
ಮಹಾವಿಷ್ಣು ಮಂದಿರ ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ ವತಿಯಿಂದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರವು ಫೆಬ್ರವರಿ 02 ರಂದು ಬೆಳಿಗ್ಗೆ 8 ರಿಂದ ಸಂಜೆ 3 ರ ತನಕ , ಕಿಡ್ ಲ್ಯಾಂಡ್ ಇಂಗ್ಲಿಷ್ ಶಾಲೆ, ರಾಮಕೃಷ್ಣ ಹರಿ ಸೊಸೈಟಿ , RBI ಕಾಲೋನಿ , ಕೊಪರ್ ಸ್ಟೇಷನ್ ಹತ್ತಿರ ನೆರವೇರಲಿರುವುದು.
“ರಕ್ತದಾನ ಮಾಡಿ ಜೀವನವೆಂಬ ಉಡುಗೊರೆ ನೀಡಿ ” ಎಂಬ ಆಶಯದೊಂದಿಗೆ ರಕ್ತದಾನ ಮಾಡಲು ಆಸಕ್ತಿ ಉಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆಯ ಪ್ರಯೋಜನವನ್ನು ಪಡೆದು ಕೊಳ್ಳ ಬೇಕಾಗಿ ಮಂದಿರದ ಗೌರವ ಪ್ರ.ಕಾರ್ಯದರ್ಶಿ ಸಚಿನ್ ಪೂಜಾರಿ ವಿನಂತಿಸಿಕೊಂಡಿದಾರೆ.