
“ಒಂದೇ ಜಾತಿ, ಒಂದೇ ಮತ ಮತ್ತು ಒಂದೇ ದೇವರು” ಎಂಬ ಸತ್ಯವಾಕ್ಯವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಯ ಬಳಿಕ ಅವರ ದಂತವನ್ನು [ದಿವ್ಯ ದಂತಮ್] ಜೋಪಾನವಾಗಿ ಇರಿಸಿಕೊಳ್ಳಲಾಗಿದ್ದು ಇದನ್ನು ಪ್ರತೀ ವರ್ಷ ಭಕ್ತರ ದರ್ಶನಕ್ಕಾಗಿ ಇರಿಸಲಾಗುತ್ತಿದೆ. ಈ ಬಾರಿ ರವಿವಾರ ಫೆಬ್ರವರಿ 2 ರಂದು ಬೆಳಗ್ಗೆ ಗಂಟೆ 8.30 ರಿಂದ ಸಾಯಂಕಾಲ ಗಂಟೆ 4-00 ರ ವರೆಗೆ ಇದನ್ನು ಭಕ್ತರ ವೀಕ್ಷಣೆಗಾಗಿ ನವಿ ಮುಂಬಯಿಯ ನೆರುಳ್‌ನ ಸೆಕ್ಟರ್ 20ರಲ್ಲಿರುವ ಗುರುದೇವಗಿರಿ ಮಂದಿರದ ಆವರಣದಲ್ಲಿ ಇರಿಸಲಾಗುತ್ತದೆ. ಶಿವಗಿರಿ ಆಶ್ರಮದ ಸ್ವಾಮಿಯವರ ನೇತೃತ್ವದಲ್ಲಿ ಇದರ ಆಯೋಜನೆ ಮಾಡಲಾಗಿದೆ. ಈ ದಂತವು ಅಮೇರಿಕಾದಲ್ಲಿರುವ ದಂತವೈದ್ಯರಾದ ಜಿ.ವೊ.ಪಾಲ್ ಇವರ ಬಳಿ ಇತ್ತು. ಅದನ್ನೀಗ ನೆರುಳ್‌ನ ಗುರುದೇವಗಿರಿ ಮಂದಿರದಲ್ಲಿ ಒಂದು ಪ್ರತ್ಯೇಕ ಕೊಣೆಯಲ್ಲಿ ಜೋಪಾನವಾಗಿ ಇರಿಸಲಾಗಿದೆ ಎಂದು ಮಂದಿರದ ಆಡಳಿತ ಮಂಡಳಿಯ ಸದಸ್ಯರೊಬ್ಬರು ನನಗೆ ತಿಳಿಸಿದರು. ಪ್ರದರ್ಶನದ ಜೊತೆಗೆ ಗರುದೇವಗಿರಿ ಮಂದಿರದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳೂ ಜರಗಲಿದ್ದು ಗುರುಭಕ್ತರು ಇದರ ಪ್ರಯೋಜನ ಪಡೆದು ಧನ್ಯರಾಗಬಹುದು.
-ಸೋಮನಾಥ ಎಸ್.ಕರ್ಕೇರ, 9819321186