23.5 C
Karnataka
April 4, 2025
ಮುಂಬಯಿ

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ : ಸೀರೆ, ವಜ್ರಾಭರಣ ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ,



ವ್ಯಾಪಾರದ ದೃಷ್ಟಿಯಿಂದ ಒಂದೆಡೆಯಾಗುವುದಕ್ಕೆ  ಅವಕಾಶವೂ ದೊರೆಯುತ್ತದೆ. :ಪ್ರವೀಣ್ ಭೋಜ ಶೆಟ್ಟಿ 

ಮುಂಬಯಿ ಪೆ 5.ಬಂಟರ ಸಂಘ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಪೆ2 ರ ರವಿವಾರದಂದು ಆಯೋಜಿಸಿದ್ದ ಸೀರೆ, ವಜ್ರಾಭರಣ ಹಾಗೂ ಇತರ ಆಕರ್ಷಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಯಶಸ್ವಿಯಾಗಿ ನೆರವೇರಿತು.

      ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಮಾತನಾಡುತ್ತಾ ಮಹಿಳೆಯರು ಅಲಂಕರಿಸಿಕೊಂಡರೆ ಮನೆಗೂ ಶೋಭೆ. ಇಂದಿನ ಈ ಪ್ರದರ್ಶನ ವಿಶೇಷವಾಗಿ‌ಮಹಿಳೆಯರಿಗಾಗಿದ್ದರೂ ಈ ಮೂಲಕ ತುಂಬಾ ಜನರಿಗೆ ಅನುಕೂಲವಾಗಲಿದೆ. ವ್ಯಾಪಾರದ ದೃಷ್ಟಿಯಿಂದ ಒಂದೆಡೆಯಾದರೆ ಮತ್ತೊಂದು ಕಡೆ ಎಲ್ಲರೂ ಸಂತೋಷದಿಂದ ಬೆರೆಯುವ ಅವಕಾಶವೂ ದೊರೆಯುತ್ತದೆ. ಬಂಟರ ಸಂಘದ ಎಲ್ಲ ಕಾರ್ಯಕ್ರಮಗಳು ಯಶಸ್ಸಾಗುತ್ತಿರುವುದು ನನಗೆ ಸಂತಸವನ್ನು ನೀಡಿದೆ.‌ ಅದರಲ್ಲೂ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಕಾರ್ಯಕ್ರಮವೂ ಉತ್ತಮ ರೀತಿಯಲ್ಲಿ ಮೂಡಿಬರುತ್ತಿದೆ. ಇದಕ್ಕೆ ನಿಮ್ಮೆಲ್ಲರ ಶ್ರಮವೇ ಕಾರಣ.‌‌ ಇಂದಿನ ಈ ಪ್ರದರ್ಶನವೂ ಯಶಸ್ಸಾಗಲಿ ಎಂದು ಶುಭ ಹಾರೈಸಿದರು.

     ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ  ಆರ್ ಶೆಟ್ಟಿ ಅವರು ಮಾತನಾಡುತ್ತಾ ಒಂದು ಸುಂದರವಾದ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ. ಶಾಪಿಂಗ್ ಅಂದರೆ ಮಹಿಳೆಯರಿಗೆ ವಿಶೇಷ ಆಕರ್ಷಣೆ. ಇಲ್ಲಿ ನೆರೆದಿರುವ ಮಹಿಳೆಯರ ಸಂಭ್ರಮ ನೋಡುವುದೇ ಖುಷಿ.‌ ನಮ್ಮ  ಪ್ರಾದೇಶಿಕ ಸಮಿತಿಗಳ ಮಹಿಳಾ ವಿಭಾಗ ಇಂತಹ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ತಿಂಗಳ 8 ರಂದು ಮಹಿಳಾ ದಿನಾಚರಣೆಯೊಂದಿಗೆ 25 ವರ್ಷಾಚರಣೆಯನ್ನು ವಿಭಿನ್ನವಾಗಿ ಮಾಡುವ ಆಲೋಚನೆಯಿದೆ. ಇದಕ್ಕೆ  ಎಲ್ಲರೂ ಎಲ್ಲ ವಿಧದ ಸಹಕಾರವನ್ನು ನೀಡಿ ಕಾರ್ಯಕ್ರಮ ಯಶಸ್ಸಾಗುವಂತೆ ಮಾಡಬೇಕು ಎಂದು ಕರೆ ನೀಡಿದರು.

     ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಿಯಾ ವಿಜಯ್ ಶೆಟ್ಟಿ, ರೇಖಾ ಭಾಸ್ಕರ್ ಶೆಟ್ಟಿ, ಸತ್ಯ ಶಾಲಿನಿ ಶೆಟ್ಟಿ ಶುಭ ಹಾರೈಸಿದರು.

   ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ ಅವರು ಮಾತನಾಡುತ್ತಾ ಎಲ್ಲ ಮಹಿಳೆಯರು ಶಾಪಿಂಗ್ ಮಾಡಲು ಉತ್ಸುಕರಾಗಿದ್ದಾರೆ. ಮಹಿಳಾ ವಿಭಾಗದ ಎಲ್ಲ ಕೆಲಸಗಳಿಗೆ ನಮ್ಮ ಪ್ರೋತ್ಸಾಹ  ಇದೆ ಎಂದು ನುಡಿದರು. 

    ಟಿ.ಡಿ.ಎಫ್  ವಜ್ರಾಭರಣ, ಐಸ್ರಾ ಸಾರೀಸ್, ಟೆಂಡರ್ ಫ್ರೆಶ್ ಐಸ್ ಕ್ರೀಮ್, ರೇಣುಕಾ ಸ್ಟೋನ್ಸ್ ಮೊದಲಾದ ವೈವಿಧ್ಯಮಯ ವಸ್ತು ಪ್ರದರ್ಶನ ನಡೆಯಿತು. ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಆಶಾ ಮನೋಹರ ಹೆಗ್ಡೆ, ಮಹಿಳಾ ವಿಭಾಗದ ಕಾರ್ಯದರ್ಶಿ ಆಶಾ ಸುಧೀರ್ ಶೆಟ್ಟಿ, ನೈನಿತಾ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು. 

   ಹೆಚ್ಚಿನ ಜನರು  ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 

ಯುವ ವಿಭಾಗದವರಿಂದ ಮೋಜಿನ ಆಟಗಳು ನೆರೆದವರನ್ನು ರಂಜಿಸಿತು.

ವೇದಿಕೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ ,ಸಲಹೆಗಾರರಾದ ವಜ್ರಾಕ್ಷಿ. ಕೆ ಪೂಂಜಾ , ಮಾಜಿ ಕಾರ್ಯಾಧ್ಯಕ್ಷೆ ಪ್ರಮೀಳಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ ಸ್ವಾಗತಿಸಿದರು.‌ ಮಹಿಳಾ ವಿಭಾಗದ ಉಪಾಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಪ್ರಾರ್ಥನೆ ಹಾಡಿದರು. ಯುವ ವಿಭಾಗದ ಕಾರ್ಯದರ್ಶಿ 

ಕುಮಾರಿ ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ವೃಕ್ಷಾ ಭಂಡಾರಿ ಧನ್ಯವಾದ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಹೈಕೋರ್ಟಿನ ನೋಟರಿ ಯಾಗಿರುವ ಪ್ರಾದೇಶಿಕ ಸಮಿತಿಯ ಸಲಹೆಗಾರ ನ್ಯಾಯವಾದಿ ಆರ್ ಜಿ  ಶೆಟ್ಟಿ ಅವರು ಗೌರವಿಸಲಾಯಿತು,

 ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕೋಶಾಧಿಕಾರಿ ಪ್ರಮೀಳಾ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪಲತಾ ಸೂರಜ್ ಶೆಟ್ಟಿ, ಜೊತೆ ಕೋಶಾಧಿಕಾರಿ ಮಮತಾ ಎಸ್ ಶೆಟ್ಟಿ,  ಯುವ ವಿಭಾಗದ ಅದ್ವಿತ್ ಪೂಂಜಾ ಹಾಗೂ ಯುವ ವಿಭಾಗದ ಪದಾಧಿಕಾರಿಗಳು , 

 ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಸರ್ವ ಪದಾಧಿಕಾರಿಗಳು, ಸದಸ್ಯರು , ಜವಾಭ ನ ಮಹಿಳಾ ವಿಭಾಗದ ಸದಸ್ಯರು ಸಂಘ ಸಂಸ್ಥೆ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಮಹಿಳೆಯರು  ಪಾಲ್ಗೊಂಡಿದ್ದರು.

Related posts

ಕನ್ನಡ ಕಲಾ ಸಮಾಜ (ರಿ) ಮುಂಬಾಯಿ*(ಕೋಟೆ) ಇದರ ಸದಸ್ಯರಿಂದ ಸ್ನೇಹ ಸಮ್ಮಿಲನ “-

Mumbai News Desk

ತುಳುಕೂಟ ಫೌಂಡೇಶನ್ (ರಿ) ನಾಲಾಸೋಪಾರ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ ವಾರ್ಷಿಕೋತ್ಸವ, ಸಮಾರೋಪ,

Mumbai News Desk

ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜ್ ಐರೋಲಿ: ವಿದ್ಯಾರ್ಥಿಗಳಿಗೆ  ಲೀಡರ್ಶಿಪ್ ಬಗ್ಗೆ ಉಪನ್ಯಾಸ. 

Mumbai News Desk

ಕುಲಾಲ ಸಂಘ ಮುಂಬಯಿ  ಇದರ 2024-26 ರ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮ

Mumbai News Desk

ಮಲಾಡ್ ಕನ್ನಡ ಸಂಘ ವಾರ್ಷಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ, ಭಜನೆ

Mumbai News Desk