ಮಂಗಳೂರಿನ ಕೋಟೆಕಾರ್ ಬ್ಯಾಂಕಿನಲ್ಲಿ ಸುಮಾರು 12 ಕೋಟಿಗೂ ಅಧಿಕ ಮೌಲ್ಯದ ಹಣ ಹಾಗೂ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಮಧುರೈ ನಲ್ಲಿ ಮೂವರು ದರೋಡೆಕೋರರನ್ನು ಬಂಧಿಸಿದ್ದು ಬಂದಿತರಿಂದ ಪಿಎಟ್ ಕಾರು ಸಹಿತ ಎರಡು ಚೀಲದಲ್ಲಿದ್ದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮುರುಗಂಡಿ ದೇವರ್, ಪ್ರಕಾಶ್ ಆಲಿಯಾಸ್ ಜೋಶ್ವ, ಮನಿವಣ್ಣನ್ ಬಂಧಿತ ಆರೋಪಿಗಳಾಗಿದ್ದಾರೆ.
ಇದೆ ವೇಳೆ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಅವರು ಮುಂಬೈ ಹಾಗೂ ತಮಿಳುನಾಡು ಮೂಲಕ ಬಂಧನ ಮಾಡಲಾಗಿದೆ. ಆರೋಪಿಗಳು ದರೋಡೆಗೆಂದೇ ಮಂಗಳೂರಿಗೆ ಬಂದಿದ್ದರು. ಮುಂಬೈಯಿಂದ ಮಾಹಿತಿ ಕಲೆಹಾಕಿ ತಮಿಳುನಾಡಿಗೆ ತೆರಳಿ ಬಂಧನ ಮಾಡಿದ್ದೇವೆ. ರಾಜ್ಯದ ಗುಪ್ತಚರ ಇಲಾಖೆಯ ಸಹಾಯದಿಂದ ಡಕಾಯಿತರ ಚಲನ ವಲನಗಳ ಮಾಹಿತಿ ಲಭ್ಯವಾಯಿತು. ಮೂವರು ಆರೋಪಿಗಳು ತಮಿಳುನಾಡು ಮೂಲದವರಾದರೂ, ಮುಂಬೈ ಮೂಲದ ಗ್ಯಾಂಗಿಗೆ ಸೇರಿಕೊಂಡಿದ್ದರು. ನಾವು ಮುಂಬೈಗೆ ತನಿಖಾ ತಂಡ ಕಳಿಸಿ ಮಾಹಿತಿ ಕಲೆಹಾಕಿದ್ದೆವು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

previous post