
ವಸಯಿ, ಜ.25 : ವಸಯಿ ಕರ್ನಾಟಕ ಸಂಘ ರಿ. ಇದರ 38ನೇ ವಾರ್ಷಿಕೋತ್ಸವ ಸಂಭ್ರಮ ಜ. 26ರಂದು ಸಂಜೆ 4.30ರಿಂದ ಅರ್ನ ಸ್ವರ್ಣ ಬ್ಯಾಂಕ್ವೆಟ್ ಹಾಲ್ ದತ್ತಾನಿ ಮಾಲ್, ವಸಯಿ (ಪ) ಇಲ್ಲಿ ವಿನೀತ್ ಕೆಮಿಕಲ್ಸ್ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಲಿದ್ದು ಪ್ರಾರಂಭದಲ್ಲಿ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ವೈವಿಧ್ಯ ಸಾಂಸ್ಕೃತಿಕ ನೃತ್ಯ ವೈಭವ ಜರಗಲಿದೆ.
ಈತನ್ಮಧ್ಯೆ ಸಂಜೆ 6.00 ರಿಂದ ವಸಯಿ ಕರ್ನಾಟಕ ಸಂಘ ಇದರ 38ನೇ ವಾರ್ಷಿಕೋತ್ಸವ ಸಂಭ್ರಮದ ಸಭಾ ಕಾರ್ಯಕ್ರಮ ಜರುಗಲಿದ್ದು ಸಂಘದ ಅಧ್ಯಕ್ಷರಾದ ದೇವೇಂದ್ರ ಬುನ್ನನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾರ್ಯಾಧ್ಯಕ್ಷರು ಬಂಟರ ಸಂಘ ಮುಂಬೈ ಎಸ್ಎಂ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆ ಪೊವಾಯಿ ಇದರ ಕಾರ್ಯಾಧ್ಯಕ್ಷರಾದ ರತ್ನಾಕರ ಶೆಟ್ಟಿ ಮುಂಡ್ಕೂರು ಆಗಮಿಸಲಿದ್ದು, ಅತಿಥಿ ಗಣ್ಯರಾಗಿ ಹರೀಶ್ ಜಿ ಅಮೀನ್ ಅಧ್ಯಕ್ಷರು ಬಿಲ್ಲವರ ಎಸೋಸಿಯೇಷನ್ ಮುಂಬೈ, ವಸಯಿ ಸ್ಥಳೀಯ ಖ್ಯಾತ ವೈದ್ಯರಾದ ಡಾ. ಸಾಗರ್ ಆರ್ ಶೆಟ್ಟಿ ಗೋರೆಗಾಂವ್ ಕರ್ನಾಟಕ ಸಂಘದ ಗೌರವ ಪ್ರ. ಕಾರ್ಯದರ್ಶಿ ಸರಿತಾ ಎಸ್ ನಾಯಕ್ ಇವರು ಆಗಮಿಸಲಿದ್ದಾರೆ. ಸಭಾ ಸಮಾರಂಭದ ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದಿರುವ ನ್ಯಾಯವಾದಿ ರಾಮ್ ಪ್ರಸಾದ್ ಸಿ. ಶೆಟ್ಟಿ ಹಾಗೂ ಸುಮತಿ ಓ. ಪೂಜಾರಿ ಪೂಜಾರಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು.
ಆ ಬಳಿಕ ವಸಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ಸದಸ್ಯರಿಂದ ವಿ ಎನ್ ಕುಲಾಲ್ ವೇಣೂರು ಬರೆದು ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶಿಸಿದ ಮದೆಟ್ ಉಲ್ಲೆ ಮಾಧವೆ…. ಸಂಸಾರಿಕ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ .
ಈ ನಿಟ್ಟಿನಲ್ಲಿ ಜರಗಲಿರುವ ವೈವಿಧ್ಯಮಯ ಅದ್ದೂರಿ ಕಾರ್ಯಕ್ರಮಕ್ಕೆ ವಸಯಿ ಕರ್ನಾಟಕ ಸಂಘದ 38ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಕಲಾಭಿಮಾನಿಗಳೆಲ್ಲರೂ ಹಾಗೂ ಸದಸ್ಯ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಗೌರವಾಧ್ಯಕ್ಷ ವಿಶ್ವನಾಥ್ ಪಿ ಶೆಟ್ಟಿ ವಿನೀತ್ ಕೆಮಿಕಲ್ಸ್ ಉಪಾಧ್ಯಕ್ಷರಾದ ಕರ್ನೂರು ಶಂಕರ ಆಳ್ವ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಕೆ ಶೆಟ್ಟಿ ಗೌರವ ಕೋಶಾಧಿಕಾರಿ ವಿಜಯ ಎಮ್ ಶೆಟ್ಟಿ ಜೊತೆ ಕಾರ್ಯದರ್ಶಿ ಸಿಎ ವಿಜಯ್ ಕುಂದರ್ ಜೊತೆ ಕೋಶಾಧಿಕಾರಿ ಹರಿಪ್ರಸಾದ್ ಎಸ್ ಶೆಟ್ಟಿ ಸಲಹಾ ಸಮಿತಿಯ ಕಾರ್ಯಾಧ್ಯಕ್ಷರಾದ ಪಾಂಡು ಎಲ್ ಶೆಟ್ಟಿ ಸಲಹಾ ಸಮಿತಿಯ ಉಪಕಾರ್ಯಾಧ್ಯಕ್ಷ ಓ.ಪಿ. ಪೂಜಾರಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಎನ್ ಅಮೀನ್ ಯುವ ವಿಭಾಗದ ಕಾರ್ಯಾಧ್ಯಕ್ಷ ರಿತೇಶ್ ಶೆಟ್ಟಿ ಹಾಗೂ ಉಪ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಎಲ್ಲ ಪದಾಧಿಕಾರಿಗಳು ಸರ್ವ ಸದಸ್ಯ ಬಾಂಧವರು ವಿನಂತಿಸಿ ಕೊಂಡಿದ್ದಾರೆ.
ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಅಂದು ಸಂಘದ ಕಚೇರಿಯಲ್ಲಿ ಬೆಳಿಗ್ಗೆ 7:30 ರಿಂದ 9:00 ಗಂಟೆ ವರೆಗೆ ಶ್ರೀಸತ್ಯನಾರಾಯಣ ಮಹಾಪೂಜೆ 9 ರಿಂದ ಬೆಳಿಗ್ಗೆ 10 :15ರ ತನಕ ಸಂಘದ ಕಚೇರಿಯಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಧ್ವಜಾರೋಹಣ , ಅ ಬಳಿಕ 10.30ರಿಂದ ಸ್ಥಳೀಯ ಸ್ವಾಮಿ ನಾರಾಯಣ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ದೇವೇಂದ್ರ ಬುನ್ಶನ್ ರವರ ಅಧ್ಯಕ್ಷತೆಯಲ್ಲಿ ಸಂಘದ ವಾರ್ಷಿಕ ಮಹಾಭೆ ಜರಗಲಿದೆ. ಬಳಿಕ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.