23.5 C
Karnataka
April 4, 2025
ಪ್ರಕಟಣೆ

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ



ಸುದ್ದಿ ವಿವರ : ಪಿ.ಆರ್.ರವಿಶಂಕರ್  8483980035

        ಡೊಂಬಿವಿಲಿ : ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರಗಿಸುತ್ತಾ ಬಂದಿರುವ ಡೊಂಬಿವಿಲಿ ಪೂರ್ವದ ಪ್ರತಿಷ್ಟಿತ  ಶ್ರೀ ವರದ ಸಿದ್ಧಿವಿನಾಯಕ  ಸೇವಾ ಮಂಡಲವು ತಮ್ಮ ಪರಿಸರದಲ್ಲಿನ ಶ್ರೀ ಮಹಾಗಣಪತಿ ಮಂದಿರದಲ್ಲಿ ಈ ವರ್ಷದ ಮಾಘ ಮಾಸದಲ್ಲಿನ ಗಣೇಶ ಉತ್ಸವವನ್ನು ಆಚರಿಸಲಿದೆ.

ಇದೇ ಫೆಬ್ರುವರಿ ತಾ.01 ಶನಿವಾರದಂದು ಪ್ರಾತಃ ಕಾಲದ ಗಣಹೋಮದೊಂದಿಗೆ ಆರಂಭವಾಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮದ್ಯಾಹ್ನದ ಮಹಾ ಮಂಗಳ ಆರತಿಯೊಂದಿಗೆ ಪೂರ್ಣಗೊಳ್ಳಲಿದ್ದು , ಬಳಿಕ ಪ್ರಸಾದ ರೂಪದಲ್ಲಿ  ಅನ್ನಸಂತರ್ಪಣೆ ಜರಗಲಿದೆ.

     ಅಪರಾಹ್ನ 2.30 ರ ಬಳಿಕ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲ ಹಾಗೂ ಶ್ರೀ ಸಚ್ಚಿದಾನಂದ ಸರಸ್ವತೀ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಮುಂಬೈ  ಇವರ ಜಂಟಿ ಆಶ್ರಯದಲ್ಲಿ  ಇತ್ತೀಚೆಗೆ ಅಗಲಿದ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು ದಿ.ಕುಕ್ಕೇಹಳ್ಳಿ ವಿಠಲ ಪ್ರಭು ಇವರ ಸ್ಮರಣಾರ್ಥ , ಪೌರಾಣಿಕ ಯಕ್ಷಗಾನ ಕಥಾನಕ ಭೀಷ್ಮ ವಿಜಯ         (ಬಡಗು ತಿಟ್ಟು)  ಆಡಿತೋರಿಸಲಿರುವರು.

ಯಕ್ಷಗಾನದ ಮೊದಲು  ಜರಗಲಿರುವ ಕಿರು ಸಭಾ ಕಾರ್ಯಕ್ರಮದಲ್ಲಿ ಆಮಂತ್ರಿತ ಗಣ್ಯ ಅತಿಥಿಗಳು ಭಾಗವಹಿಸಲಿರುವರು.

ಡೊಂಬಿವಿಲಿ ಪೂರ್ವದ ಭೋಪರ್ ರೋಡ್ , ನಾಂದಿವಲಿ ಯಲ್ಲಿನ ಶ್ರೀ  ವರದಸಿದ್ಧಿ ವಿನಾಯಕ ಸೇವಾಭವನದಲ್ಲಿ ಕಾರ್ಯಕ್ರಮ ಜರಗಲಿದ್ದು  ಭಕ್ತಾಭಿಮಾನಿಗಳು ಹಾಗೂ ಯಕ್ಷಕಲಾ ರಸಿಕ ಪ್ರೇಕ್ಷಕರು ಎರಡೂ ಕಾರ್ಯಕ್ರಮಗಳಿಗೆ ಬಂದು ಭಾಗವಹಿಸ ಬೇಕಾಗಿ  ಆಯೋಜಕರು ಪ್ರಕಟಣೆಯ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.

     ಸುದ್ದಿ ವಿವರ :ಪಿ.ಆರ್.ರವಿಶಂಕರ್

Related posts

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ 2024”

Mumbai News Desk

ಮಾರ್ಚ್ 9 ರಂದು ಕರ್ನಾಟಕ ಸಂಘ ಡೊಂಬಿವಲಿ : ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ ಹಾಗೂ ವೈದ್ಯಕೀಯ ವಿಚಾರ ಸಂಕಿರಣ. 

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ : ಫೆ. 10 ರಂದು 66ನೇ ವಾರ್ಷಿಕೋತ್ಸವ;ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಸಮಾರಂಭ

Mumbai News Desk

ಬೈಂದೂರು – ಕುಂದಾಪುರ ಬಿಲ್ಲವರು ಮುಂಬಯಿ. ಜನವರಿ 19 ರಂದು ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ

Mumbai News Desk

ನ. 26, 27 ಕಾಪುವಿನ ಮೂರೂ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಜಾರ್ದೆ ಮಾರಿಪೂಜೆ

Mumbai News Desk

ಜ13:   ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಕಾರ್ಯಕರ್ತರ ಅಭಿನಂದನೆ ಮಹಾಸಭೆ

Mumbai News Desk