September 6, 2026
Mumbai News Kannada
ಮುಂಬಯಿ

ಸ್ವಾಮಿ ನಿತ್ಯಾನಂದಮಂದಿರ ಬೊಯಿಸರ್ ನಲ್ಲಿ ದೇವೀ ಜಪಪಾರಾಯಣ ಸಂಪನ್ನ





ಚಿತ್ರ ಹಾಗೂ ಸುದ್ಧಿ : ಪಿ.ಆರ್.ರವಿಶಂಕರ್  8483980035

ಬೊಯಿಸರ್ : 05.02.2025

          ಬೊಯಿಸರ್ ಪಶ್ಚಿಮದಲ್ಲಿನ ಪ್ರತಿಷ್ಟಿತ ಸ್ವಾಮಿ ನಿತ್ಯಾನಂದ ಮಂದಿರದ ಆವರಣದಲ್ಲಿ ಭಕ್ತಾದಿಗಳು     ಶ್ರೀ ದೇವೀ ಜಪಪಾರಾಯಣದ 6 ನೆಯ ವರ್ಷದ ಅನುಷ್ಟಾನವನ್ನು ಇದೇ ಜನೆವರಿ ತಾ.23 ಗುರುವಾರದಂದು ಆರಂಭಿಸಿದ್ದು , ಫೆಬ್ರುವರಿ ತಾ .04 ರಂದು ಸಂಪನ್ನಗೊಂಡಿದೆ.

ಇದರಲ್ಲಿ ಭಾಗವಹಿಸಿದ ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ರಘುರಾಮ್ ಎಮ್.ರೈ ಮಾತನಾಡಿ ” ನಾವು ನಮ್ಮೊಳಗೇ ಇರುವ ಅಸುರೀ ಶಕ್ತಿಗಳಾದ ಆಲಸ್ಯ , ಅಸೂಯೆ , ಅಹಂಕಾರ , ಸಿಟ್ಟು ಇತ್ಯಾದಿಗಳನ್ನು ತೊಡೆದು ಹಾಕಿ ಸಂಸ್ಕಾರಯುತ ಜೀವನ ನಡೆಸುವುದೇ ಆದಿಶಕ್ತಿಯ ಪೂಜೆಯಲ್ಲಿನ ನಿಜ ಅರ್ಥವೆನಿಸಿದೆ ” ಎಂದು ಅಭಿಪ್ರಾಯ ಪಟ್ಟರು.

     ಶ್ರೀ ರಾಮಮಂದಿರದಲ್ಲಿ ದೀಪಪ್ರಜ್ವಲನೆಯೊಂದಿಗೆ ಆರಂಭವಾಗಿ , ಬಳಿಕ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಕಳಶ ಪೂಜೆಯನ್ನು ಶ್ರೀಮತಿ ಪದ್ಮಾವತಿ ಹಾಗೂ ಸತ್ಯಾ ಕೋಟ್ಯಾನ್ ನೆರವೇರಿಸಿದರು.  ಸರ್ವಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ದೀಪಾರಾಧನೆ , ಷೋಡಶ ಪೂಜೆ , ದುರ್ಗಾ ಅಷ್ಟೋತ್ತರ ನಾಮಾರ್ಚನೆಯೊಂದಿಗೆ ಸಂಪನ್ನ ಜಪ ಜರಗಿತು.

ಮಹಿಳಾ ಭಜನಾ ಮಂಡಲಿಯ ವತಿಯಿಂದ ದೇವೀ ಭಜನಾ ಕಾರ್ಯಕ್ರಮವಿತ್ತು.

  ಮಾರನೆಯ ದಿನ ಪ್ರಾತಃ ಕಾಲದಲ್ಲಿ ಜರಗಿದ ಪಂಚದುರ್ಗಾ  ಹವನವನ್ನು ಶ್ರೀನಿವಾಸ್ ಕೋಟ್ಯಾನ್ ದಂಪತಿ ನೆರವೇರಿಸಿದರು. ಪೂರ್ಣಾಹುತಿಯ ಬಳಿಕ ಪಕ್ಕದಲ್ಲಿರುವ ಮಹದೇಶ್ವರ ಮಂದಿರದಲ್ಲಿ ರುದ್ರಾಭಿಷೇಕದೊಂದಿಗೆ    ಕಳಶ ವಿಸರ್ಜನೆ ಕಾರ್ಯಕ್ರಮ ನಡೆಯಿತು.

  ಜಾತಿ ಭಾಷಾ ಭೇದವಿಲ್ಲದೆಯೇ ಸರ್ವಭಕ್ತಾಭಿಮಾನಿಗಳ ಸಹಕಾರದಿಂದ ಜರಗಿದ ಈ ಕಾರ್ಯಕ್ರಮದಲ್ಲಿ 

   ವಿಶ್ವಸ್ಥ ಮಂಡಲಿಯ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್ , ಸತ್ಯಾ ಕೋಟ್ಯಾನ್ , ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ  ರಘುರಾಮ್ ಎಮ್. ರೈ , ಸ್ವಾಮಿ ನಿತ್ಯಾನಂದ  ಭಕ್ತವೃಂದ ಹಾಗೂ ಸದ್ಗುರು ನಿತ್ಯಾನಂದ ಭಜನಾ ಮಂಡಲಿಯ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ವ್ಯವಸ್ಥಾಪನೆಯ ಉಸ್ತುವಾರಿಯಲ್ಲಿ ರಮಾನಂದ ಪೂಜಾರಿ ಸಹಕರಿಸಿದರು.

ಸುದ್ದಿ ವಿವರ : ಪಿ.ಆರ್.ರವಿಶಂಕರ್   8483980035



Related posts

ಗೊರೆಗಾಂವ್ ಕರ್ನಾಟಕ ಸಂಘದ 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ, ಸಮಾರೋಪ ಸಮಾರಂಭ

Mumbai News Desk

ಎಸ್.ಎಸ್.ಸಿ ಪರೀಕ್ಷೆ: ಆದ್ಯ ವಿಜಯ್ ಶೆಟ್ಟಿಗೆ ಶೇ. 95 ಅಂಕ

Mumbai News Desk

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk

ಕುಲಾಲ ಸಂಘ ಮುಂಬಯಿ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ  ಸ್ನೇಹ ಸಮ್ಮಿಲನ, ಸಾಂಸ್ಕೃತಿಕ ವೈಭವ,

Mumbai News Desk

ರಾವಲ್‌ಪಾಡ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದ 40ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣೆ ಶಿಬಿರ

Mumbai News Desk