ಮುಂಬಯಿ. ಜ. 21. ಕಳೆದ ಹದಿನೈದು ವರ್ಷಗಳಿಂದ ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಗಣೇರ್ ಪುರಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶ್ರೀ ನಿತ್ಯಾನಂದ ಸೇವಾ ಸಂಸ್ಥೆಯು 16 ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಪಾದಯಾತ್ರೆಯನ್ನು ಶನಿವಾರ ಫೆಬ್ರುವರಿ 1 ರಂದು ಹಮ್ಮಿಕೊಂಡಿದೆ. ಅಂದು ಸಾಯಂಕಾಲ 5 ಗಂಟೆಯಿಂದ ಮೀರಾಭಾಯಂದರ್ ರಸ್ತೆಯಲ್ಲಿರುವ ಸಿಲ್ವರ್ ಪಾರ್ಕ್ ಶ್ರೀ ಗಣೇಶ್ ಜೈ ಅಂಬಾ ಮಾತಾ ಮಂದಿರದಿಂದ(ಶುಭಂ ಹೋಟೇಲ್ ಸಮೀಪ) ಧಾರ್ಮಿಕ ವಿಧಿವಿಧಾನ ,ಭಜನೆ ಹಾಗೂ ಮಂಗಳಾರತಿ ನಡೆದು 6.30ಕ್ಕೆ ಶ್ರೀ ಕ್ಷೇತ್ರ ಗಣೇಶ್ ಪುರಿಗೆ ಪಾದಯಾತ್ರೆ ಹೊರಟು ಬೆಳಗ್ಗಿನ ಪೂಜೆ ಹಾಗೂ ಮಹಾ ಆರತಿಗೆ ತಲುಪಲಿದೆ.
ಈ ಪಾದಯಾತ್ರೆಯ ಕಾರ್ಯಕ್ರಮಕ್ಕೆ ಬೇವಿನಕೊಪ್ಪ ಶ್ರೀ ವಿಜಯೇಂದ್ರ ಸ್ವಾಮೀಜಿಯವರು ಹಾಗೂ ಕಾಶಿಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಸಾಣೂರು ಸಾಂತಿಂಜ ಜನಾರ್ಧನ ಭಟ್ ರವರು ಉಪಸ್ಥಿತರಿದ್ದು ಆಶೀರ್ವಚನ ನೀಡಿ ಪಾದಯಾತ್ರೆಗೆ ಚಾಲನೆ ನೀಡಲಿರುವರು.
ಪಾದಯಾತ್ರೆಯಲ್ಲಿ ಭಾಗವಹಿಸಲಿರುವ ಹಿರಿಯರಿಗೆ ಹಾಗೂ ಅಶಕ್ತರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುವುದು. ರಾತ್ರಿ ಊಟ ಮತ್ತು ಬೆಳಗ್ಗಿ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗುವುದು.
ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತರು ಪೂರ್ವ ಸಿದ್ಧತೆಗಾಗಿ ತಮ್ಮ ಹೆಸರನ್ನು ಜ. 30ರ ಒಳಗೆ ಮೊ. ಕ್ರಮಾಂಕ 9869703998, 9833850224, 9588111177 ಅಥವಾ 9702368777ರಲ್ಲಿ ತಮ್ಮ ಹೆಸರನ್ನು ನೊಂದಾಯಿಸಬೇಕಾಗಿ ವಿನಂತಿ.
ಈ ಧಾರ್ಮಿಕ ಕಾರ್ಯಕ್ಷ್ಮಮದಲ್ಲಿ ಭಾಗವಹಿಸಿ ಅದರ ಯಶಸ್ಸಿಗೆ ಸಹಕರಿಸಬೇಕಾಗಿ ಸಂಸ್ಥೆಯ ಸಂಚಾಲಕರಾದ ಆನಂದ್ ಎನ್ ಶೆಟ್ಟಿ, ಅದ್ಯಕ್ಷ ಗೋಪಾಲಕೃಷ್ಣ ಜಿ.ಗಾಣಿಗ, ಗೌರವಾಧ್ಯಕ್ಷ ಮಹಾಬಲ ಸಮಾನಿ, ಉಪಾಧ್ಯಕ್ಷೆ ವಸಂತಿ ಶೆಟ್ಟಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ದೇರಳಕಟ್ಟೆ ,ಗೌ. ಕಾರ್ಯದರ್ಶಿ ಸೀತಾರಾಮ ಸಿ. ಶೆಟ್ಟಿ, ಕೋಶಾಧಿಕಾರಿ ಶೈಲೇಶ್ ಶೆಟ್ಟಿ , ಜೊತೆ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಮಲ್ಲಿಕಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು, ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಜಯಶ್ರೀ ಬಿ. ಶೆಟ್ಟಿ,ಕಾರ್ಯದರ್ಶಿ ಗೀತಾ ಸಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಎಸ್.ಆರ್. ಶೆಟ್ಟಿ, ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ, ಸಹೆಗಾರರಾದ ನಾರಾಯಣ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಭಜನಾ ಕಮಿಟಿ ಕಾರ್ಯಾಧ್ಯಕ್ಷೆ ಲತಾ ಪುತ್ರನ್, ಸ್ಪೋರ್ಟ್ಸ್ ಕಮಿಟಿ ಕಾರ್ಯಾಧ್ಯಕ್ಷೆ ಶೈಲಜಾ ಎಸ್.ಶೆಟ್ಟಿ ಹಾಗೂ ಸದಸ್ಯರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

previous post