27.7 C
Mumbai
July 23, 2026
Mumbai News Kannada
Uncategorized

ಭಾರತ್ ಬ್ಯಾಂಕ್ ಕ್ರೀಡಾಕೂಟ 2025 ಯಶಸ್ವಿ ಸಂಪನ್ನ.







ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೇರ್ ಕ್ಲಬ್ ವತಿಯಿಂದ “BCB ಕ್ರೀಡಾಕೂಟ 2025” ಅನ್ನು ಶನಿವಾರ, ಡಿಸೆಂಬರ್ 13, 2025 ರಂದು ಕಾಂದಿವಲಿ (ಪೂರ್ವ) ದ ಠಾಕೂರ್ ವಿಲೇಜ್‌ನ ಠಾಕೂರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಅವರು ಸಿಬ್ಬಂದಿಗಳ ದೈಹಿಕ ಯೋಗಕ್ಷೇಮ ಮತ್ತು ಸಮಗ್ರ ಅಭಿವೃದ್ಧಿಗಾಗಿ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ ನೀಡಿದರು

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸೋಮನಾಥ್ ಬಿ. ಅಮಿನ್, ನಿರ್ದೇಶಕರಾದ ಮೋಹನ್‌ದಾಸ್ ಜಿ ಪೂಜಾರಿ ಹಾಗೂ ಬೋರ್ಡ್ ಆಫ್ ಮ್ಯಾನೇಜ್ಮೆಂಟಿನ ಅಧ್ಯಕ್ಷ ಪ್ರಜ್ವಲ್ ಜೆ ಪೂಜಾರಿ, ಬೋರ್ಡ್ ಆಫ್ ಮ್ಯಾನೇಜ್ಮೆಂಟಿನ ಸದಸ್ಯರಾದ ಅಶೋಕ್ ಕೆ ಕೋಟ್ಯಾನ್ ಮತ್ತು ನಿತ್ಯಾನಂದ ಡಿ ಕೋಟ್ಯಾನ್ ಉಪಸ್ಥಿತರಿದ್ದರು.

ಇದಲ್ಲದೆ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಾಗೂ ಸ್ಟಾಫ್ ವೆಲ್ಫೇರ್ ಕ್ಲಬ್ಬಿನ ಅಧ್ಯಕ್ಷ ವಿದ್ಯಾನಂದ ಎಸ್. ಕರ್ಕೇರ, ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ದಿನೇಶ್ ಬಿ. ಸಾಲಿಯಾನ್, ಮಹಾಪ್ರಬಂಧಕರಾದ ಮಹೇಶ್ ಬಿ. ಕೋಟ್ಯಾನ್ ಮತ್ತು ಜನಾರ್ಧನ್ ಎಂ. ಪೂಜಾರಿ ಹಾಗೂ ಶೋಭಾ ದಯಾನಂದ್ , ಭಾಸ್ಕರರಾವ್ ಸಿ. ಸಿರಕೊಂಡ, ಮತ್ತು ಯಶೋಧರ ಡಿ. ಪೂಜಾರಿ ಈ ಸಂದರ್ಭದಲ್ಲಿ ಹಾಜರಿದ್ದರು.

ಕ್ಲಬ್ ವತಿಯಿಂದ ಪುರುಷರಿಗಾಗಿ ಕ್ರಿಕೆಟ್ ಮತ್ತು ಬಾಕ್ಸ್-ಕ್ರಿಕೆಟ್, ಮಹಿಳೆಯರಿಗಾಗಿ ಥ್ರೋಬಾಲ್ ಮತ್ತು ಬಾಕ್ಸ್ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಪುರುಷರು ಮತ್ತು ಮಹಿಳೆಯರಿಗಾಗಿ ಶಾಟ್‌ಪುಟ್ ಮತ್ತು ವಿವಿಧ ತರಹದ ಆಟಗಳು ಮತ್ತು ಸದಸ್ಯರ ಮಕ್ಕಳಿಗಾಗಿ ವಿವಿಧ  ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ತಂಡಗಳಿಗೆ ಟ್ರೋಫಿ ನೀಡಿ ಗೌರವಿಸಲಾಯಿತು

ಸ್ಟಾಫ್ ವೆಲ್ಫೇರ್ ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿಯಾದ ಮೋಕ್ಷಿತ್ ಕುಮಾರ್  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಅವರು ಬ್ಯಾಂಕಿನ ಕಾರ್ಯಾಧ್ಯಕ್ಷರು, ನಿರ್ದೇಶಕರ ಮಂಡಳಿ ಸದಸ್ಯರು , ಆಡಳಿತ ಮಂಡಳಿ ಸದಸ್ಯರು, ಸ್ವಯಂಸೇವಕರು ಮತ್ತು ಉತ್ಸಾಹದಿಂದ ಭಾಗವಹಿಸಿದ ಎಲ್ಲ ಉದ್ಯೋಗಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೇರ್ ಕ್ಲಬ್ ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿಯಾದ ಮೋಕ್ಷಿತ್ ಕುಮಾರ್, ಖಜಾಂಚಿ ಕರಿಷ್ಮಾ ಆರ್. ಪೂಜಾರಿ, ಜಂಟಿ ಕಾರ್ಯದರ್ಶಿ ಮನೋಜ್ ಬಿ ಪೂಜಾರಿ, ಜಂಟಿ ಖಜಾಂಚಿ ನಿಧಿ ಮೂಲ್ಯ, ಆಂತರಿಕ ಲೆಕ್ಕ ಪರಿಶೋಧಕ ರೋಹನ್ ಪೂಜಾರಿ, ದೀಪಕ್ ಪ್ರಭು, ನಿಶಾ ಸುಂದರ್ ಕೆಲ್ಲಪುತ್ತಿಗೆ, ಪವನ್ ಜೆ. ಪೂಜಾರಿ, ರೋಹನ್ ಜೆ. ಕೋಟ್ಯಾನ್, ದಿನೇಶ್ ಕೆ. ಸನಿಲ್, ವಿಶಾಲ್ ಎ. ಸುವರ್ಣ, ದೀಪೇಶ್ ಸಿ. ಸನಿಲ್ ಮತ್ತು ನಿಕೇತ್ ಎಸ್. ಕುಮಾರ್ ಈ ದಿನವಿಡೀ ನಡೆದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು.

“BCB ಕ್ರೀಡಾಕೂಟ 2025” ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು, ಇದು ಭಾರತ್ ಬ್ಯಾಂಕ್ ಕುಟುಂಬದಲ್ಲಿ ಕ್ರೀಡಾ ಮನೋಭಾವ ಮತ್ತು ಒಗ್ಗಟ್ಟಿನ ಮಹತ್ವವನ್ನು ಎತ್ತಿ ತೋರಿಸಿದೆ.

ದಿನವಿಡೀ ನಡೆದ ಈ ಕ್ರೀಡಾಕೂಟದಲ್ಲಿ ಬ್ಯಾಂಕಿನ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಉತ್ಸಾಹದಿಂದ ಭಾಗವಹಿಸಿ, ಸಿಬ್ಬಂದಿ ವರ್ಗದವರಲ್ಲಿ ಬಾಂಧವ್ಯ ಮತ್ತು ತಂಡ ಮನೋಭಾವವನ್ನು ಹೆಚ್ಚಿಸಿದರು.



Related posts

In Mozambique, a Living Laboratory for Nature’s Renewal Are On The Way

admin

U.S. vs China Trade Wars: Qualcomm Scraps $44 Billion NXP Deal After China Inaction

admin

Facebook’s $100 billion-plus Rout is The Biggest Loss in Stock Market History

admin

Apple Earnings: Most Boring Quarter of The Year Still Holds Some Intrigue

admin

ವಿವಶ…

Mumbai News Desk

“ಜೆವಿಎಂ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ : ಅಧ್ಯಕ್ಷ ಶ್ರೀ. ವಿ. ಎನ್. ಹೆಗ್ಡೆ ಅವರು ಶಿಕ್ಷಕರಿಗೆ ತಂತ್ರಜ್ಞಾನ ಪ್ರಾವಿಣ್ಯತೆ ಪಡೆಯಲು ಕರೆ.”

Mumbai News Desk