September 6, 2026
Mumbai News Kannada
ಪ್ರಕಟಣೆ

ನಾಳೆ (ಮಾ.1) ಪನ್ವೇಲ್‌ನಲ್ಲಿ ‘ಕುಲಾಲ ಕ್ರೀಡೋತ್ಸವ – 2026’





ಮುಂಬೈ: ಕುಲಾಲ ಸಂಘ ಮುಂಬೈ ಇದರ ಯುವ ವಿಭಾಗದ ವತಿಯಿಂದ ‘ಕುಲಾಲ ಕ್ರೀಡೋತ್ಸವ – 2026’ ಮಾರ್ಚ್ 1ರಂದು (ನಾಳೆ) ಪನ್ವೇಲ್‌ನ ಸೆಕ್ಟರ್-16ರಲ್ಲಿರುವ ಕರ್ನಾಲ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ (ಕೆ.ಎಲ್.ಇ. ಕಾಲೇಜು ಹತ್ತಿರ) ಹಮ್ಮಿಕೊಳ್ಳಲಾಗಿದೆ.

​ಬೆಳಿಗ್ಗೆ 7:30ರಿಂದ ಸಂಜೆ 6:30ರ ವರೆಗೆ ನಡೆಯಲಿರುವ ಈ ಕ್ರೀಡಾ ಹಬ್ಬವು ಸಂಘದ ಅಧ್ಯಕ್ಷರಾದ ರಘು ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ಹಾಗೂ ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರ ಘನ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಉದ್ಘಾಟನಾ ಸಮಾರಂಭ:

ಕ್ರೀಡೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ನವಿ ಮುಂಬೈ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಭಾಸ್ಕರ್ ಶೆಟ್ಟಿ (ದಕ್ಷಿಣ), ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲಿಯಾನ್, ಜೈ ದೀಪ್ ಕನ್ಸ್ಟ್ರಕ್ಷನ್‌ನ ಮಾಲೀಕರಾದ ಜಗದೀಶ್ ಬಂಜನ್ ಅಂಬರ್ ನಾಥ್ ಮತ್ತು ದಿನಕರ್ ಬೇಲಾಡಿ ಕಂದೇಶ್ವರ ಅವರು ಆಗಮಿಸಲಿದ್ದಾರೆ.

ಸಮಾರೋಪ ಸಮಾರಂಭ:

ಸಂಜೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪನ್ವೇಲ್ ಕಾರ್ಪೊರೇಟರ್ ಸಂತೋಷ್ ಜಿ. ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.

ಕ್ರೀಡಾಕೂಟದ ಮುಖ್ಯಾಂಶಗಳು:

ಈ ಕ್ರೀಡೋತ್ಸವದಲ್ಲಿ 5 ಸ್ಥಳೀಯ ಸಮಿತಿಗಳು ಹಾಗೂ ಕೇಂದ್ರ ಸಮಿತಿಯ ನಡುವೆ ಕ್ರಿಕೆಟ್ ಲೀಗ್ ನಡೆಯಲಿದೆ. ವಿಶೇಷವಾಗಿ 50 ವರ್ಷ ಮೇಲ್ಪಟ್ಟವರಿಗಾಗಿ ಮತ್ತು ವನಿತೆಯರಿಗಾಗಿ ಪ್ರತ್ಯೇಕ ಬಾಕ್ಸ್ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಮಹಿಳೆಯರಿಗಾಗಿ ಥ್ರೋ-ಬಾಲ್ ಹಾಗೂ ಪುಟಾಣಿ ಮಕ್ಕಳಿಗಾಗಿ ವಿವಿಧ ಮನರಂಜನಾ ಕ್ರೀಡೆಗಳು ಜರುಗಲಿವೆ.

ಸಂಘದ ಉಪಾಧ್ಯಕ್ಷರಾದ ಡಿ.ಐ. ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ. ಸಾಲಿಯಾನ್, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ್ ಸಿ. ಮೂಲ್ಯ ಹಾಗೂ ಸುನಿಲ್ ಕುಲಾಲ್, ಕೋಶಾಧಿಕಾರಿ ಜಯ ಅಂಚನ್, ಜೊತೆ ಕೋಶಾಧಿಕಾರಿ ರೇಣುಕಾ ಸಾಲಿಯಾನ್, ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಕೋರಿದ್ದಾರೆ.

​ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರಾದ ಸದಾನಂದ್ ಕುಲಾಲ್, ಆನಂದ್ ಕುಲಾಲ್, ಶಂಕರ್ ವೈ. ಮೂಲ್ಯ, ಉದಯ್ ಅತ್ತಾವರ, ಹರಿಯಪ್ಪ ಮೂಲ್ಯ, ‘ಅಮೂಲ್ಯ’ ತ್ರೈಮಾಸಿಕ ಪತ್ರಿಕೆಯ ಸಂಪಾದಕ ಆನಂದ್ ಬಿ. ಮೂಲ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವೇಣುಗೋಪಾಲ್ ಕರ್ಕೇರಾ ಹಾಗೂ ಎಲ್ಲಾ ಸಮಿತಿಗಳ ಸದಸ್ಯರು, ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.



Related posts

ಶ್ರೀ ಸಾಯಿನಾಥ ಮಿತ್ರ ಮಂಡಳಿಯ ವತಿಯಿಂದ ಆ 15 ರಂದು ಹದಿನೆಂಟನೆಯ ವರ್ಷದ ಸಾಮೂಹಿಕ ಸತ್ಯನಾರಾಯಣ ಮಹಾ ಪೂಜೆ

Mumbai News Desk

ಕರ್ನಾಟಕ ಸಂಘ, ಕಲ್ಯಾಣ: ನ.23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ : ಫೆ. 28ಕ್ಕೆ 50ನೇ ವಾರ್ಷಿಕ ಶನಿ ಮಹಾಪೂಜೆ, ಮಾ.1ರಂದು ಸುವರ್ಣ ಮಹೋತ್ಸವ ಆಚರಣೆ

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk

ಸೆ. 27, ಭಾಯಂದರ್ ಪೂರ್ವ: ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರನ್ನವರಾತ್ರಿ ಮಹಾಪೂಜೆ

Mumbai News Desk

ಫೆ. 11 ರಂದು ಜಗಜ್ಯೋತಿ ಕಲಾವೃಂದ (ರಿ.) ಮುಂಬಯಿ 37ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ.

Mumbai News Desk