
ಜಗಜ್ಯೋತಿ ಕಲಾವೃಂದ ಮುಂಬೈ ಇದರ 38ನೇ ವಾರ್ಷಿಕೋತ್ಸವ, ಜಗಜ್ಯೋತಿ ಕಲಾ ವೃಂದದ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರಧಾನ ಸಮಾರಂಭವು
ರವಿವಾರ ದಿನಾಂಕ 09.02.2025 ಸಾಯಂಕಾಲ 4.00 ಗಂಟೆಗೆ ದೊಂಬಿವಿಲಿ ಪೂರ್ವ ದತ್ತ ನಗರದ ಲೇವಾ ಭವನದಲ್ಲಿ ಡಾ. ದಿವಾಕರ ಶೆಟ್ಟಿ, ಇಂದ್ರಾಳಿ
(ಕಾರ್ಯಾಧ್ಯಕ್ಷರು – ಕರ್ನಾಟಕ ಸಂಘ, ಡೊಂಬಿವಲಿ) ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಅತಿಥಿಗಳಾಗಿ ಶ್ರೀ ಪ್ರಭಾಕರ ಆರ್. ಶೆಟ್ಟಿ
( ಉಪಾಧ್ಯಕ್ಷರು : ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ), ಅರುಣ ಎಸ್. ಶೆಟ್ಟಿ, ಪಡುಕೂಡುರು
( ಕಾರ್ಯಾಧ್ಯಕ್ಷರು : ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ, ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ) ಯೋಗಿನಿ ಸುಕುಮಾರ್ ಶೆಟ್ಟಿ
(ಕಾರ್ಯಾಧ್ಯಕ್ಷೆ: ಮಹಿಳಾ ವಿಭಾಗ, ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ) ಅಭಿಜ್ಞಾ ಹೆಗ್ಡೆ (ಭರತನಾಟ್ಯ ಕಲಾವಿದೆ) ಉಪಸ್ಥಿತರಿರುವರು.
ಈ ಸಂದರ್ಭ 2024ರ ಅಖಿಲ ಭಾರತ ಮಟ್ಟದ ನಡೆದ ಜಗಜ್ಯೋತಿ ಕಲಾವೃಂದದ ಸುಶೀಲಾ ಸೀತಾರಾಮ ಕಥಾ ಪ್ರಶಸ್ತಿಯನ್ನು ಸ್ಮಿತಾ ಅಮೃತರಾಜ್ ಅವರಿಗೂ ಕಾವ್ಯ ಪ್ರಶಸ್ತಿಯನ್ನು ಅಕ್ಷತಾ ಕೃಷ್ಣಮೂರ್ತಿ ಅವರಿಗೂ ಪ್ರಧಾನಿಸಲಾಗುವುದು.
ಅಂದು ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು :
ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಗಳು
1) ಪೂಜಾ ನೃತ್ಯ : ಕುಮಾರಿ ನಿಶಿಕಾ ಪದ್ಮನಾಭ ಶೆಟ್ಟಿ
2) ಚಿಣ್ಣರ ಬಿಂಬದ ಚಿಣ್ಣರಿಂದ
3) ಪವಿ ಆರ್ಟ್ಸ್ ವಿಜುವಲ್ ಇನ್ಸಿಟ್ಯೂಟ್‌ನ ವಿದ್ಯಾರ್ಥಿಗಳಿಂದ
4) ತುಳು ವೆಲ್‌ಫೇರ್ ಅಸೋಸಿಯೇಷನ್
5) ಶ್ರೀ ವಿಷ್ಣು ಮಂದಿರ (ಸಂಚಾಲಕರು : ಮುಂಬ್ರಾ ಮಿತ್ರ ಭಜನಾ ಮಂಡಳಿ) 6) ಕುಲಾಲ ಸಂಘ ಥಾಣೆ, ಬದ್ಲಾಪುರ, ಭಿವಂಡಿ ಸ್ಥಳೀಯ ಸಮಿತಿಯವರಿಂದ
ಮತ್ತು
ಹೆಜಮಾಡಿ ಮನೋಜಕುಮಾರ್‌ರವರ ಸಂಯೋಜನೆಯಲ್ಲಿ
ತುಳು ವೆಲ್‌ಫೇರ್ ಎಸೋಸಿಯೇಷನ್ ಯಕ್ಷಗಾನ ತರಬೇತಿ ಶಿಬಿರದ ವಿದ್ಯಾರ್ಥಿ ಹಾಗೂ ಮುಂಬಯಿಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ
ಭಾರ್ಗವ ವಿಜಯ್
ಎಂಬ ತುಳು ಯಕ್ಷಗಾನ ಪ್ರಸಂಗವನ್ನು ಆಡಿತೋರಿಸಲಾಗುವುದು.
ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸುವಂತೆ ಸಮಿತಿಯ ಅಧ್ಯಕ್ಷ ರಮೇಶ್ ಎ. ಶೆಟ್ಟಿ
ಕೋಶಾಧಿಕಾರಿ ಚಂದ್ರ ಎನ್. ನಾಯ್, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ ಪಿ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಬಾಬು ಕೆ. ಮೊಗವೀರ, ಸಲಹೆಗಾರರಾದ
ಸುಕುಮಾರ ಎನ್. ಶೆಟ್ಟಿ, ಪ್ರಶಸ್ತಿ ಸಮಿತಿಯ ಸಲಹೆಗಾರ ಶ್ರೀ ಶೇಖರ ಆರ್. ಶೆಟ್ಟಿ, ಇನ್ನ ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.