
ಘಾಟ್ಕೋಪರ್ ಪಶ್ಚಿಮ ಅಸಲ್ಪದ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಿತ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಇದೇ ಜನವರಿ 18ರಂದು ಶನಿವಾರ, ಸಾಯಂಕಾಲ ಗಂಟೆ 6ರಿಂದ, ಪ್ರತಿ ಸಂವತ್ಸರದಂತೆ ಈ ಬಾರಿಯೂ 48ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಲಿದೆ.
ಕಾರ್ಯಕ್ರಮದ ವಿವರ :
ಸಂಜೆ ಗಂಟೆ 6 ರಿಂದ 8:30ರ ವರೆಗೆ ಶ್ರೀ ಸತ್ಯನಾರಾಯಣ ಮಹಾಪೂಜೆ
ರಾತ್ರಿ 8:30 ರಿಂದ 9ರ ತನಕ ಭಜನೆ
ಬಳಿಕ ಶ್ರೀದೇವಿಗೆ ಮಹಾಪೂಜೆ ಹಾಗೂ ಸತ್ಯನಾರಾಯಣ ದೇವರಿಗೆ ಮಹಾಮಂಗಳಾರತಿ
ರಾತ್ರಿ 9:30 ರಿಂದ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ
ಈ ಧಾರ್ಮಿಕ ಸತ್ಕಾರ್ಯದಲ್ಲಿ ಸದ್ಭಕ್ತರಾದ ತಾವೆಲ್ಲರೂ ತಮ್ಮ ಬಂಧು – ಮಿತ್ರರೊಡಗೂಡಿ ಆಗಮಿಸಿ, ತನು- ಮನ- ಧನಗಳಿಂದ ಸಹಕರಿಸಿ, ಶ್ರೀ ಲಕ್ಷ್ಮಿ ಸತ್ಯನಾರಾಯಣ ದೇವರ ಹಾಗೂ ಪರಿವಾರ ದೇವತೆಯರ ಕೃಪೆಗೆ ಪಾತ್ರರಾಗಿ ಗಂಧ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗಬೇಕಾಗಿ,
ಶ್ರೀ ಗೀತಾಂಬಿಕಾ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ, ಗೌರವಾಧ್ಯಕ್ಷ ಮುದ್ರಾಡಿ ದಿವಾಕರ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೋಟ್ಯಾನ್, ಸರ್ವ ಸದಸ್ಯರು ಹಾಗೂ ಮಹಿಳಾ ವಿಭಾಗದ ಸದಸ್ಯೆಯರು, ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಪರವಾಗಿ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ, ಸಂಚಾಲಕ ಸುನಿಲ್ ಎಂ ಅಮಿನ್ ವಿನಂತಿಸಿದ್ದಾರೆ .
ವಿ. ಸೂ : ಪೂಜೆಯನ್ನು ಮಾಡಲಿಚ್ಚಿಸುವ ಭಕ್ತಾದಿಗಳು ಮುಂಚಿತವಾಗಿ ರೂಪಾಯಿ 351/ ನ್ನು ಮಂದಿರದ ಕಚೇರಿಯಲ್ಲಿ ಅಥವಾ ಅರ್ಚಕರಲ್ಲಿ ಮುಂಗಡವಾಗಿ ನೀಡಿ ಹೆಸರು ನೋಂದಾಯಿಸಬೇಕಾಗಿ ವಿನಂತಿ. ಶ್ರೀ ಸತ್ಯನಾರಾಯಣ ಪೂಜೆಗೆ ಸಂಬಂಧಿಸಿ ಎಣ್ಣೆ ಧನ- ಧಾನ್ಯಗಳನ್ನು ನೀಡಲಿಚ್ಚಿಸುವವರು , ಶ್ರೀ ಕ್ಷೇತ್ರದ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಅಥವಾ ಅರ್ಚಕ ವೃಂದದವರನ್ನು ಸಂಪರ್ಕಿಸಬಹುದು.