
ಯುವಕರು ಸಮಾಜ ಸೇವಾ ನಿರತರಾದಲ್ಲಿ ಸಮಾಜದೊಂದಿಗೆ ತಾನೂ ಬೆಳೆಯಲು ಸಾಧ್ಯ – ಗಿರೀಶ್ ಶೆಟ್ಟಿ ತೆಳ್ಳಾರ್
ಮುಂಬಯಿ : 88 ವರ್ಷಗಳ ಹಿಂದೆ ಅಂದಿನ ಹಿರಿಯರಿಗೆ ಈಗ ಇರುವಷ್ಟು ಅನುಕೂಲತೆ ಇಲ್ಲದಿದ್ದರೂ, ತಮ್ಮ ಕಠಿಣ ಪರಿಶ್ರಮದೊಂದಿಗೆ, ಸಮಾಜ ಬಾಂಧವರನ್ನು ಒಗ್ಗೂಡಿಸಲು ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್ ನ್ನು ಸ್ಥಾಪಿಸಿದ್ದು ಇಂದಿನ ಯುವ ಜನಾಂಗದ ಸೌಭಾಗ್ಯ ವೆನ್ನಬಹುದು. ನಾನೂ ಎಳೆಯ ಪ್ರಾಯದಲ್ಲೇ ಸಮಾಜ ಸೇವೆಯಲ್ಲಿ ತೊಡಗಿದ್ದು, ಅದರೊಂದಿಗೆ ಬೆಳೆದಿರುವೆನು. ಯುವಕರು ಸಮಾಜ ಸೇವಾ ನಿರತರಾದಲ್ಲಿ ಸಮಾಜದೊಂದಿಗೆ ತಾನೂ ಬೆಳೆಯಲು ಸಾಧ್ಯ ಎಂದು ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಅವರು ನುಡಿದರು.
ಜ. 12ರಂದು ದಹಿಸರ್ ಚೆಕ್ ನಾಕ ಬಳಿಯ ಲತಾ ಮಂಗೇಶ್ಕರ್ ಸಭಾಗೃಹದಲ್ಲಿ ನಡೆದ ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್ (ವೈಯಂಬಿಎ) ನ, 88 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ವೈಯಂಬಿಎ ಯ ಕಾರ್ಯ ಚಟುವಟಿಕೆಗಳ ಬಗ್ಗೆ ಸಂತೋಷ ವ್ಯಕ್ತ ಪಡಿಸಿ ಸಮಾಜ ಸೇವೆಯಿಂದ ನನ್ನ ಉದ್ಯಮಕ್ಕೆ ಯಾವುದೇ ರೀತಿಯಲ್ಲಿ ಮಾರಕವಾಗಿಲ್ಲ. ಆದುದರಿಂದ ಯುವಕರು ಸಮಾಜ ಸೇವೆ ಮಾಡುದರಿಂದ ಸಮಾಜವೂ ಬಲಿಷ್ಠವಾಗಿ ಅಸಾಯಕರಿಗೆ ಸಹಕಾರಿಯಾಗುವುದು. ನಾವು ತುಳು ಕನ್ನಡಿಗರು ಎಲ್ಲರೂ ಒಂದಾಗಿ ದೊಡ್ಡ ಮಟ್ಟದಲ್ಲಿ ಸಭೆ ಸಮಾರಂಭವನ್ನು ನಡೆಸಿ ಇಲ್ಲಿನ ಸರಕಾರಕ್ಕೆ ನಮ್ಮ ಶಕ್ತಿಯ ಅರಿವನ್ನುಂಟುಮಾಡುವ ಅಗತ್ಯವಿದೆ. ಈ ರೀತಿ ನಮ್ಮ ಸಂಘಟನೆಗಳು ಸರಕಾರದ ಮೂಲಕ ಸೂಕ್ತ ಸೌಲಭ್ಯವನ್ನು ಪಡೆಯುಲು ಸಾಧ್ಯ ಎಂದರು. ಜಯಲಕ್ಷಿ ಶಿರಿಯ ಅವರು ಮುಖ್ಯ ಅತಿಥಿ ಗಿರೀಶ್ ಶೆಟ್ಟಿ ತೆಳ್ಳಾರ್ ಅವರನ್ನು ಪರಿಚಯಿಸಿದರು.

ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್ ನ ಅಧ್ಯಕ್ಷರಾದ ಯಶವಂತ ಎ.ಕೆ. ಅವರು
88 ವರ್ಷಗಳ ಹಿಂದೆ ತಮ್ಮ ಕಿರಿಯ ವಯಸ್ಸಿನಲ್ಲಿ ನಮ್ಮ ಹಿರಿಯರು ಸ್ಥಾಪಿಸಿ ಬೆಳೆಸಿದ ವೈಯಂಬಿಎ ಇಂದು ಹೆಮ್ಮರವಾಗಿ ಬೆಳೆದಿದ್ದು, ಹಿಂದಿನಂತೆ ಮುಂದೆಯೂ ನಮ್ಮ ಯುವಕರು ಈ ಸಂಘಟನೆಯನ್ನು ಮುನ್ನಡೆಸಬೇಕಾಗಿದೆ. ನಮ್ಮ ಯುವ ಜನಾಂಗವು ವೈಯಂಬಿಎ ಯ ಚುಕ್ಕಾಣಿ ಹಿಡಿದಲ್ಲಿ ಹಿರಿಯರಾದ ನಾವೆಲ್ಲರೂ ಅವರಿಗೆ ಮಾರ್ಗದರ್ಶನ ನೀಡಿ ಬೆಂಬಲಿಸುತ್ತೇವೆ. ವೈಯಂಬಿಎ ಈಗಾಗಲೇ “ಮೋಯಾ ಭವನ”ದಂತಹ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಸಮಾಜ ಬಾಂಧವರು ಎಲ್ಲರೂ ಒಗ್ಗಟ್ಟಿನಿಂದ ನಮ್ಮ ಎಲ್ಲಾ ಯೋಜಗೆಗಳಿಗೆ ಕೈಜೋಡಿಸಬೇಕು ಎಂದು ವಿನಂತಿಸಿದರು. ಅಶ್ವಿನಿ ಸಿ ಐಲ್, ಅವರು ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್ ನ ಚಟುವಟಿಕೆಗಳ ಮಾಹಿತಿಯಿತ್ತರು,
ಡಾ. ಅಮೃತ ಸೋಮೇಶ್ವರ ರವರು ಕನ್ನಡದಲ್ಲಿ ರಚಿಸಿದ “ಭಗವತೀ ಆರಾದನೆ” ಗ್ರಂಥವನ್ನು ದಯಾನಂದ ವಿ. ಉಚ್ಚಿಲ್ ಅವರು ಇಂಗ್ಲೀಷ್ ಗೆ ಬಾಷಾಂತರಿಸಿದ್ದು ಮುಖ್ಯ ಅತಿಥಿ ಗಿರೀಶ್ ಶೆಟ್ಟಿ ತೆಳ್ಳಾರ್ ಅವರು ಇದರ ಇಂಗ್ಲೀಷ್ ಆವೃತ್ತಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ದಯಾನಂದ ವಿ. ಉಚ್ಚಿಲ್ ಅವರು ಪುಸ್ತಕದ ಬಗ್ಗೆ ಮಾಹಿತಿ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಾಜದ ಹಿರಿ ಕಿರಿಯರು ಮಾತ್ರವಲ್ಲದೆ ಊರಿನಿಂದ ಆಗಮಿಸಿದ ಉಚ್ಚಿಲ, ಉದ್ಯಾವರ ಮತ್ತು ಐಲ ಬೋವಿ ಶಾಲೆಯ ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ಸಮಾಜದ ಮಕ್ಕಳಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಸಾಧಕರಾದ ತಾರನಾಥ ಡಿ. ಉಚ್ಚಿಲ್, ದಯಾನಂದ ವಿ. ಉಚ್ಚಿಲ್, ರವಿ ಎ. ಉದ್ಯಾವರ್, ನಾರಾಯನ್ ಬಿ. ಉದ್ಯಾವರ್ ಮತ್ತು ಮಾಧವ ಬಿ ಐಲ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿ ಎ. ಉದ್ಯಾವರ್ ಅವರು ತಾನು ಬಾಲ್ಯದಿಂದಲೇ ಹಿರಿಯರು ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್ ನಲ್ಲಿ ಕಾರ್ಯನಿರ್ವಹಿಸುತ್ತಿರುದನ್ನು ನೋಡುತ್ತಾ ಬಂದಿದ್ದು ಇಂದು ಸನ್ಮಾನ ಪಡೆಯಲು ತುಂಬಾ ಸಂತೋಷ ವಾಗಿದೆ ಎಂದರು.






ಸಮಾಜದ ಯುವ ಸಾಧಕರಿಗೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್ ನ ಪ್ರಧಾನ ಕಾರ್ಯದರ್ಶಿ ಕಿಶೋರ್ ಉದ್ಯಾವರ್, ಕೋಶಾಧಿಕಾರಿ ಸುಭಾಷ್ ಚಂದ್ರ ಉಚ್ಚಿಲ್ ಮತ್ತು ಯಶೋಧ ಬಟ್ಟಪ್ಪಾಡಿ ಉಪಸ್ಥಿತರಿದ್ದರು.
ಪ್ರಜ್ಞಾ ಉದ್ಯಾವರ, ನಮಿತಾ ಸಂತೋಷ ಉಚ್ಚಿಲ್ಕರ್, ಅಶ್ವಿನಿ ಐಲ್, ಜಯಲಕ್ಷ್ಮಿ ಶಿರಿಯಾ, ಹರ್ಷಾ ಕಾಸರಗೋಡು, ದಿವ್ಯ ದರ್ಶಕ್ ಉಚ್ಚಿಲ್, ಗುರುದೀಪ್ ಉಚ್ಚಿಲ್, ಅನಂತ್ ಚಂದ್ರ ಸಾಗರ್, ರಿತೇಶ್ ಕಾಡುಮನೆ, ಸೂರಜ್ ಉಚ್ಚಿಲ್, ನಳಿನಿ ಜಯಪ್ರಕಾಶ್ ಐಲ್, ಚಂದ್ರ ವಾಮಂಜೂರು, ಶೈಲೇಶ್ ಉದ್ಯಾವರ, ಖುಷಿ ಚಂದ್ರ ವಾಮಂಜೂರು ಮತ್ತಿತರರು ಕಾರ್ಯಕ್ರಮವನ್ನು ನಿರ್ವಹಿಸಿದರು. ಉಪಾಧ್ಯಕ್ಷ ತಾರನಾಥ ಎ. ಉಚ್ಚಿಲ್, ಜೊತೆ ಕಾರ್ಯದರ್ಶಿ ಕೃಪಾಕರ ಕೆ. ಕುಂಬ್ಳೆ, ಜೊತೆ ಕೋಶಾಧಿಕಾರಿ ನಮಿತ ಎಸ್ ಉಚ್ಚಿಲ್ಕರ್, ಸದಸ್ಯರುಗಳಾದ ದೇವೇಂದ್ರನಾಥ ಜಿ. ಅಯೂರ್, ಹರೀಶ್ ವಿ. ಉದ್ಯಾವರ್, ಶೈಲೇಶ್ ಆರ್. ಉದ್ಯಾವರ್, ಚಂದ್ರ ಎನ್ ವಾಮಂಜೂರು, ಜಯಪ್ರಕಾಶ್ ಆರ್ ಉದ್ಯಾವರ್, ಸುಭಾಷ್ ಶಿರಿಯಾ, ಭಾಸ್ಕರ ಕೆ ಉಚ್ಚಿಲ್, ಆನಂತ್ ಚಂದ್ರ ಸಾಗರ್ ಮೊದಲಾದವರು ಸಹಕರಿಸಿದರು.