
ಮಹಿಳೆಯರಲ್ಲಿ ಸಂಘಟನಾ ಶಕ್ತಿ , ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ, ಮುನ್ನೆಲೆಗೆ ತರುವಲ್ಲಿ ಸಮಿತಿ ಶ್ರಮಿಸುತ್ತಿದೆ: ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು
ಚಿತ್ರ ವರದಿ : ದಿನೇಶ್ ಕುಲಾಲ್
ಮಲಾಡ್ ಪೂರ್ವದಲ್ಲಿ
ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿ ಪ್ರತೀ ವರ್ಷ ಹಲವಾರು ಸಮಾಜಪರ ಕಾರ್ಯಕ್ರಮಗಳನ್ನು ನಡೆಯುತ್ತಿದ್ದು, ಸಮಿತಿಯ ಮಹಿಳೆಯರು ಸ್ಥಳೀಯ ಮಹಿಳೆಯರನ್ನು ಒಗ್ಗೂಡಿಸುವುದರೊಂದಿಗೆ ಅವರ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ನೀಡುತ್ತಾ ಸಮಾಜಪರ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತದೆ ಹಾಗೂ ಮಹಿಳೆಯರಲ್ಲಿ ಸಂಘಟನಾ ಶಕ್ತಿ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ, ಮುನ್ನೆಲೆಗೆ ತರುವಲ್ಲಿ ಶ್ರಮಿಸುತ್ತಿದೆ ಎಂದು ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು ನುಡಿದರು.

ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಜ. 26 ರಂದು ಉತ್ಕರ್ಷ ಸಭಾಗೃಹ, ಉತ್ಕರ್ಷ ವಿದ್ಯಾ ಮಂದಿರ, ಮಲಾಡ್ ಪೂರ್ವ ಇಲ್ಲಿ ಜರಗಿದ್ದು, ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ನಮ್ಮ ಮಹಿಳಾ ವಿಭಾಗವು ಧಾರ್ಮಿಕ, ಸಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಮಿತಿಯ ಕಾರ್ಯಕಾರಿ ಸಮಿತಿಯೊಂದಿಗೆ ಕೈಜೋಡಿಸುತ್ತಿದ್ದು, ಸ್ಥಳೀಯ ಮಹಿಳೆಯರ ಹಾಗೂ ಮಕ್ಕಳ ಪ್ರತಿಭಾ ವಿಕಸನಕ್ಕೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹಳದಿ ಕುಂಕುಮದಂತಹ ಕಾರ್ಯಕ್ರಮಗಳಿಂದ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಒಂದಾಗಿ ಕ್ರೀಯಾಶೀಲರಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾ. ಮೀನಾಕ್ಷಿ ಆಚಾರ್ಯ ಇವರು ಮಾತನಾಡುತ್ತಾ ಇಲ್ಲಿನ ಮಹಿಳೆಯರ ಒಗ್ಗಟ್ಟು ನಿಜಕ್ಕೂ ಅಭಿನಂದನೀಯ. ಸ್ಥಳೀಯ ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಅವಕಾಶವನ್ನು ಕಲ್ಪಿಸಿ ಕೊಡುವ ಮಹಿಳಾ ಸದಸ್ಯರ ಕಾರ್ಯವನ್ನು ಮೆಚ್ಚಬೇಕಾಗಿದೆ, ಸ್ವಂತ ಉದ್ಯಮವನ್ನು ಮಾಡುತ್ತಾ ಬದುಕಿನಲ್ಲಿ ಸಾವಲಂಬಿಯಾಗಿ ಬದುಕಬೇಕು ಎನ್ನುತ್ತಾ ಸಮಾರಂಭಕ್ಕೆ ಶುಭ ಕೋರಿದರು.




ಸಮಿತಿಯ ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ರತ್ನ ಡಿ. ಕುಲಾಲ್ ಮಾತನಾಡುತ್ತಾ ತನ್ನ ಅವಧಿಯಲ್ಲಿ ನಡೆದ ಎಲ್ಲಾ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದ ಸದಸ್ಯರೆಲ್ಲರಿಗೂ ಅಬಾರ ವ್ಯಕ್ತಪಡಿಸಿದರು. ಮುಂದೆಯೂ ಇದೇ ರೀತಿ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯವೆಸೊಗೋಣ ಎಂದರು.
ಈ ಸಂದರ್ಭದಲ್ಲಿ ಸೂರಪ್ಪ ಕುಂದರ್ ಅವರಿಂದ ಮ್ಯಾಜಿಕ್ ಶೋ , ಮಹಿಳಾ ವಿಭಾಗದ ಸದಸ್ಯರಿಂದ ಭಜನೆ, ಯುವ ವಿಭಾಗದವರಿಂದ ಕುಣಿತ ಭಜನೆ, ನಡೆಯಿತು.
ಬಳಿಕ ಮಹಿಳೆಯರಿಂದ ಹಳದಿ ಕುಂಕುಮ ನಡೆಯಿತು.
ವೇದಿಕೆಯಲ್ಲಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಲಾ ಎಂ. ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕರ್ಕೇರ, ಉಪಕಾರ್ಯಾಧ್ಯಕ್ಷೆ ಸಂಧ್ಯ ಎಸ್. ಪ್ರಭು, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್ ಆಚಾರ್ಯ, ವಿಧ್ಯಾ ಡಿ. ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್ ರಾವ್, ವಿಧ್ಯಾ ಎಸ್ ನಾಯಕ್, ಸಲಹಾ ಸಮಿತಿಯ ಮೋಹಿನಿ ಜೆ. ಶೆಟ್ಟಿ ಮತ್ತು ರತ್ನ ಡಿ. ಕುಲಾಲ್, ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಪೂಜಾರಿ ಕಾರ್ಯದರ್ಶಿ ಸಿಎ ರಾಜೇಶ್ ಮೂಲ್ಯ ,ಸಂಚಾಲಕ ಡಾ. ಶಶಿನ್ ಕೆ ಆಚಾರ್ಯ, ಕೋಶಧಿಕಾರಿ ಶಿವಾನಿ ಪ್ರಭು ಉಪಸ್ತರಿದ್ದರು,

ಅತಿಥಿಗಳನ್ನು ಭಾರತೀ ಎಸ್ ಆಚಾರ್ಯ ಹಾಗೂ ರತ್ನ ಡಿ ಕುಲಾಲ್ ಪರಿಚಯಿಸಿದರು.
ಅರಿಶಿನ ಕುಂಕುಮದ ಮಹತ್ವವನ್ನು ವಿದ್ಯಾ ಎಸ್ ನಾಯಕ್ ತಿಳಿಸಿದರು. ಮಹಿಳಾ ವಿಭಾಗದ ಚಟುವಟಿಕೆಯನ್ನು ನಳಿನಿ ಕರ್ಕೇರ ವಿವರಿಸಿದರು.
ದಾನಿಗಳ ಯಾದಿಯನ್ನು ರತ್ನ ಪೂಜಾರಿ ವಾಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಯುವ ವಿಭಾಗದ ಅದಿತಿ ಆಚಾರ್ಯ, ಅಕ್ಷರಿ ಆಚಾರ್ಯ ,ಅಸ್ಮಿತಾ ಪೂಜಾರಿ, ನಿಯತಿ ದೇವಾಡಿಗ ನಿರೂಪಿಸಿದರು.
ಸಭಾ ಕಾರ್ಯಕ್ರಮವನ್ನು ಶೀಲಾ ಪೂಜಾರಿ ಹಾಗೂ ಶೋಭಾ ರಾವ್ ಮತ್ತು ವಿದ್ಯಾ ಆಚಾರ್ಯ ನಿರೂಪಿಸಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀಮತಿ ಆಚಾರ್ಯ, ಸುಮಿತ್ರ ಪೂಜಾರಿ ,ಪದ್ಮಾವತಿ ಪೂಜಾರಿ, ಹರಿಣಾಕ್ಷಿ ಮೂಲ್ಯ, ಪುಷ್ಪ ಸಾಲಿಯಾನ್, ಅರುಣಾ ಪೂಜಾರಿ, ಶಾರದಾ ಪೂಜಾರಿ, ಪುಷ್ಪಾ ಆಚಾರ್ಯ, ರೇವತಿ ಪೂಜಾರಿ ,ಸುನಂದ ಬಂಗೇರ, ಶ್ರೀದೇವಿ ಆಚಾರ್ಯ ಪುಷ್ಪ ಎಸ್ ಪೂಜಾರಿ, ಸುನೀತ ಕುಂದರ್
ಕುಸುಮಾ ಶೆಟ್ಟಿ, ಕೃಪ ಮೂಲ್ಯ, ಶೃತಿ ಪೂಜಾರಿ,
ದೀಪಾ ಪ್ರಜ್ವಲಿ ಸಿದ್ದರು. ಗಣೇಶನ ಸ್ತುತಿಯನ್ನು ಭಾರತಿ ಆಚಾರ್ಯ ಹಾಗೂ ಅನುಷಾ ಆಚಾರ್ಯ ಸ್ತುತಿಸಿದರು.
ಒಗ್ಗಟ್ಟಿನಿಂದ ಮಹಿಳಾ ವಿಭಾಗವನ್ನು ಮುನ್ನಡೆಸುತ್ತೇನೆ:
ಶ್ರೀಮತಿ ಕುಮರೇಶ್ಆಚಾರ್ಯ
ಪೂಜಾ ಸಮಿತಿಯ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಶ್ರೀಮತಿ ಕುಮರೇಶ್ ಆಚಾರ್ಯ ಅವರು ಮಾತನಾಡುತ್ತಾ ನಾನೀಗ ಮಹಿಳಾ ಸಮಿತಿಯ ಜವಾಬ್ಧಾರಿಯನ್ನು ಹೊಂದಿದ್ದು, ಎಲ್ಲರೂ ಸಹಕಾರದಿಂದ ವರ್ಷಪೂರ್ತಿ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಸಮಿತಿಯನ್ನು ಬಲ್ಲಾಡ್ಯಗೊಳಿಸುವ ಕಾರ್ಯವನ್ನು ಮಹಿಳಾ ವಿಭಾಗ ಮಾಡುತ್ತೇವೆ , ಪರಿಸರದ ಮಹಿಳೆಯರೆಲ್ಲರೂ ನಮ್ಮ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಾಗ ಅವರ ಸಾಮಾಜಿಕ ಸೇವಾ ಚಟುವಟಿಕೆ ವಿಸ್ತಾರಗೊಳ್ಳಲು ಸಹಕಾರಿ ಯಾಗುತ್ತದೆಎಂದು ವಿನಂತಿಸುತ್ತಾ, ಹಳದಿ ಕುಂಕುಮ ಸಮಾರಂಭಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು.
ಮಹಿಳೆಯರೆಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಮುನ್ನಡೆಸಬೇಕು:ನಿಶಿತಾ ಸೂರ್ಯಕಾಂತ್ ಸುವರ್ಣ
ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಯ ವ್ಯವಸ್ಥಾಪಕರು, ಮಿಸ್ ಸುಂದರಿ | ಮಿಸ್ಸೆಸ್ ಕರ್ನಾಟಕ ಶೈಲಿಯ ಐಕಾನ್ ನಿಶಿತಾ ಸೂರ್ಯಕಾಂತ್ ಸುವರ್ಣ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನ ನೀಡುವುದರೊಂದಿಗೆ ತಮ್ಮ ಸೌಂದರ್ಯದ ಕಡೆಯು ಹೆಚ್ಚಿನ ಗಮನ ನೀಡುವ ಅಗತ್ಯವಿದೆ , ಮಹಿಳೆಯರೆಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಮುನ್ನಡೆಸಬೇಕು ಆ ಮೂಲಕ ನಮ್ಮ ಬದುಕಿನ ಎಲ್ಲಾ ರೀತಿಯ ವಿಚಾರಗಳು ವಿಸ್ತಾರ ವಾಗಲು ಸಾಧ್ಯವಾಗುತ್ತದೆ, ಸಮಾಜದ ಸೇವೆ ಮಾಡುವಾಗ ಒಗ್ಗಟ್ಟಿನಿಂದ ಮಾಡಬೇಕು ಎಂದು ನುಡಿದರು.