July 23, 2026
Mumbai News Kannada
ಪ್ರಕಟಣೆ

ಜ. 24/25/26 : ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಸಾಂಸ್ಕೃತಿಕ ಉಪ ಸಮಿತಿಯ ಆಶ್ರಯದಲ್ಲಿ ‘ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ ‘







ಮುಂಬೈನ ಸಾಂತಾಕ್ರೂಜ್ ಪೂರ್ವದಲ್ಲಿರುವ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಸಾಂಸ್ಕೃತಿಕ ಉಪಸಮಿತಿಯ ಆಶ್ರಯದಲ್ಲಿ 2026ರ ಜನವರಿ 24, 25 ಮತ್ತು 26ರಂದು ಮೂರು ದಿನಗಳ ಕಾಲ ‘ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ ” ವಿಜೃಂಭಣೆಯಿಂದ ಜರುಗಲಿದೆ.
ಸಂಘದ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಮತ್ತು ಗೌರವಾಧ್ಯಕ್ಷರಾದ ಎಲ್. ವಿ. ಅಮೀನ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಾಂಸ್ಕೃತಿಕ ಹಬ್ಬದಲ್ಲಿ ತುಳು ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ತುಳು ನಾಟಕಗಳ ಸ್ಪರ್ಧೆ ಮತ್ತು ಪ್ರದರ್ಶನಗಳು ನಡೆಯಲಿವೆ. ಸಾಂಸ್ಕೃತಿಕ ಉಪಸಮಿತಿಯ ಕಾರ್ಯಾಧ್ಯಕ್ಷ ನವೀನ್ ಪಡು ಇನ್ನಾ ಮತ್ತು ಗೌರವ ಕಾರ್ಯದರ್ಶಿ ಹರೀಶ್ ಜಿ ಸಾಲಿಯಾನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಮಸ್ತ ತುಳು-ಕನ್ನಡಿಗರಿಗೆ ಈ ಉತ್ಸವಕ್ಕೆ ಆತ್ಮೀಯ ಸ್ವಾಗತವನ್ನು ಕೋರಲಾಗಿದೆ.

ದಿನಾಂಕ: 24.01.2026, ಶನಿವಾರ

ಸಮಯ: ಬೆಳಿಗ್ಗೆ 10:00 ಗಂಟೆಗೆ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮ.
ಅಂದು ಪ್ರದರ್ಶನಗೊಳ್ಳುವ ನಾಟಕಗಳು
1) ‘ಡೋಲು’ (ಭಾಂಡೂಪ್ ಸ್ಥಳೀಯ ಕಚೇರಿ), ರಚನೆ : ನಾಗರಾಜ್ ಗುರುಪುರ, ನಿರ್ದೇಶನ : ರವಿ ಎಸ್. ಶೆಟ್ಟಿ.
2) ‘ ದೇಯಕನ ದೈವದಿಲ್ಲು’ (ಕಾಂದಿವಲಿ ಸ್ಥಳೀಯ ಕಚೇರಿ) ರಚನೆ : ನಾರಾಯಣ ಶೆಟ್ಟಿ ನಂದಳಿಕೆ, ನಿರ್ದೇಶನ : ಚಂದ್ರಕಾಂತ್ ಸಾಲಿಯಾನ್.
3) ‘ಎನ್ನ ಕತೆ… ಏರ್ಲಾ ಎನ್ನಂದಿನ’ (ಕಲ್ಯಾಣ್ ಸ್ಥಳೀಯ ಕಚೇರಿ – ರಚನೆ ಮತ್ತು ನಿರ್ದೇಶನ – ಕುಮಾರ್ ಪೂಜಾರಿ.
4)’ ಸಂಸಾರ’ (ಡೊಂಬಿವಲಿ ಸ್ಥಳೀಯ ಕಚೇರಿ) ರಚನೆ : ನಾರಾಯಣ ಶೆಟ್ಟಿ ನಂದಳಿಕೆ, ನಿರ್ದೇಶನ : ನವೀನ್ ಸುವರ್ಣ ಬೆಂಗ್ರೆ.
5) ‘ಯಕ್ಷ ನಿಲಯ’ (ಚೆಂಬೂರು ಸ್ಥಳೀಯ ಕಚೇರಿ)ರಚನೆ: ನಾಗರಾಜ್ ಗುರುಪುರ, ನಿರ್ದೇಶನ : ಅನಿಲ್ ಹೆಗ್ಡೆ.

ದಿನಾಂಕ: 25.01.2026 – ಭಾನುವಾರ ಬೆಳಿಗ್ಗೆ 10ಗಂಟೆಗೆ
1) ‘ಏರೆಗ್ಲಾ ಪನೊಡ್ಚಿ’ (ಘಾಟ್‌ಕೋಪರ್ ಸ್ಥಳೀಯ ಕಚೇರಿ) ರಚನೆ: ಸತೀಶ್ ಏರ್ಮಳು, ನಿರ್ದೇಶನ: ಬಾಲಕೃಷ್ಣ ಶೆಟ್ಟಿ, ಅದ್ಯಾಪಾಡಿ
2) ‘ಕಾಜಿ’ (ಬೋರಿವಲಿ ಸ್ಥಳೀಯ ಕಚೇರಿ), ರಚನೆ: ನಾಗರಾಜ್ ಗುರುಪುರ, ನಿರ್ದೇಶನ: ಸುಜಾತ ಪೂಜಾರಿ
3) ‘ಬಲಿ’ (ನವಿ ಮುಂಬಯಿ ಸ್ಥಳೀಯ ಕಚೇರಿ )ರಚನೆ: ನೆಕ್ಕಿದಪುನಿ ಗೋಪಾಲಕೃಷ್ಣ, ನಿರ್ದೇಶನ: ಅಶೋಕ್ ಕೋಡ್ಯಡ್ಕ
4) ‘ಬಗ್ಗನ ಭಾಗ್ಯ’ ( ಮೀರಾ ರೋಡ್ ಸ್ಥಳೀಯ ಕಚೇರಿ) ರಚನೆ: ಗಂಗಾಧರ್ ಕಿದಿಯೂರು, ನಿರ್ದೇಶನ: ಅಶೋಕ್ ವಳದೂರು
5) ‘ಸರ್ವಂ ಪರೋಕ್ಷ’ (ವಿಕ್ರೋಲಿ ಸ್ಥಳೀಯ ಕಚೇರಿ) ರಚನೆ / ನಿರ್ದೇಶನ: ಶಶಿಕಾಂತ್ ಕೋಟ್ಯಾನ್
6) ‘ಸ್ಮಾರ್ಟ್ ಫೋನ್ ಸಭಾ’ ( ಜೋಗೇಶ್ವರಿ ಸ್ಥಳೀಯ ಕಚೇರಿ) ರಚನೆ / ನಿರ್ದೇಶನ: ಚೈತನ್ಯ ಸದಾನಂದ ಅಮೀನ್

ದಿನಾಂಕ : ಜನವರಿ 26, 2026, ಸೋಮವಾರ ಬೆಳಿಗ್ಗೆ 10 ಗಂಟೆಗೆ
1) ‘ಸೋಕ್ರಟೀಸ್’ (ಅಂಧೇರಿ ಸ್ಥಳೀಯ ಕಚೇರಿ) ಕನ್ನಡ ಆವೃತ್ತಿ- ಆರ್. ಡಿ. ಕಾಮತ್ , ತುಳು ಅನುವಾದ – ನಾರಾಯಣ ಶೆಟ್ಟಿ ನಂದಳಿಕೆ,ನಿರ್ದೇಶನ – . ರಹೀಂ ಸಚ್ಚರಿ ಪೇಟೆ
2) ‘ಅಮ್ಮೇರ್’ ( ಥಾಣೆ ಸ್ಥಳೀಯ ಕಚೇರಿ ) ರಚನೆ : ವಿಟ್ಠಲನಾಥ್, ನಿರ್ದೇಶನ : ಬಾಬಾ ಪ್ರಸಾದ್ ಅರಸ
3) ‘ಚಂದ’ ( ನಾಲಾಸೋಪರ ಸ್ಥಳೀಯ ಕಚೇರಿ )ರಚನೆ : ಅನಿಕೇತ್, ತುಲುವಿಗೆ : ಆನಂದ್ ಸಿ ಕೋಟ್ಯಾನ್ ಮತ್ತು ಪ್ರಮೋದ್ ಎಸ್ ಸುವರ್ಣ, ನಿರ್ದೇಶನ ಪ್ರಮೋದ್ ಎಸ್ ಸುವರ್ಣ.
4) ‘ಮೋಕ್ಷ’ ( ಮುಲುಂಡ್ ಸ್ಥಳೀಯ ಕಚೇರಿ ) ರಚನೆ : ವಿಜಯ್ ಕುಮಾರ್ ಶೆಟ್ಟಿ, ನಿರ್ದೇಶನ : ಕೃಷ್ಣರಾಜ್ ಶೆಟ್ಟಿ

ಸಮಾರೋಪ ಸಮಾರಂಭ:

ಅದೇ ದಿನ ಸಂಜೆ 04:00 ಗಂಟೆಯಿಂದ ಈ ನಾಟಕೋತ್ಸವದ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ.



Related posts

  ಪುಣೆ  ‌:ಸುಂದರ ಪೂಜಾರಿ ಕಾಣೆಯಾಗಿದ್ದಾರೆ

Mumbai News Desk

ಅ.9,ಭಾಯಂದರ್ ಬಿಲ್ಲವರ ಅಸೋಸಿಯೇಶನಿನ ಸ್ಥಳೀಯ ಕಚೇರಿಯ ವತಿಯಿಂದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ.

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾ ಸಮಿತಿ: ಡಿ. 20 ರಂದು 81ನೇ ವಾರ್ಷಿಕ ಮಹಾಪೂಜೆ

Mumbai News Desk

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯಿಂದ ಆಟಿಡೊಂಜಿ – ಬಂಟ ಕೂಟ ಮತ್ತು ಡಾ| ಆರ್ ಕೆ ಶೆಟ್ಟಿ ಪ್ರಾಯೋಜಿತ “ಸಂಜೀವಿನಿ” ಲೋಕಾರ್ಪಣೆ.

Mumbai News Desk

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿ ಮುಂಬಯಿ – ಸೆ. 7 ರಂದು 94 ನೇ ವರ್ಷದ ಗಣೇಶೋತ್ಸವ ಆಚರಣೆ

Mumbai News Desk

ಭಾಯಂದರ ಶ್ರೀ  ಮೂಕಾಂಬಿಕಾ ಶಾಂತ ದುರ್ಗೆಗೆ ದೇವಸ್ಥಾನ, ಎ 14 ರಂದು ವಾರ್ಷಿಕ ಮಹಾಪೂಜೆ,

Mumbai News Desk