅನ್ನದಾನ ಹಾಗೂ ಹರಕೆಯ ಬಯಲಾಟ ಹೇಳಿಕೊಳ್ಳುವವರ ಸಂಖ್ಯೆ ಕಡಿಮೆಯಾಗದೇ ಇರುವುದು ಈ ಗರಡಿಯ ವಿಶೇಷತೆಗಳಲ್ಲಿ ಒಂದಾಗಿದೆ. ಕೆಲವು ತಿಂಗಳ ಹಿಂದೆ ಇಲ್ಲಿ ಬ್ರಾಹ್ಮಣ ರನ್ನು ಕರೆಸಿ ಆರೋಡ ಪ್ರಶ್ನೆ ಹಾಕಿದಾಗ ಹಿರಿಯ ಜಟ್ಟಿಗನನ್ನು ಮಲ್ಲ ಜಟ್ಟಿಗ ನಂತಲೂ, ಕಿರಿಯ ಜಟ್ಟಿಗನನ್ನು ವೀರ ಜಟ್ಟಿಗ ನಂತಲೂ ಕರೆಯಬೇಕು. ಈ ದೈವವು ಅಣ್ಣ ತಮ್ಮ ದೈವವಾಗಿದ್ದು, ಕೊಲ್ಲೂರು ಮೂಕಾಂಬಿಕೆಗೆ ಕಾವಲುಗಾರರಾಗಿ ಕೇರಳದಿಂದ ಬಂದ ದೈವವು ಎಂದು ಪ್ರಶ್ನೆಯಲ್ಲಿ ಬಂದ ವಿಚಾರವಾಗಿದೆ. ಆದರೆ ಈ ದೈವವನ್ನು ನಂಬಿಕೊಂಡು ಬಂದಿರುವ ಭಕ್ತಾದಿಗಳು ಎರಡು ದೈವಕ್ಕೂ ಪೂಜೆ ಸಲ್ಲಿಸಿದರಷ್ಟೇ ಅವರಿಗೆ ಪೂರ್ಣ ಫಲ ಸಿಗುತ್ತದೆ.. ಒಂದೇ ದೈವಕ್ಕೆ ಪೂಜೆ ಸಲ್ಲಿಸಿದರೆ ಯಾವುದೇ ಫಲ ಸಿಗಲಾರದು ಎಂದು ಪ್ರಶ್ನೆಯಲ್ಲಿ ಬಂದ ವಿಚಾರ. ಎರಡು ಅಣ್ಣ, ತಮ್ಮ ದೈವವಾಗಿರುದರಿಂದ ಎರಡು ದೈವಕ್ಕೂ ಬಂದ ಭಕ್ತಾದಿಗಳು ಪೂಜೆ ಸಲ್ಲಿಸಬೇಕು. ಭಕ್ತಾದಿಗಳು ದೈವಗಳಲ್ಲಿ ಭೇದ ಬಾವ ತೋರಿಸಿದರೆ ದೈವವು ಸಂತುಷ್ಠ ಗೊಳ್ಳುದಿಲ್ಲ ಎಂದು ಪ್ರಶ್ನೆಗಳಲ್ಲಿ ಬಂದಿರುತ್ತದೆ.ಕೊಲ್ಲೂರು ಮೂಕಾಂಬಿಕೆಯ ಆಜ್ಞೆಯಂತೆ ದೈವವು ಈ ಸ್ಥಳದಲ್ಲಿ ನೆಲೆನಿಂತಿದೆ ಎನ್ನಲಾಗಿದೆ. ಈ ಊರಿನವರಿಗೆ ಇದು ಗ್ರಾಮ ದೈವವು ಆಗಿದೆ. ಈ ಗರಡಿಯನ್ನು ಹೆಚ್ಚಾಗಿ ಮೊಗವೀರರೇ ನಂಬಿಕೊಂಡು ಬಂದಿರುದರಿಂದ ಇದು ಮೊಗವೀರ ಗರಡಿ ಎಂದೇ ಪ್ರಸಿದ್ದಿಯಲ್ಲಿದೆ. ಇದೇ ಜನವರಿ 19 ರಂದು ಗೆಂಡ ಸೇವೆ,ಮಹಾ ಅನ್ನ ಸಂತರ್ಪಣೆ ಹಾಗೂ ಮಾರಣಕಟ್ಟೆ ಮೇಳದವರಿಂದ ಶ್ರೀ ದೇವಿ ಬನಶಂಕರಿ ಎನ್ನುವ ಹರಕೆ ಬಯಲಾಟವಿದೆ. ಹೆಚ್ಚಿನ ಭಕ್ತಾದಿಗಳು ವರ್ಷಕೊಮ್ಮೆ ನಡೆಯುವ ಈ ಸೇವೆಗೆ ಬಂದು ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿಯು ವಿನಂತಿಸಿದೆ.ನಂಬಿ ಬಂದ ಭಕ್ತಾದಿಗಳಿಗೆ ಇಂಬು ಕೊಟ್ಟು ಕಾಪಾಡುವ ದೈವ ಎಂದು , ತಪ್ಪನ್ನು ಎಸಗುವ ಜನರಿಗೆ ಉಗ್ರ ರೂಪದ ಶಿಕ್ಷೆ ತೋರಿಸಿದ ಎಷ್ಟೋ ಉದಾರಣೆ ಗಳಿವೆ. 70 ವರ್ಷದ ಹಿಂದೆ ಶ್ರೀಧರ ಸ್ವಾಮಿಯವರು, ಹಾಗೂ ಅನೇಕ ಸಾಧು ಸಂತರು ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ದೂರ ದೂರದ ಊರಿಂದ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿರುದರಿಂದ ಭಕ್ತಾದಿಗಳು ತಂಗಲು ಹಾಲ್ ಹಾಗೂ ರೂಮ್ ನ ವೆವಸ್ಥೆಯಾಗಬೇಕಿದೆ. ಡಾಕ್ಟರ್ ಜಿ ಶಂಕರ್, ಸುರೇಶ ಕಾಂಚನ್ ಹಾಗೂ ಇತರ ಉನ್ನತ ಉದ್ಯಮಿಗಳಿಂದ ಇಲ್ಲಿಯ ಭಕ್ತಾದಿಗಳು ಭರವಸೆಯ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ.
ಓಂ ಶ್ರೀ ಜಟ್ಟಿಗೇಶ್ವರಾಯ ನಮಃ
[ ರಾಜು ತಗ್ಗರ್ಸೆ. ಮುಂಬೈ ]