
ದಾನಿಗಳ ಸಹಕಾರದಿಂದ ಸುದೀರ್ಘ ಕಾಲ ಧಾರ್ಮಿಕ ಸೇವೆ – ರಘು ಮೂಲ್ಯ, ಗೋರೆಗಾಂವ್
ಚಿತ್ರ ವರದಿ ದಿನೇಶ್ ಕುಲಾಲ್,
ಮುಂಬಯಿ : ಆರು ದಶಕಗಳಿಂದ ಇಲ್ಲಿನ ಪರಿಸರದ ಹಾಗೂ ನಗರದ ವಿವಿದೆಡೆಯಿಂದ ಭಕ್ತಾಬಿಮಾನಿಗಳು ಆಗಮಿಸಿ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಆಶ್ರೀರ್ವಾದ ಪಡೆಯುತ್ತಾ ಬಂದಿದ್ದು, ದಾನಿಗಳ ಹಾಗೂ ಭಕ್ತಾಬಿಮಾನಿಗಳ ಸಹಕಾರದಿಂದ ಇದೀಗ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಗೋರೆಗಾಂವ್ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಅಧ್ಯಕ್ಷ ರಘು ಮೂಲ್ಯ ಗೋರೆಗಾಂವ್ ನುಡಿದರು.

ಜ.24 ಮತ್ತು 25ರಂದು ಗೋರೆಗಾಂವ್ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವ ಸಮಾರಂಭವು ದೇವಸ್ಥಾನದ ಆವರಣದಲ್ಲಿ ಜರಗಗಿದ್ದು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಇನ್ನು ಮುಂದೆಯು ಇದೇ ರೀತಿ ಎಲ್ಲರೂ ನಮ್ಮೊಂದಿಗೆ ಸಹಕರಿಸಿ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಕೃಪೆಗೆ ಪಾತ್ರರಾಗಬೇಕಾಗಿ ವೆಂದು ನುಡಿದರು.

ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಮೂಲ್ಯ ಪಾದೆಬೆಟ್ಟು ಮಾತನಾಡಿ ಕಳೆದ ೬೦ ವರ್ಷಗಳಿಂದ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಸೇವೆ ಸಲ್ಲಿಸುತ್ತಾ ಬಂದ ಎಲ್ಲಾ ಹಿರಿಯರನ್ನು ಇಂದು ಸ್ಮರಿಸಬೇಕಾಗಿದೆ. ಅವರ ಪರಿಶ್ರಮ ಎಂದೂ ಮರೆಯುವಂತಿಲ್ಲ ಎಂದರು.
,ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಗೌರವ ಅಧ್ಯಕ್ಷ ಮೋಹನ್ ಪೂಜಾರಿ ಮಾತನಾಡಿ ಆಶ್ರಮದ ಮೂಲಕ ಈ ಪರಿಸರದ ಎಲ್ಲರಲ್ಲೂ ಧಾರ್ಮಿಕ ಪ್ರಜ್ಞೆ ಜಾಗೃತವಾಗಿದೆ ಜಗದ್ಗುರು ನಿತ್ಯಾನಂದ ಸ್ವಾಮಿಯವರ ಮಹಿಮೆ ಅಗನಿತ ಎಂದು ನುಡಿದರು,
ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲಿಯಾನ್ ಮಾತನಾಡಿ ನಿತ್ಯಾನಂದ ಆಶ್ರಮದಲ್ಲಿ ನಡೆಯುತ್ತಿರುವ ಧಾರ್ಮಿಕ ಸೇವೆಯು ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವಂತಾಗಲಿ ಎಂದರು.
ಶಾಸಕಿ ವಿದ್ಯಾ ಠಾಕೂರ್, ಜಯಪ್ರಕಾಶ್ ಠಾಕೂರ್, ಮಾಜಿ ಕಾರ್ಪೊರೇಟರ್ ಸ್ವಪ್ನಿಲ್ ತೆಂಬಾವಲ್ಕರ್ ದಂಪತಿ ಪಾಲ್ಗೊಂಡು ಆಶ್ರಮದ ಸೇವಾಕಾರಿಗಳಿಗೆ ನಮ್ಮ ನಿರಂತರ ಸಹಕಾರವಿದೆ ಎಂದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಅಂಬರ್ನಾಥ್ ನ ಜೈದೀಪ್ ಕನ್ಸ್ಟ್ರಕ್ಷನ್ ಕಂಪನಿಯ ಸಿಎಂ ಡಿ ಜಗದೀಶ್ ಬಂಜನ್ ದಂಪತಿ,ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಗೌರವ ಅಧ್ಯಕ್ಷ ಮೋಹನ್ ಪೂಜಾರಿ,., ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಬಂಗೇರ ಮತ್ತು ಶ್ರೀಧರ್ ಮೂಲ್ಯ, ಗೌ. ಪ್ರ. ಕಾರ್ಯದರ್ಶಿ ಸಂತೋಶ್ ಸಾಲ್ಯಾನ್, ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್ ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಬಿತ ಜೆ ಕೋಟ್ಯಾನ್, ಮತ್ತಿತರರು ಪಾಲ್ಗೊಂಡಿದ್ದರು,
ಕಾರ್ಯಕ್ರಮವನ್ನು ಕಾರ್ಯದರ್ಶಿ ಸಂತೋಷ್ ಸಾಲಿನ್ ನಿರೂಪಿಸಿದರು

ಇದೇ ಸಂದರ್ಭದಲ್ಲಿ ಪರಿಸರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ಪೂಜೆಗೆ ಸಹಕಾರ ನೀಡಿದ ದಾನಿಗಳನ್ನು ವಿಶೇಷವಾಗಿ ಗೌರವಿಸಲಾಯಿತು,
ಪೂಜಾ ಕಾರ್ಯದಲ್ಲಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ದಂಪತಿ, ಉಪ ಕಾರ್ಯ ಧ್ಯಕ್ಷ ನ್ಯಾಯವಾದಿ ಸೋಮನಾಥ ಬಿ ಅಮೀನ್, ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ ಪೂಜಾರಿ, ಭರತ್ ಬಾಬುಭಾಯಿ ರಾಥೋಡ್, ಸಹನಾ ಬಿಲ್ಡರ್ಸ್ ನ ಶ್ರೀನಿವಾಸ್ ಮತ್ತು ಹೇಮಾ ಶೆಟ್ಟಿ, ಮಹೇಶ್ ಆರ್. ಕರ್ಕೇರ , ಮತ್ತು ವಿವಿಧ ಉಪನಗರಗಳ ವಿವಿಧ ಸಂಘ-ಸಂಸ್ಥೆಗಳ ಧಾರ್ಮಿಕ ಕ್ಷೇತ್ರಗಳ ಪದಾಧಿಕಾರಿಗಳು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದ್ದರು
ಜ.24 ರಂದು ವಜ್ರ ಮಹೋತ್ಸವ ಸಮಾರಂಭ ಉದ್ಘಾಟನೆಗೊಂಡಿತು ನಂತರ ಶ್ರೀ ನಿತ್ಯಾನಂದ ಭಜನಾ ಮಂಡಳಿಯ ಸದಸ್ಯರಿಂದ ಮತ್ತು ಭಕ್ತಾಭಿಮಾನಿಗಳಿಂದ ಏಕಾಹಾ ಭಜನೆ ಶ್ರೀರಾಮ ಜಯರಾಮ ಜಯ ಜಯ ರಾಮ ನಾಮಸ್ಮರಣೆ ನಡೆಯಿತು. ಜ. 25ರಂದು ಏಕಹಾ ಭಜನೆ ಮಂಗಳೋತ್ಸವ, ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ ಮತ್ತು ಪಾದುಕ ಪೂಜೆ, ಭಜನೆ ಸಂಕೀರ್ತನೆ ನಡೆಯಿತು. ಮಹಾ ಪ್ರಸಾದ ಭೋಜನ ಅನ್ನಪ್ರಸಾದವನ್ನು ರವೀಂದ್ರ ಸುಂದರ ಶೆಟ್ಟಿ ಸಹೋದರರು ಮತ್ತು ಪರಿವಾರ ಪ್ರಾಯೋಜಕರಾಗಿ ಸಹಕರಿಸಿದರು. ನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ ಮಲಾಡ್ ಪೂರ್ವ ದ ಪರಮಾನಂದ ಜೆ ಭಟ್ ಅವರ ಪುರೋಹಿತ್ವದಲ್ಲಿ ನಡೆಯಿತು
ರಾತ್ರಿ, ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಸದಸ್ಯರಿಂದ ಯಕ್ಷಗಾನ “ಪಂಚವಟಿ ವಾಲಿ ಮೋಕ್ಷ” .
ಕಾರ್ಯಕ್ರಮದ ಯಶಸ್ಸಿಗೆ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ , ಮಹಿಳಾ ವಿಭಾಗದ ಪರವಾಗಿ ಶಾಂಭವಿ ಕೆ ಪೂಜಾರಿ, ಪೂರ್ಣಿಮಾ ಶೆಟ್ಟಿ, ಸುಮತಿ ಪೂಜಾರಿ, ರೇವತಿ ಸಾಲಿಯಾನ್ , ಪೂಜಾ ಸಮಿತಿಯ ವಿಶ್ವನಾಥ ಎಸ್ ಪೂಜಾರಿ, ರವಿ ಶೆಟ್ಟಿ, ಪ್ರೇಮಲತ ಆರ್ ಮೂಲ್ಯ, ಸುಧಾಕರ್ ಅಮೀನ್ , ಆರ್ಥಿಕ ಸಾಮಾಜಿಕ ಹಾಗೂ ವಜ್ರ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ್ ಮೂಲ್ಯ, ಉಪಕಾರ್ಯಾಧ್ಯಕ್ಷ ಅಶೋಕ್ ಸಾಲ್ಯಾನ್, ನಿರ್ವಾಹಣಾ ಕಾರ್ಯದರ್ಶಿ, ಜನಾರ್ದನ ಕೋಟ್ಯಾನ್, ಕೋಶಾಧಿಕಾರಿ ಸತೀಶ್ ಪೂಜಾರಿ, ಜೊತೆ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ, ಸದಸ್ಯರುಗಳಾದ ಅಶೋಕ್ ಪೂಜಾರಿ, ಲತೀಶ್ ಪೂಜಾರಿ, ರಚನಾ ಎಸ್ ಕುಲಾಲ್ , ಉದಯ ಪೂಜಾರಿ, ಶ್ರೀನಿಧಿ ಸಾಲ್ಯಾನ್, ಶ್ರೇಯ ಪೂಜಾರಿ ಮತ್ತು ಇತರರು ಸಹಕರಿಸಿದರು.