
ಡೊಂಬಿವಲಿ :- ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಫೆಬ್ರವರಿ 2 ರವಿವಾರದಂದು ಸಂಜೆ 4 ಗಂಟೆಯಿಂದ ಡೊಂಬಿವಲಿ ಪಶ್ಚಿಮದ ಥಾಕುರ್ ವಾಡಿಯಲ್ಲಿರುವ ವೈಭವ ಮಂಗಲ ಕಾರ್ಯಾಲಯದಲ್ಲಿ ಕಿಕ್ಕಿರಿದು ತುಂಬಿದ ಜನ ಜಂಗೂಲಿಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಪ್ರಾರಂಭದಲ್ಲಿ ಸಾಂಸ್ಕೃತಿಕ ಅಂಗವಾಗಿ ಮೊಗವೀರ ಮಕ್ಕಳ ಸಮೂಹ ನೃತ್ಯ ಪ್ರದರ್ಶನ ಗೊಂಡಿತು. ನಂತರ ಸಭಾ ಕಾರ್ಯಕ್ರಮ ಪ್ರಾರಂಭವಾಗಿ
ಸಭೆಯ ಅಧ್ಯಕ್ಷತೆಯನ್ನು ಸಂಘದ ಮುಖ್ಯ ಕಚೇರಿಯ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆಯವರು ವಹಿಸಿ ನಡೆಸಿಕೊಟ್ಟರು. ಸಂಘದ ಗೌರವ ಅಧ್ಯಕ್ಷರಾದ ಸುರೇಶ್ ಕಾಂಚನ್ ರವರು ಮಾತನಾಡುತ್ತ ಡೊಂಬಿವಲಿ ಸಮಿತಿಯು ಅತೀ ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ನಿರಂತರವಾಗಿ ಮಾಡುತ್ತಿದೆ. ಡೊಂಬಿವಲಿಯ ಮೊಗವೀರ ಸಮಾಜ ಬಾಂದವರನ್ನು ಒಂದೇ ಸೂರಿನಡಿಯಲ್ಲಿ ಒಟ್ಟು ಮಾಡುವ ಕೆಲಸವನ್ನು ಡೊಂಬಿವಲಿ ಸಮಿತಿಯವರು ಮಾಡಿರುವುದು ನಮಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನಿಮ್ಮ ಸಮಾಜಪರ ಕಾರ್ಯಕ್ರಮಕ್ಕೆ ನನ್ನ ಬೆಂಬಲ ಸದಾ ನಿಮ್ಮೊಂದಿಗೆ ಇದೆ. ಇಂತಹ ಒಳ್ಳೆಯ ಕಾರ್ಯಕ್ರಮ ನಮ್ಮ ಡೊಂಬಿವಲಿಯಲ್ಲಿ ಮಾತ್ರ ನಡೆಯುತ್ತಾ ಇದೆ. ನನಗೆ ಇಂದು ಬಿಡುವಿಲ್ಲದಿದ್ದರೂ ನಿಮ್ಮ ಕಾರ್ಯಕ್ರಮಕ್ಕಾಗಿ ನನಗೆ ಬರಲೇ ಬೇಕಾಯಿತು. ಇದು ನಮ್ಮ ಸಂಘದ ಕಾರ್ಯಕ್ರಮ, ಇಂತಹ ಕಾರ್ಯಕ್ರಮ ಹೀಗೆ ಡೊಂಬಿವಲಿಯಲ್ಲಿ ನಿರಂತರ ನಡೆಯುತ್ತಿರಲಿ, ಸಮಾಜಕ್ಕಾಗಿ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ ಎಂದು ನೆರೆದಿರುವ ಎಲ್ಲರಿಗೂ ಶುಭ ಹಾರೈಸಿದರು.



ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿ, BAKUB ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷೆ ಶ್ರೀಮತಿ ಪ್ರವೀಣ ಪ್ರಕಾಶ್ ಶೆಟ್ಟಿಯವರು ಮಾತನಾಡುತ್ತ ಅರಿಶಿಣ ಕುಂಕುಮದ ಬಗ್ಗೆ ಕೆಲವು ಹಿತನುಡಿಗಳನ್ನು ನುಡಿದರು. ಮಹಿಳೆಯರ ಮಾಂಗಲ್ಯ ಸ್ಥಿರವಾಗಿರಲು, ಗಂಡದಿರ ಆಯುಷ್ಯ ವೃದ್ದಿಸಲು ಅರಿಶಿಣ ಕುಂಕುಮವನ್ನು ನಮ್ಮ ಹಿಂದಿನ ಮಹಿಳೆಯರು ಇದನ್ನು ತಮ್ಮ ಗಂಡಂದಿರು ಯುದ್ಧಕ್ಕೆ ಹೋಗುವಾಗ ನಮ್ಮ ಗಂಡಂದಿರಿಗೆ ಜಯವಾಗಲಿ, ಅವರ ಆಯುಷ್ಯ ಹೆಚ್ಚಾಗಲಿ ಎಂದು ಈ ರೀತಿಯ ಅರಿಶಿಣ ಕುಂಕುಮದ ಆಚರಣೆ ಮಾಡುತಿದ್ದರು. ಇಂದು ನಾನು ಮದುವೆಯಾದ ದಿನ. ನನ್ನ ಗಂಡ ನನ್ನ ಹಣೆಗೆ ಇಂದು ಕುಂಕುಮ ಇಟ್ಟ ದಿನ, ನೀವೆಲ್ಲರೂ ಇಂದು ನನಗೆ ಶುಭ ಹಾರೈಸಿದ್ದೀರಿ, ಇದು ನನ್ನ ಭಾಗ್ಯ ಎಂದು ನುಡಿದು, ಈ ಅರಿಶಿಣ ಕುಂಕುಮದಿಂದ ನಿಮ್ಮೆಲ್ಲರ ಮುತೈದೆ ತನವು ಗಟ್ಟಿಯಾಗಿರಲಿ ಎಂದು ಶುಭ ಹಾರೈಸಿದರು.

ವೇದಿಕೆಯ ಇನ್ನೊರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಘದ ಮಾಜಿ ಅಧ್ಯಕ್ಷರಾದ ಮಹಾಬಲ ಕುಂದರ್ ರವರು ಮಾತನಾಡುತ್ತ ಡೊಂಬಿವಲಿ ಸಮಿತಿಯು ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿದೆ. ಸಮಾಜದ ಮಕ್ಕಳ ನೃತ್ಯ ಹಾಗೂ ಮಕ್ಕಳ ಚಟುವಟಿಕೆಗಳನ್ನು ನೋಡುತ್ತಿದ್ದರೆ ಸಮಿತಿಯು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಇಲ್ಲಿ ನೆರೆದಿರುವ ಜನ ಜಂಗೂಳಿಯನ್ನು ನೋಡಿದರೆ ನಮಗೆ ಇನ್ನು ದೊಡ್ಡ ಸಭಾಗ್ರಹದ ಅಗತ್ಯವಿದೆ. ನಿಮ್ಮ ಎಲ್ಲಾ ಕಾರ್ಯಕ್ರಮಕ್ಕೂ ನನ್ನ ಸಹಕಾರ ಸದಾ ಇದೆ ಎಂದು ತಿಳಿಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುದೀಪ ಕುಂದರ್ ಮಾತನಾಡುತ್ತ ಡೊಂಬಿವಲಿ ಸಮಿತಿಯ ಪ್ರತಿಯೊಂದು ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಹಾಗಾಗಿ ಇಲ್ಲಿಯ ಚಿಕ್ಕ ಸಭಾಗ್ರಹದಲ್ಲಿ ಕಾರ್ಯಕ್ರಮ ಮಾಡುವುದು ತುಂಬಾ ಕಷ್ಟ, ಹಾಗಾಗಿ ಎಲ್ಲಾ ಗಣ್ಯರು ಕೈಜೋಡಿಸಿ ನಮಗಾಗಿ ಒಂದು ಸಭಾಗ್ರಹದ ವ್ಯವಸ್ಥೆ ಮಾಡಬೇಕು, ಹಾಗೆಯೇ ಮಹಿಳೆಯರಿಗಾಗಿ ಆಯೋಜಿಸಿದ ಇಂತಹ ಕಾರ್ಯಕ್ರಮದಲ್ಲಿ ಮಹಿಳೆಯರು ಮುಂದೆ ಬರಬೇಕು ಎಂದು ಎಲ್ಲರಿಗೂ ಶುಭ ಹಾರೈಸಿದರು.
ಕಾರ್ಯಕ್ರಮದ ಮದ್ಯೆ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರ ಹಸ್ತದಿಂದ ಬಹುಮಾನವನ್ನು ವಿತರಿಸಲಾಯಿತು ಮತ್ತು ಮಹಿಳೆಯರಿಗಾಗಿ 5 ಲಕ್ಕಿ ಡ್ರಾ ಮಾಡಿ ಅವರಿಗೆ ಬಹುಮಾನ ನೀಡಲಾಯಿತು.








ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ ಶ್ರೀಯುತ ರಾಜು ಮೆಂಡನ್ ವಂಡ್ಸೆಯವರು ಮಾತನಾಡುತ್ತ ನಮ್ಮ ಡೊಂಬಿವಲಿ ಸಮಿತಿಯ ಟೀಮ್ ವರ್ಕ್ ತುಂಬಾ ಚೆನ್ನಾಗಿದೆ, ಪ್ರತಿಯೊಬ್ಬರೂ ಸಹ ಸಮಿತಿಗಾಗಿ ದುಡಿಯುತ್ತಿದ್ದಾರೆ, ಮುಂಬಯಿಯಲ್ಲಿ ನಮಗೆ ಒಂದು ಸಭಾಗ್ರಹದ ಅಗತ್ಯ ನಮಗಿದೆ. ಊರಿನಲ್ಲಿ ದೇವಸ್ಥಾನ ಮತ್ತು 2 ಸಭಾಗ್ರಹ ಆಗಿದೆ, ಹಾಗಾಗಿ ಎಲ್ಲರೂ ಸಮಾಜದ ಒಳಿತಿಗಾಗಿ ದುಡಿಯೋಣ, ಒಬ್ಬರಿಂದ ಸಂಘ ಕಟ್ಟಲು ಸಾಧ್ಯವಿಲ್ಲ, ಎಲ್ಲರೂ ಜೊತೆಗೂಡಿ ಕೆಲಸ ಮಾಡಿದರೆ ಖಂಡಿತವಾಗಿ ನಾವು ಮುಂಬಯಿ ಅಥವಾ ಡೊಂಬಿವಲಿಯಲ್ಲಿ ಒಂದು ಒಳ್ಳೆಯ ಸಭಾಗ್ರಹ ಮಾಡಬಹುದು ಎಂದು ಅರಿಶಿಣ ಕುಂಕುಮ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಶುಭವನ್ನು ಕೋರಿದರು.
ವೇದಿಕೆಯಲ್ಲಿ ಗೌರವ ಅಧ್ಯಕ್ಷರಾದ ಶ್ರೀಯುತ ಸುರೇಶ್ ಕಾಂಚನ್, ಅಧ್ಯಕ್ಷರಾದ ಶ್ರೀಯುತ ರಾಜು ಮೆಂಡನ್ ವಂಡ್ಸೆ, ಶ್ರೀಯುತ ಮಹಾಬಲ ಕುಂದರ್, ಶ್ರೀಮತಿ ಪ್ರವೀಣ ಪ್ರಕಾಶ್ ಶೆಟ್ಟಿ, ಧರ್ಮಶ್ರೀ ರಿಲೀಪ್ ಫೌಂಡೇಶನ್ ಸ್ಥಾಪಕರಾಗಿರುವ ಶ್ರೀಯುತ ನಾಗರಾಜ್ ಸುವರ್ಣ, ಹೋಟೆಲ್ ಉದ್ಯಮಿ ಶ್ರೀಯುತ ರತ್ನಾಕರ ಚಂದನ್, ಮನಸ್ವಿ ಫುಡ್ ಅಂಡ್ ಹಾಸ್ಪಿಟಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಉದ್ಯಮಿ ಶ್ರೀಯುತ ಸುನಿಲ್ ಕುಂದರ್, ಮುಖ್ಯ ಕಚೇರಿಯ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀಯುತ ಗಣೇಶ್ ಮೆಂಡನ್, ಡೊಂಬಿವಲಿ ಸಮಿತಿಯ ಕಾರ್ಯಾಧ್ಯಕ್ಷರಾದ ರಾಜು ಮೊಗವೀರ ತಗ್ಗರ್ಸೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುದೀಪ ಕುಂದರ್ ರವರಿಗೆ ಪುಷ್ಪ ಗೌರವ ನೀಡಿ ಗೌರವಸಲಾಯಿತು. ಅನ್ಯ ಸಂಘ ಸಂಸ್ಥೆಗಳಿಂದ ಆಗಮಿಸಿದ ಗಣ್ಯರಿಗೆ ಪುಷ್ಪ ಗೌರವ ನೀಡಿ ಗೌರವ ಗೌರವಿಸಲಾಯಿತು.

ಅರಿಶಿಣ ಕುಂಕುಮ ಕಾರ್ಯಕ್ರಮಕ್ಕೆ ಶ್ರೀಮತಿ ನಿಶಾ ಅಶೋಕ್ ಮೆಂಡನ್ ರವರ ಜೊತೆ ಗೂಡಿ ಸಮಿತಿಯ ಎಲ್ಲಾ ಮಹಿಳಾ ಸದಸ್ಯರು ಸಹಕರಿಸಿದರು.
ಕಾರ್ಯಕ್ರಮಕ್ಕೆ ಡೊಂಬಿವಲಿ ಸಮಿತಿಯ ಎಲ್ಲಾ ಸದಸ್ಯರು ಸಹಕರಿಸಿದರು ಮತ್ತು ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಉಪ ಕಾರ್ಯಾಧ್ಯಕ್ಷರಾದ ಶ್ರೀಯುತ ಬಾಬು ಮೊಗವೀರರವರು ಮಾಡಿದರೆ, ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಡೊಂಬಿವಲಿಯ ಉತ್ತಮ ಸಂಘಟಕ ಖ್ಯಾತ ನಿರೂಪಣೆಕಾರ ಶ್ರೀಯುತ ವಸಂತ್ ಸುವರ್ಣ ರವರು ಮಾಡಿದರು.
ಅಮೃತ ಮೊಗವೀರ, ಜ್ಯೋತಿ ನಾಯ್ಕ್, ಸಾನಿಕ ಮೊಗವೀರ, ಪೂಜಾ ಬಂಗೇರ ಮತ್ತು ಭಾರತಿ ಮೆಂಡನ್ ಪ್ರಾರ್ಥನೆಯನ್ನು ಮಾಡಿದರೆ, ಸಂಘದ ಕಾರ್ಯದರ್ಶಿ ಶ್ರೀಯುತ ಸಂತೋಷ ಪುತ್ರನ್ ರವರು ವಂದನೆಗೈದರು.