31 C
Mumbai
October 8, 2026
Mumbai News Kannada
ಮುಂಬಯಿ

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ನೂತನ ಅಧ್ಯಕ್ಷರಾಗಿ ಸಂತೋಷ್ ಕೆ ಪುತ್ರನ್ ಆಯ್ಕೆ



ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ), ಮುಂಬಯಿ ಇದರ 83ನೇ ವಾರ್ಷಿಕ ಮಹಾಸಭೆ ಅಕ್ಟೋಬರ್ 5ರಂದು (ರವಿವಾರ) ಮುಂಬಯಿ ಪೊರ್ಟ್‌ನ ಕಾಂಜಿಕೇತ್ಸಿ ಸಭಾಗೃಹದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಮಹಾಸಭೆಗೂ ಮುನ್ನ ನಡೆದ ವಿಶೇಷ ಮಹಾಸಭೆಯಲ್ಲಿ ಆಯ್ಕೆಯಾದ ಆಡಳಿತ ಸಮಿತಿಯನ್ನು ಮತ್ತು ಸಂಘದ 2025–27ನೇ ಸಾಲಿನ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಸರ್ವಾನುಮತದೊಂದಿಗೆ ಅಧಿಕೃತವಾಗಿ ದೃಢೀಕರಿಸಲಾಯಿತು.
ಮುಂದಿನ ಅವಧಿಗೆ ಅಧ್ಯಕ್ಷರಾಗಿ ಯಶಸ್ವಿ ಉದ್ಯಮಿ ಸಂತೋಷ್ ಕೃಷ್ಣ ಪುತ್ರನ್ ರವರು ಅವಿರೋಧವಾಗಿ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಸುರೇಶ್ ಕಾಂಚನ್,
ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಮೆಂಡನ್,
ಗೌರವ ಕೋಶಾಧಿಕಾರಿಯಾಗಿ ನಾಗರಾಜ್ ಶ್ರೀಯಾನ್, ಉಪಾಧ್ಯಕ್ಷರಾಗಿ ಮಹಾಬಲ ಕುಂದರ್ ಹಾಗೂ ರಮೇಶ್ ಬಂಗೇರ ರವರನ್ನು ನೇಮಕ ಮಾಡಲಾಯಿತು. ಹಾಗೂ
ಜೊತೆ ಕಾರ್ಯದರ್ಶಿಗಳಾಗಿ ಕೃಷ್ಣಮೂರ್ತಿ ನಾಯ್ಕ್ ಮತ್ತು ಅಶೋಕ್ ಮೆಂಡನ್,
ಜೊತೆ ಕೋಶಾಧಿಕಾರಿಯಾಗಿ ಪ್ರವೀಣ್ ನಾಯ್ಕ್,
ಕಾಂಚಿನೀ ಕಲಾಕೇಂದ್ರ ಹಾಗೂ ವಾಗ್ವರ್ಧಿನಿ ಸಭಾ ಕಾರ್ಯದರ್ಶಿಯಾಗಿ ಭಾಸ್ಕರ್ ಶ್ರೀಯಾನ್,
ಕ್ರೀಡಾ ಸಮಿತಿಯ ಕಾರ್ಯದರ್ಶಿಗಳಾಗಿ ರಘುರಾಮ್ ಮೆಂಡನ್ ಮತ್ತು ಸುನಿಲ್ ಕುಂದರ್,
ಸೇವಾ ದಳದ ದಳಪತಿಯಾಗಿ ದಿನೇಶ್ ಮೊಗವೀರ,
ಹಾಗೂ ಆಡಳಿತ ಸಮಿತಿಯ ಸದಸ್ಯರಾಗಿ ರಾಜೇಂದ್ರ ಚಂದನ್, ಸುರೇಶ್ ತೋಳಾರ್, ಎನ್‌.ಎಚ್‌. ಬಗ್ವಾಡಿ, ರಾಘವೇಂದ್ರ ಮೊಗವೀರ, ಮಾದವ್ ಸುವರ್ಣ, ಉಮೇಶ್ ಮೊಗವೀರ, ಉದಯಕುಮಾರ್ ಪುತ್ರನ್, ರಾಘವೇಂದ್ರ ಚಂದನ್, ರಾಜೀವ್ ನಾಯ್ಕ್, ಮಂಜುನಾಥ ನಾಯ್ಕ್, ಮತ್ತು ಸತೀಶ್ ಶ್ರೀಯಾನ್ ರವರನ್ನು ಆಯ್ಕೆ ಮಾಡಲಾಯಿತು.

ಸಂಸ್ಥೆಯ ಈ ನೂತನ ಮಂಡಳಿಯು ಮುಂದಿನ ಅವಧಿಯಲ್ಲಿ ಸಂಘದ ಅಭಿವೃದ್ಧಿ, ಸದಸ್ಯರ ಕಲ್ಯಾಣ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸವನ್ನು ಸಭೆಯು ವ್ಯಕ್ತಪಡಿಸಿದೆ.



Related posts

ಡೊಂಬಿವಲಿ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ: 67ನೇ ವಾರ್ಷಿಕ ಮಹಾಪೂಜೆ ಸಂಭ್ರಮ

Mumbai News Desk

ಮುಂಬೈ ಪ್ರವಾಹ ನಮ್ಮದೇ ಸೃಷ್ಟಿ, ನಾಗರಿಕ ಸಂಸ್ಥೆಯನ್ನು(ಬಿಎಂಸಿ )ದೂಷಿಸುವುದನ್ನು ನಿಲ್ಲಿಸಿ: ಬಾಂಬೆ ಹೈಕೋರ್ಟ್ ಆಕ್ರೋಶ

Mumbai News Desk

ಬಂಟರ ಸಂಘ ಮುಂಬೈ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

Mumbai News Desk

ಬಿಲ್ಲವರ ಅಸೋಸಿಯೇಶನ್ ಇದರ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ವಿಜ್ರಂಭಣೆಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯೋತ್ಸವ ಆಚರಣೆ

Mumbai News Desk

ಮಹಾರಾಷ್ಟ್ರ Education Today.Co.ಇವರ ವತಿಯಿಂದ ಪ್ರಶಸ್ತಿ ಪ್ರಧಾನ ಸಮಾರಂಭ – ಮುಂಬೈ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಡೈನಾಮಿಕ್ ಸ್ಕೂಲ್ ಅವಾರ್ಡ್

Mumbai News Desk

ಶ್ರೀನಿವಾಸ ಫೌಂಡೇಶನ್, ಮುಂಬೈ ಹಾಗೂ ವಿಶ್ವ ಗಾಣಿಗರ ಚಾವಡಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 6 6ವಿದ್ಯಾರ್ಥಿಗಳಿಗೆ ₹11 ಲಕ್ಷ ವಿದ್ಯಾರ್ಥಿ ವೇತನ –26 ಬಡ ಕುಟುಂಬಗಳಿಗೆ ಅನ್ನಪೂರ್ಣ ಭಾಗ್ಯ

Mumbai News Desk