
ಸದಸ್ಯರ ಸಹಕಾರದಿಂದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸುವ : ದೇವೇಂದ್ರರ ಬುನ್ನನ್,
ಚಿತ್ರ ವರದಿ ದಿನೇಶ್ ಕುಲಾಲ್
ವಸಾಯಿ, ಜ.28 ಗ್ರಾಮೀಣ ಭಾಗವಾದ ವಸಾಯಿ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತುಳು ಕನ್ನಡಿಗರ ಹೆಮ್ಮೆಯ ಸಂಸ್ಥೆ ವಸಾಯಿ ಕರ್ನಾಟಕ ಸಂಘದ 38ನೇ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ದೇವೇಂದ್ರ ಬಿ. ಬುನ್ನನ್‌ರವರ ಅಧ್ಯಕ್ಷತೆಯಲ್ಲಿ ಜ.26 ರಂದು ರವಿವಾರ ಸಂಘದ ಕಚೇರಿ ಎದುರುಗಡೆಯಿರುವ ಸ್ವಾಮಿ ನಾರಾಯಣ ಮಂದಿರದ ಮೊದಲನೇ ಮಡಿಯ ಸಭಾಂಗಣ ಪಾರ್ವತಿ ಸಿನಿಮಾ ಹತ್ತಿರ ವಸಯಿ (ಪ)ಇಲ್ಲಿ ನಡೆಯಿತು,
ಸಂಘದ ಸಲಹೆ ಸಮಿತಿಯ ಉಪಕಾಯಾಧ್ಯಕ್ಷ ಓ ಪಿ ಪೂಜಾರಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು, ಸಭೆಯಲ್ಲಿದ್ದ ಸದಸ್ಯರು ಅನುಮೋದಿಸಿದರು,
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ದೇವೇಂದ್ರ ಬುನ್ನನ್ ಮಾತನಾಡುತ್ತ ಸಂಘವನ್ನು ಒಳ್ಳೆಯ ಉದ್ದೇಶದಿಂದ ಸ್ಥಾಪನೆಗೊಂಡಿದ ಆ ಮೂಲಕವೇ ನಿರಂತರವಾಗಿ ಸಂಘ ಕಾರ್ಯನಿರ್ವಹಿಸುತ್ತಿದೆ ಸದಸ್ಯರೆಲ್ಲರೂ ಉತ್ತಮ ರೀತಿಯ ಸಹಕಾರ ಪ್ರೋತ್ಸಾಹ ಬೆಂಬಲದಿಂದ ಇದು ಸಾಧ್ಯವಾಗಿದೆ ನನ್ನ ಕಾಲಾವಧಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಮಹಿಳಾ ವಿಭಾಗ ಯುವ ವಿಭಾಗ ಎಲ್ಲಾ ರೀತಿಯಲ್ಲಿ ನನ್ನ ಸೇವ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ ಮುಂದಿನ ಎರಡು ವರ್ಷದ ಅವಧಿಯಲ್ಲಿ ಕೂಡ ನನ್ನ ಸೇವಕರಿಗೆ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಇರಲಿ, ಪರಿಸರದ ದಾನಿಗಳ ಸಹಕಾರದಿಂದ ಸಂಘಟನೆ ಬಲಿಷ್ಠಗೊಂಡಿದೆ ಮುಂದಿನ ದಿನಗಳಲ್ಲಿ ಕೂಡ ಸಂಘವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸು ವ ಎಂದು ನುಡಿದರು,

ಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ್ ಪಿ ಶೆಟ್ಟಿ ಸಂಘದ ಸೇವಾ ಕಾರ್ಯಗಳು ನಿರಂತರವಾಗಿ ಸದಸ್ಯರಿಗೆ ತಲುಪುವಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಅವಿರತ ಕ್ಷಮಿಸುತ್ತಾರೆ ಕಳೆದ ಅವಧಿಗೆ ಅಧ್ಯಕ್ಷರಾಗಿ ಸೇವಿ ಸಲ್ಲಿಸುತ್ತಾ ಬಂದಿರುವ ದೇವೇಂದ್ರ ಬುನ್ನನ್ ಮತ್ತವರ ತಂಡ ಉತ್ತಮ ಸೇವಾಕಾರಿಗಳನ್ನು ಮಾಡುತ್ತಾ ಬಂದಿದೆ ಅವರು ಮುಂದಿನ ಅವಧಿಗೆ ಅಧ್ಯಕ್ಷರಾಗಿ ಸೇವೆ ಮಾಡಬೇಕು ಎನ್ನುವುದು ನನ್ನ ಮತ್ತು ಸದಸ್ಯರೆಲ್ಲರ ಅಭಿಪ್ರಾಯ ಅದಕ್ಕಾಗಿ ಅವರನ್ನು ಮುಂದಿನ ಅಧ್ಯಕ್ಷರಗಿ
ಮಮ್ಮತದಿಂದ ಆಯ್ಕೆ ಮಾಡೋನ ಎಂದು ನುಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರೆಲ್ಲರೂ ಒಪ್ಪಿಗೆಯನ್ನು ತಿಳಿಸಿದರು.
ಸಂಘದ ಸಲಹೆ ಸಮಿತಿಯ ದಾರಿಯ ಅಧ್ಯಕ್ಷ ಪಾಂಡು ಎಲ್ ಶೆಟ್ಟಿ ಮಾತನಾಡುತ್ತಾ ಸಂಘ ಸ್ಥಾಪನೆಯ ದಿನಗಳಲ್ಲಿ ಬಹಳಷ್ಟು ಕಷ್ಟ ವಾಗಿತ್ತು ಆದರೆ ಈಗ ನಮ್ಮ ಸಂಘದೊಳಗೆ ಮೂರು ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ, ಹಿಂದೂ ಧರ್ಮ ಉಳಿಯುವಿಗಾಗಿ ಯಕ್ಷಗಾನ ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದೇವೆ ಅಲ್ಲದೆ ಸದಸ್ಯರು ಆರ್ಥಿಕವಾಗಿ ಬಲಾಢ್ಯಗೊಳ್ಳಲು ಕ್ರೆಡಿಟ್ ಸೊಸೈಟಿ ಕೂಡ ಕಾರ್ಯ ನಿರ್ವಹಿಸುತ್ತಿದೆ ಸದಸ್ಯರು ಸಂಘದಿಂದ ದೂರ ಇರಬಾರದು ಎಲ್ಲಾ ಚಟುವಟಿಕೆಗಳಲ್ಲಿ ಸೇವ ಭಾವನೆಯಿಂದ ಕಾರ್ಯನಿರ್ವಹಿಸಿ ಎಂದು ನುಡಿದರು,

ಕರ್ನಾಟಕ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ ಮಾತನಾಡುತ್ತಾ ಸಂಘದ ಸೇವಾ ಕಾರ್ಯಗಳು ವಿಸ್ತರ ಕೊಳ್ಳುತ್ತಿದ್ದಂತೆ ಸಂಘದ ಕಚೇರಿಯನ್ನು ಕೂಡ ವಿಸ್ತಾರ ಮಾಡುವ ಯೋಚನೆಯನ್ನು ಯೋಜನೆಯನ್ನು ರೂಪಿಸುವಂತಾಗಬೇಕು, ಸಂಘದ ಕಾರ್ಯಾಲಯ ಇನ್ನಷ್ಟು ಜಾಗ ಇದ್ದಾಗ ವಿವಿಧ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ ಸದಸ್ಯರೆಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದು ನುಡಿದರು,
ಸಂಘದಉಪಾಧ್ಯಕ್ಷರಾದ ಶಂಕರ್ ಆಳ್ವ ಕರ್ನೂರು ಮಾತನಾಡಿ ದೇಶದ ಎರಡು ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವವನ್ನು ನಮ್ಮ ಸಂಘ ಅರ್ಥಪೂರ್ಣವಾಗಿ ಆಚರಿಸುತ್ತಾ ಸಂಘದ ಸದಸ್ಯರಿಗೆ ಈ ಎರಡು ಹಬ್ಬದ ಬಗ್ಗೆ ಮಹತ್ವರಾದ ಮಾಹಿತಿಯನ್ನು ನೀಡಿ ದರು, ಸಂಘ ಸದಸ್ಯರಿಗೆ ಬಹಳಷ್ಟು ಸೇವಕರಿಗಳನ್ನು ಮಾಡುತ್ತಾ ಗೆಲ್ಲ ಸಮುದಾಯದವರನ್ನು ಒಗ್ಗಟ್ಟು ಮಾಡಿದ ಹೆಗ್ಗಳಿಕೆ ನಮ್ಮ ಸಂಘಕ್ಕೆ ಎಂದು ನುಡಿದರು,
ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಪ್ರಮೀಳಾ ಎನ್ ಅಮೀನ್ ಮಾತನಾಡುತ್ತಾ ನಾನು ಎರಡು ಅವಧಿಗೆ 4 ವರ್ಷಗಳ ಕಾಲ ಕಾರ್ಯ ಧ್ಯಕ್ಷೆರಾಗಿ ಸೇವೆ ಮಾಡಿದ್ದೇನೆ ಆ ಸಂದರ್ಭದಲ್ಲಿ ಮಹಿಳೆಯರೆಲ್ಲರೂ ಬಹಳಷ್ಟು ಪ್ರೋತ್ಸಾಹವನ್ನು ಸಹಕಾರವನ್ನು ನೀಡುತ್ತಾ ಬಂದಿದ್ದಾರೆ, ಮುಂದಿನ ಅವಧಿಗೆ ನೂತನ ಮಹಿಳಾ ಧ್ಯಕ್ಷೆ ನೇಮಕವಾಗಲಿದೆ ಅವರಿಗೂ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಬೆಂಬಲವಿರಲಿ ಒಗ್ಗಟ್ಟಿನಿಂದ ಸಂಗವನ್ನು ಮುನ್ನಡೆಸೋಣ ಎಂದು ನುಡಿದರು,
ಈ ಸಂದರ್ಭದಲ್ಲಿ ಉಪಸ್ಥಿರಿದ್ದ ಸಂಘದ ಸದಸ್ಯರುಗಳಾದ ದೇವೇಂದ್ರ ಭಕ್ತ, ಮೋಹಿನಿ ಮಲ್ಪೆ, ಮುಕುಂದ ಶೆಟ್ಟಿ ಅವರು ಸಂಘ ಸದಸ್ಯರಿಗೆ ನೀಡುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು,
ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ್ ಪಿ ಶೆಟ್ಟಿ, ಉಪಾಧ್ಯಕ್ಷರಾದ ಶಂಕರ್ ಆಳ್ವ ಕರ್ನೂರು,ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಕೆ ಶೆಟ್ಟಿ
ಸಲಹೆ ಸಮಿತಿಯ ಕಾರ್ಯ ಧ್ಯಕ್ಷ ಪಾಂಡು ಎಲ್ ಶೆಟ್ಟಿ ಉಪ ಕಾರ್ಯ ಅಧ್ಯಕ್ಷ ಒಪಿ ಪೂಜಾರಿ, ಜೊತೆ ಕೋಶ ಅಧಿಕಾರಿ ಹರಿಪ್ರಸಾದ್ ಎಸ್ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯ ಅಧ್ಯಕ್ಷ ಯಶೋಧರ್ ಕೋಟ್ಯಾನ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳ ಎನ್ ಅಮೀನ್, ಯುವ ವಿಭಾಗದ ಕಾರ್ಯ ಅಧ್ಯಕ್ಷ ರಿತೇಶ್ ಶೆಟ್ಟಿ ಉಪಸ್ಥರಿದ್ದರು,
ಕಾರ್ಯಕ್ರಮವನ್ನು ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್ ರೈ ನಿರೂಪಿಸಿದರು,
, ಕಾರ್ಯದರ್ಶಿ ರವೀಂದ್ರ ಕೆ ಶೆಟ್ಟಿ, ಧನ್ಯವಾದ ನೀಡಿದರು,
ವಾರ್ಷಿಕ ಮಹಾಸಭೆಯ ಮೊದಲು ಸಂಘದ ಕಚೇರಿಯಲ್ಲಿ ಸಂಘದ ಜೊತೆ ಕಾರ್ಯದರ್ಶಿ ಸಿಎ ವಿಜಯಕುಂದರ್ ದಂಪತಿಗಳ ಯಜಮಾನಿಕೆಯಲ್ಲಿ ಸತ್ಯನಾರಾಯಣ ಮಹಾಪೂಜೆ ಬಳಿಕ ದ್ವಜಹಾರಣ ನಡೆಯಿತು ,
——–
ಬಾಕ್ಸ್
ಸಂಘದ ಅಧ್ಯಕ್ಷ ದೇವೇಂದ್ರ ಬಿ. ಬುನ್ನನ್ ಮರು ಆಯ್ಕೆ,
ವಸಾಯಿ ಕರ್ನಾಟಕ ಸಂಘದ 38ನೇ ವಾರ್ಷಿಕ ಮಹಾಸಭೆಯನ್ನು ಸಭೆಯಲ್ಲಿ ಸಂಘದ ಅಧ್ಯಕ್ಷ ರಾಗಿ ದೇವೇಂದ್ರ ಬಿ. ಬುನ್ನನ್‌ರವರನ್ನು ಅವರನ್ನು ಎರಡನೇ ಅವಧಿಗೆ 2025-2027 ಸಾಲಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ,
ದೇವೇಂದ್ರರ ಬುನ್ನನ್‌ರವರು ವಸಾಯಿ ಪರಿಸರದಲ್ಲಿ ಕುಟ್ಟಿ ಅಣ್ಣ ಎಂದೇ ಜನಪ್ರಿಯ ರಾಗಿರುವರು, ಈ ಪರಿಸರದಲ್ಲಿ ಹೋಟೆಲ್ ಉದ್ಯಮಿಯಾಗಿ ಸಮಾಜ ಸೇವಕರಾಗಿ, ಯಕ್ಷಗಾನ ,ನಾಟಕ ಮತ್ತಿತರ ಸಾಂಸ್ಕೃತಿಕ ಕಲೆಗಳಿಗೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುವ ದೇವೇಂದ್ರರ ಬುನ್ನನ್‌ರವರು ವಸಾಯಿ ತಾಲೂಕಿನ ಹೋಟೆಲ್ ಅಸೋಸಿಯೇಷನ್ ನಲ್ಲಿ ಜವಾಬ್ದಾರಿತ ಸೇವೆಯನ್ನು ಮಾಡುತ್ತಿದ್ದಾರೆ, ಶ್ರೀ ರಜಕ ಸಂಘದ ವಸಾಯಿ ತಾಲೂಕಿನ ಜವಾಬ್ದಾರಿತ ಸೇವೆಯನ್ನು ನಿರ್ವಹಿಸಿ ದೇವರು,