
ಭಾಂಡುಪ್ ಪಶ್ಚಿಮ, ಎನ್ ಇ ಎಸ್ ಸ್ಕೂಲ್ ಮಾರ್ಗ, ಭಟ್ಟಿಪಾಡ ಕ್ರಾಸ್ ರೋಡ್ ಬಳಿ ಶ್ರೀ ಶನೇಶ್ವರ ಸೇವಾ ಸಮಿತಿ ಸಂಚಾಲಕತ್ವದ, ದಿ. ಶ್ರೀರಾಮ ಸ್ವಾಮೀಜಿಯವರಿಂದ ಸ್ಥಾಪನೆಗೊಂಡ ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ, ಇದರ 41ನೇ ವಾರ್ಷಿಕ ಮಹಪೂಜೆಯು ಜ. 30ರಿಂದ ಫೆ. 1ರ ತನಕ ವೇದಮೂರ್ತಿ ಗುರುಪ್ರಸಾದ್ ಭಟ್ ಇವರ ದಿವ್ಯ ಹಸ್ತದಿಂದ ಶಾಸೋಕ್ತವಾಗಿ ಜರಗಲಿದೆ.
ಕಾರ್ಯಕ್ರಮ
ತಾ 30.01.25 ಗುರುವಾರ ಸಂಜೆ 6ಕ್ಕೆ ಸರಿಯಾಗಿ ಸಾಮೂಹಿಕ ಪ್ರಾರ್ಥನೆ ಸ್ವಸ್ತಿ ಪುಣ್ಯಹ ವಾಚನ, ವಾಸ್ತು ಹೋಮ, ಬಲಿ, ರಕ್ಷೋಘ್ನ ಹೋಮ
ತಾರೀಕು 31. 01.25. ಶುಕ್ರವಾರ ಬೆಳಿಗ್ಗೆ ಗಂಟೆ 5:00ಕ್ಕೆ ಗಣ ಹೋಮ, 8ಕ್ಕೆ ನವಗ್ರಹ ಶಾಂತಿ, ಶನಿ ಶಾಂತಿ, ಗಂಟೆ 3ರಿಂದ 6 ರ ತನಕ ಭಜನಾ ಕಾರ್ಯಕ್ರಮ (ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮತ್ತು ಸ್ವಾಮಿ ನಿತ್ಯಾನಂದ ಶ್ರೀ ಕೃಷ್ಣ ಪ್ರಸಾದಿತಾ ಭಜನಾ ಮಂಡಳಿ) ಇವರಿಂದ, ಸಂಜೆ 6ರಿಂದ ದುರ್ಗಾ ನಮಸ್ಕಾರ ಪೂಜೆ.
ತಾ. 01.02.25,ಶನಿವಾರ ಸ್ವಸ್ತಿ ಪುಣ್ಯಾಹವಾಚನ, ಪ್ರಧಾನ ಹೋಮ, ಗಂಟೆ 8 ರಿಂದ ಶ್ರೀ ಸತ್ಯನಾರಯಣ ಮಹಾಪೂಜೆ, ಪಲ್ಲಪೂಜೆ, ಅನ್ನ ಸಂತರ್ಪಣೆ ಮಧ್ಯಾಹ್ನ ಗಂಟೆ 12 ರಿಂದ ಶನಿಗ್ರಂಥ ಪಾರಾಯಣ, ದೀಪ ಪ್ರಜ್ವಲನೆ ಜಯಂತ್ ಎನ್ ಪೂಜಾರಿ ಅವರಿಂದ( ಶ್ರೀ ಮಹಾಕಾಳಿ ಕ್ಷೇತ್ರ ಕಿಂಡಿ ಪಾಡ,ಅಮರ್ ನಗರ್ ಮುಲಂಡ್ )
ತಾ. 08.02.25 ಶನಿವಾರ ಸಾಯಂಕಾಲ ಗಂಟೆ 6 ರಿಂದ 7ರ ತನಕ ರಂಗ ಪೂಜೆ
ಶ್ರೀ ಶನೇಶ್ವರ ಮಂದಿರ ಭಟ್ಟಿಪಾಡ ಇದರ 41ನೇ ವಾರ್ಷಿಕ ಮಹಾಪೂಜೆಯಲ್ಲಿ ತಾವು ಗಳೆಲ್ಲ ಬಂದು ಮಿತ್ರರೊಡಗೂಡಿ ಆಗಮಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಶನಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶನೇಶ್ವರ ಸೇವಾ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ವಿನಂತಿಸದ್ದಾರೆ.