23.5 C
Karnataka
April 4, 2025
ಮುಂಬಯಿ

ಕಾಪು ಮೊಗವೀರ ಮಹಿಳಾ ಮಂಡಳಿ : ಹಳದಿ ಕುಂಕುಮ ಕಾರ್ಯಕ್ರಮ




ಮುಖ್ಯವಾಗಿ ಮುಂಬಯಿಯಲ್ಲಿ ನೆಲೆಸಿರುವ ಕಾಪು ಗ್ರಾಮದ ಮೊಗವೀರ ಮಹಿಳೆಯರನ್ನು ಸಂಘಟಿಸಿ ಅವರಿಂದ ಸಮಾಜಮುಖಿ ಸೇವೆಗಳನ್ನು ಮಾಡಿಸುವ ಸದುದ್ದೇಶದಿಂದ ಎರಡು ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿರುವ ಕಾಪು ಮೊಗವೀರ ಮಹಿಳಾ ಮಂಡಳಿ ಮುಂಬಯಿ ಇದರ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವನ್ನು 19.1.2025 ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಜರಗಿಸಲಾಯ್ತು. ಯಶೋಧಾ ಕಾಂಚನ್‌ ಮತ್ತು ಶೋಭಾ ಕರ್ಕೇರರು ದೀಪ ಪ್ರಜ್ವಲಿಸಿ ಅಂದಿನ ಕಾರ್ಯಕ್ರಮದ ಶುಭಾರಂಭ ಮಾಡಿದರು. ವೀರಾವತಿ ಆನಂದ ಸುವರ್ಣರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಯಶೋಧಾ ಕಾಂಚನ್‌, ಶಾರದಾ ಶ್ರೀಯಾನ್‌, ಶೋಭಾ ಮೆಂಡನ್‌, ಹೇಮಾ ಸಾಲ್ಯಾನ್‌ ಮತ್ತು ಅಂಕಿತಾ ಬಂಗೇರರಿಂದ ಪ್ರಾರ್ಥನೆಯಾದ ಬಳಿಕ . ಮಂಡಳಿಯ ಕಾರ್ಯದರ್ಶಿ ಹೇಮಾ ಕೋಟ್ಯಾನ್‌ ಮುಖ್ಯ ಅತಿಥಿ ಹಾಗೂ ನೆರೆದ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶಶಿ ಸಾಲ್ಯಾನ್‌ ಮುಖ್ಯ ಅತಿಥಿಯವರಿಗೆ ಫಲಪುಷ್ಟ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಚಂದ್ರಿಕಾ ಸಾಲ್ಯಾನ್‌ರು ಮಾತನಾಡುತ್ತಾ ಹಳದಿ ಕುಂಕುಮದ ಮಹತ್ವವನ್ನು ತಿಳಿ ಹೇಳಿದರು. ಆ ಬಳಿಕ ಮಾತನಾಡಿದ ಮಂಡಳಿಯ ಅಧ್ಯಕ್ಷೆ ತುಳಸಿ ಸದಾನಂದರು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ ಅದನ್ನು ನಮ್ಮ ಮುಂದಿನ ಜನಾಂಗಕ್ಕೂ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎನ್ನುತ್ತಾ ಮಹಿಳಾ ಮಂಡಳಿಯು ನಡೆಸುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೆ ಕಾಪು ಮೊಗವೀರ ಮಹಾ ಸಭಾ ಮುಂಬಯಿ ಇವರು ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು. ಅವರು ಮುಂದುವರಿದು ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ನಮಗೆ ಯಾವ ಕೆಲಸವೂ ಅಸಾಧ್ಯವಲ್ಲ ಎಂದು ಮಂಡಳಿಗೆ ಹೆಚ್ಚು ಹೆಚ್ಚು ಮಂದಿಯನ್ನು ಸದಸ್ಯರನ್ನಾಗಿಸುವ ಮೂಲಕ ಮಂಡಳಿಯನ್ನು ಆರ್ಥಿಕವಾಗಿ ಬಲಪಡಿಸಬೇಕೆಂದು ಸದಸ್ಯೆಯರನ್ನು ಕೇಳಿಕೊಂಡರು. ಮಂಡಳಿಯ ಸದಸ್ಯೆಯರ ಪೈಕಿ ಕೆಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾ ಮಂಡಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದರು. ತದ ನಂತರ ಮುಖ್ಯ ಅತಿಥಿ ವೀರಾವತಿ ಆನಂದ ಸುವರ್ಣರು ಮಾತನಾಡುತ್ತಾ ಸದಸ್ಯೆಯರ ಉತ್ಸಾಹವನ್ನು ಕಂಡು ನನಗೆ ಅತೀವ ಆನಂದವಾಗುತ್ತಿದೆ. ಇದನ್ನು ನೋಡುವಾಗ ಕಾಪು ಮೊಗವೀರ ಮಹಿಳಾ ಮಂಡಳಿಗೆ ಉಜ್ವಲ ಭವಿಷ್ಯವಿದೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ . ಈ ಉತ್ಸಾಹ, ಹುಮ್ಮಸ್ಸು ಹೀಗೆಯೇ ಮುಂದುವರಿದು ಈ ಮಂಡಳಿಯು ಶುಕ್ಲ ಪಕ್ಷದ ಚಂದ್ರನಂತೆ ಬೆಳೆಯಲಿ ಎಂದು ಹಾರೈ.ಸಿದರು. ರೋಹಿಣಿ ಕರುಣಾಕರ್‌ ವಂದನಾರ್ಪಣೆಗೈದರು. ತುಳಸಿ ಸದಾನಂದ, ರೋಹಿಣಿ ಕರುಣಾಕರ್‌, ಹೇಮಾ ಕೋಟ್ಯಾನ್‌, ಪ್ರತಿಮಾ ಭಾಸ್ಕರ್, ತಾರಾ ಮೆಂಡನ್‌ ಮತ್ತು ಭಾಮಿನಿ ಮೆಂಡನ್‌ ವೇದಿಕೆಯಲ್ಲಿದ್ದರು. ಮಯೂರಿ ತೇಜಸ್‌ ಸಾಲ್ಯಾನ್‌, ಪ್ರಜ್ಞಾ ಶಮಿತ್‌ ಸಾಲ್ಯಾನ್‌ ಮತ್ತು ಬೃಂದಾ ಸಿದ್ಥಾರ್ಥ್‌ರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಉಷಾ ಕರ್ಕೇರ ಹಾಗೂ ರೋಹಿಣಿ ಕರುಣಾಕರ್‌ ಬಿಡಿಸಿದ್ದ ರಂಗೋಲಿ ಎಲ್ಲರ ಮನಸೂರೆಗೊಂಡಿತ್ತು.
ಆರಂಭದಲ್ಲಿ ಸದಸ್ಯೆಯರು ಹಳದಿ ಕುಂಕುಮವನ್ನು ಹಚ್ಚಿಕೊಳ್ಳುವ ಮೂಲಕ ಪರಸ್ಪರರನ್ನು ಅಭಿನಂದಿಸಿ ಸಂಭ್ರಮಿಸಿದರು. .ಈ ನಿಮಿತ್ತ ಎಲ್ಲರಿಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಯ್ತು.
ಆ ಬಳಿಕ ನಡೆದ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಮಂಡಳಿಯ ಎಲ್ಲಾ ಸದಸ್ಯೆಯರೂ ಭಾಗವಹಿಸಿದ್ದು, ಇದರಲ್ಲಿ ಪ್ರಫುಲ್ಲಾ ಸದಾನಂದ ಮತ್ತು ಭಾಮಿನಿ ಮೆಂಡನ್‌ ಬಹುಮಾನ ಗಳಿಸಿದರು. ಕೊನೆಯಲ್ಲಿ ಪ್ರಜ್ಞಾ ಸಾಲ್ಯಾನ್‌ರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವರದಿ: ಸೋಮನಾಥ ಎಸ್‌.ಕರ್ಕೇರ, ಫೋನ್‌: 9819321186

Related posts

ಬೈಂಗನ್ ವಾಡಿ, ಗೋವಂಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರ;ವಿಜೃಂಭಣೆಯ 45 ನೇ ವಾರ್ಷಿಕೋತ್ಸವ: ಕಲ್ಕುಡ -ಕಲ್ಲುರ್ಟಿ- ಗುಳಿಗ ದೈವಗಳ ಕೋಲ

Mumbai News Desk

ಗೋರೆಗಾಂವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ, ಬ್ರಹ್ಮಕಲಶೋತ್ಸವ ವೈದಿಕ ವಿಧಿ ವಿಧಾನಗಳಿಗೆ ಚಾಲನೆ 

Mumbai News Desk

ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ 

Mumbai News Desk

ಬೋರಿವಲಿ ಐ.ಸಿ. ಕಾಲೋನಿ ಮಂಡಳಿಯ 33ನೇ ಗಣೇಶೋತ್ಸವ ಭಕ್ತಿ ಸಂಭ್ರಮದೊಂದಿಗೆ ಆಚರಣೆ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠಕ್ಕೆ ಶೀರೂರು ಮಠಾಧಿಪತಿ, ಪೂಜ್ಯ ವೇದವರ್ಧನತೀರ್ಥ ಶ್ರೀಪಾದರ ಆಗಮನ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಜೈರಾಜ್ ಕುಮಾರ್ ಶೆಟ್ಟಿ ಗೆ ಶೇ 93.6ಅಂಕ.

Mumbai News Desk